ಸ್ಯಾಂಡಲ್ ವುಡ್ (Sandalwood) ನಲ್ಲಿ ತುಪ್ಪದ ಬೆಡಗಿ ಎಂದೇ ಖ್ಯಾತಿಗಳಿಸಿಕೊಂಡ ನಟಿ ರಾಗಿಣಿ ದ್ವಿವೇದಿ (ragini dwivedi) ಕೇವಲ ಚಂದನವನ ಮಾತ್ರವಲ್ಲ ಹಲವು ಭಾಷೆಯಲ್ಲಿ ನಟಿಸೋ ಮೂಲಕ ಬಹುಭಾಷಾ ನಟಿ ಎಂಬ ಖ್ಯಾತಿ ಪಡೆದಿದ್ದಾರೆ. ಸದ್ಯ ಸುದ್ದಿಮಾಡುವಂತ ಪ್ರಾಜೆಕ್ಟ್ ವೊಂದಕ್ಕೆ ಕಾದಿರೋ ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ರಾಗಿಣಿ ಹಾಟ್ ಹಾಟ್ ಪೋಟೋ ಶೂಟ್ ಮೂಲಕ ಪಡ್ಡೆ ಹೈಕಳ ನಿದ್ದೆ ಕದ್ದಿದ್ದಾರೆ.

ತುಪ್ಪಾ ಬೇಕಾ ತುಪ್ಪಾ ಎಂದು ಕನ್ನಡಿಗರ ಮನಗೆದ್ದ ರಾಗಿಣಿ ದ್ವಿವೇದಿ ಕನ್ನಡಕ್ಕೆ ವಲಸೆ ಬಂದರೂ ಕನ್ನಡತಿಯಾಗಿಯೇ ಉಳಿದ ಹೋದ ನಟಿ. 2019 ರಲ್ಲಿ ವೀರಮದಕರಿ ಸಿನಿಮಾದಲ್ಲಿ ಸುದೀಪ್ ಗೆ ( kiccha sudeep ) ಜೋಡಿಯಾಗಿ ಬೋಲ್ಡ್ ನಟನೆ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಯಾದ ರಾಗಿಣಿ ಕಳೆದ 14 ವರ್ಷದಲ್ಲಿ 25 ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ.

ಮಾತ್ರವಲ್ಲ ಕನ್ನಡದ ಜೊತೆ ಜೊತೆಗೆ ಹಿಂದಿ, ಮಲೆಯಾಳಂ, ತೆಲುಗು ಹಾಗೂ ತಮಿಳು ಚಿತ್ರಗಳಲ್ಲೂ ರಾಗಿಣಿ ಬಣ್ಣ ಹಚ್ಚಿದ್ದಾರೆ. ಸುದೀಪ್ ಜೊತೆ ಕೆರಿಯರ್ ಆರಂಭಿಸಿದ ರಾಗಿಣಿ ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಮಾತ್ರವಲ್ಲ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಶಿವ ಸಿನಿಮಾದ ನಟನೆಗಾಗಿ ರಾಗಿಣಿ ಸೈಮಾ ಅವಾರ್ಡ್ ಕೂಡ ಪಡೆದಿದ್ದಾರೆ.
ಇದನ್ನೂ ಓದಿ : Radhika Pandit – Yash : ಯಶ್ ಮನೆಯಲ್ಲಿ ಅದ್ದೂರಿ ಲಕ್ಷ್ಮೀಪೂಜೆ: ಲಕ್ಷ್ಮೀಯಂತೆ ಮಿಂಚಿದ ರಾಧಿಕಾ ಪಂಡಿತ್
ಸಿನಿಮಾಗಳಷ್ಟೇ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್ ಆಗಿರೋ ರಾಗಿಣಿ ಕಳೆದೊಂದು ತಿಂಗಳಿನಿಂದ ಇನ್ ಸ್ಟಾಗ್ರಾಂನಲ್ಲಿ ಸಾಕಷ್ಟು ಹಾಟ್ ಹಾಟ್ ಪೋಟೋಶೂಟ್ ಇಮೇಜ್ ಗಳನ್ನು ಶೇರ್ ಮಾಡ್ತಿದ್ದಾರೆ. ಅಗಸ್ಟ್ ತಿಂಗಳಿನಲ್ಲಿ ಸ್ವಿಮ್ ಶೂಟ್ ನಲ್ಲಿ ತಣ್ಣನೆಯ ನೀರಿಯಲ್ಲಿ ಪಡ್ಡೆಗಳ ಎದೆ ಬಡಿತ ಏರುಪೇರಾಗುವಂತೆ ಪೋಸ್ ಕೊಟ್ಟಿದ್ದ ರಾಗಿಣಿ ಈಗ ಮತ್ತೊಮ್ಮೆ ತಿಳಿನೀರಿನಲ್ಲಿ ಬ್ಲ್ಯಾಕ್ ಸ್ವಿಮ್ ಸೂಟ್ ನಲ್ಲಿ ಬೆಣ್ಣೆ ಮುದ್ದೆಯಂತೆ ಕಂಗೊಳಿಸಿದ್ದಾರೆ.

