ರೈತರ ಮಕ್ಕಳಿಗೆ ಶಿಷ್ಯ ವೇತನ : ಸರಕಾರದ ಸೌಲಭ್ಯ ಪಡೆಯೋದು ಹೇಗೆ ಗೊತ್ತಾ ..?

  • ಸುಶ್ಮಿತಾ ಸುಬ್ರಹ್ಮಣ್ಯ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ತಿಳಿಸಿದಂತೆಯೇ ರೈತರ ಮಕ್ಕಳಿಗೆ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಷ್ಯವೇತನವನ್ನು ಜಾರಿ ಗೊಳಿಸಿದ್ದಾರೆ. ಕೃಷಿ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ರಫೀ ಅಹಮದ್ ಎಂ.ಎಸ್ ನಡವಳಿಗಳನ್ನು ಹೊರಡಿಸಿದ್ದಾರೆ. ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಣಯದಂತೆ ಈ ಹೊಸ ಶಿಷ್ಯವೇತನ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದಿದ್ದಾರೆ.

ಈ ಶಿಷ್ಯವೇತನ ಪಡೆಯಲು ವಿದ್ಯಾರ್ಥಿಗಳು ರೈತರ ಮಕ್ಕಳಾಗಿದ್ದು, ಕರ್ನಾಟಕ ರಾಜ್ಯದ ಅನುದಾನದಿಂದ ಪಾವತಿಸುವಂತ ಒಂದು ಶಿಷ್ಯವೇತನಕ್ಕೆ ಮಾತ್ರ ಅರ್ಹರಾಗುತ್ತಾರೆ. ಆದರೆ ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರ್ಯಾಂಕ್‌ ಇತ್ಯಾದಿಗಳ ಆಧಾರದ ಮೇಲೆ ಪಡೆಯುವ ಶಿಷ್ಯವೇತನ, ಪ್ರಶಸ್ತಿ, ಪ್ರತಿಫಲ, ಇವುಗಳನ್ನು ರೈತರ ಮಕ್ಕಳು ಪಡೆದಿದ್ದರೂ, ಈ ರೈತ ಮಕ್ಕಳ ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.

ರೈತರ ಮಕ್ಕಳ ತಂದೆ-ತಾಯಿ ಇಬ್ಬರು ಕೃಷಿ ಜಮೀನಿನ ಒಡೆಯರಾಗಿದ್ದರೇ, ಈ ಯೋಜನೆಯಲ್ಲಿ ಒಂದು ಶಿಷ್ಯವೇತನಕ್ಕೆ ಮಾತ್ರ ರೈತರ ಮಕ್ಕಳು ಅರ್ಹರಾಗಿರುತ್ತಾರೆ. ಶಿಕ್ಷಣದ ಯಾವುದೇ ಕೋರ್ಸಿನ ಸೆಮಿಷ್ಟರ್, ಶೈಕ್ಷಣಿಕ ವರ್ಷಗಳಿಗೆ ಮಿತಿಯಾಗಿರತ್ಕದ್ದು. ಕೋರ್ಸ್‌ನ ಸೆಮಿಸ್ಟರ್ ನಲ್ಲಿ, ಶೈಕ್ಷಣಿಕ ವರ್ಷದಲ್ಲಿ ಅನುತ್ತೀರ್ಣ ಹೊಂದಿ, ಪುನಹ ಆ ಸೆಮಿಸ್ಟರ್, ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸದ ಪುನರಾವರ್ತನೆ ಆದರೇ, ( ಪುನಃ ಪರೀಕ್ಷೆ ತೆಗೆದುಕೊಂಡರೇ ) ವಿದ್ಯಾರ್ಥಿಗಳು ಶಿಕ್ಷವೇತನವನ್ನು ಪಡೆಯಲು ಅರ್ಹರಾಗಿರುವುದಿಲ್ಲ.

ರೈತರ ಮಕ್ಕಳಿಗೆ ಪದವಿಯ ಮುಂಚೆ ಪಿಯುಸಿ, ಐಟಿಐ, ಡಿಪ್ಲೊಮಾ – ವಿದ್ಯಾರ್ಥಿಗಳಿಗೆ ರೂ. 2,500, ವಿದ್ಯಾರ್ಥಿನಿಯರಿಗೆ ರೂ.3,000 ನಿಗದಿ ಪಡಿಸಲಾಗಿದೆ. ಎಲ್ಲಾ ಬಿಎ, ಬಿಎಸ್ಸಿ, ಬಿಕಾಂ ಇತ್ಯಾದಿ ಹಾಗೂ ಎಂಬಿಬಿಎಸ್, ಬಿಇ, ಬಿಟೆಕ್ ಮತ್ತು ವೃತ್ತಿಪರ ಕೋರ್ಸ್ ಹೊರತುಪಡಿಸಿ – ವಿದ್ಯಾರ್ಥಿಗಳಿಗೆ ರೂ.5,000. ವಿದ್ಯಾರ್ಥಿನಿಯರಿಗೆ ರೂ.5,500 ದೊರೆಯುತ್ತದೆ.

ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್, ಬಿ.ಫಾರ್ಮ್, ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ ರೂ.7,500, ವಿದ್ಯಾರ್ಥಿನಿಯರಿಗೆ ರೂ.8,000 ನೀಡಲಾಗುತ್ತದೆ. ಅಲ್ಲದೇ ಎಂಬಿಬಿಎಸ್, ಬಿಇ, ಬಿಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ ರೂ.10,000. ವಿದ್ಯಾರ್ಥಿನಿಯರಿಗೆ ರೂ.11,000 ಪಡೆಯಬಹುದು. ಅಲ್ಲದೇ ಈ ಶಿಷ್ಯವೇತನವನ್ನು ಯಾವುದಾದರೂ ಒಂದು ವಿಧದ ಕೋರ್ಸ್‌ಗೆ ನೀಡಲಾಗುವುದು.

ಇದನ್ನೂ ಓದಿ : ಅನ್ನದಾತರಿಗೆ ಪ್ರಧಾನಿ ಮೋದಿ ಕೊಡ್ತಿದ್ದಾರೆ ಗುಡ್‌ನ್ಯೂಸ್‌ : ರೈತರ ಖಾತೆ ಸೇರುತ್ತೆ 19,500 ಕೋಟಿ

Comments are closed.