ಸಖತ್ ಹಾಟ್ ಗೆಸ್ಚರ್ ನಲ್ಲಿ ಪೋಸ್ ಕೊಟ್ಟಿರೋ ರಾಗಿಣಿ, saturdayyy is cominguuuuuu ಎನ್ನುವ ಮೂಲಕ ವಿಕೇಂಡ್ ಮಸ್ತಿ ಮೂಡ್ ನಲ್ಲಿ ಇರೋದಾಗಿ ಹೇಳಿಕೊಂಡಿದ್ದಾರೆ. ರಾಗಿಣಿ ಶೇರ್ ಮಾಡಿರೋ ಈ ಪೋಟೋಗೆ ಸಖತ್ ಲೈಕ್ಸ್ ಹಾಗೂ ಕಮೆಂಟ್ ಹರಿದು ಬಂದಿದೆ. ಕೇವಲ ಹಾಟ್ ಪೋಟೋಸ್ ಮಾತ್ರವಲ್ಲ ಜೀನ್ಸ್, ಸೀರೆ,ಸಲ್ವಾರ್ ಎಲ್ಲದರಲ್ಲೂ ರಾಗಿಣಿ ಅಭಿಮಾನಿಗಳ ಮನಗೆಲ್ಲುವಂತೆ ಪೋಸ್ ನೀಡಿದ್ದಾರೆ.

ನಟಿಯಾಗುವ ಮುನ್ನ ಮಾಡೆಲ್ ಆಗಿದ್ದ ರಾಗಿಣಿ ಫ್ಯಾಶನ್ ಹಾಗೂ ಮಾಡೆಲಿಂಗ್ ನಲ್ಲಿ ಈಗಲೂ ಮಿಂಚುತ್ತಿದ್ದಾರೆ. 2009 ರಲ್ಲಿ ಮುಂಬೈಯಲ್ಲಿ ನಡೆದ ಫೆಮಿನಾ ಮಿಸ್ ಬ್ಯೂಟಿಫುಲ್ ಹೇರ್ ಅವಾರ್ಡ್ ಕೂಡ ಗೆದ್ದಿದ್ದಾರೆ. ಕೇವಲ ನಟಿಯಾಗಿ ಮಾತ್ರವಲ್ಲ ಯೂಟ್ಯೂಬರ್ ಆಗಿಯೂ ಸಹ ಗುರುತಿಸಿಕೊಂಡಿದ್ದು, ಕುಕ್ಕರಿ ವಿಡಿಯೋಗಳ ಮೂಲಕ ರಾಗಿಣಿ ತಮ್ಮ ಕುಕ್ಕಿಂಗ್ ಹವ್ಯಾಸವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : Vijaya Raghavendra – Spandana : ಅಗಲಿಕೆಯ ನಡುವಲ್ಲೇ ಬಂತು ಆನ್ಯಿವರ್ಸರಿ : ಸ್ಪಂದನಾಗೆ ವಿಜಯ್ ರಾಘವೇಂದ್ರ ಭಾವುಕ ವಿದಾಯ
ಫುಡ್ಡಿಯಾಗಿರೋ ರಾಗಿಣಿ ಶೂಟಿಂಗ್ ಹೋದಾಗಲೆಲ್ಲ ಹೊಸ ಹೊಸ ಫುಡ್ ಗಳನ್ನು ಟೆಸ್ಟ್ ಮಾಡ್ತಿರತಾರೇ. ಮೂಲತಃ ಪಂಜಾಬ್ ಗೆ ಸೇರಿದ ರಾಗಿಣಿ ದ್ವಿವೇದಿ ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲಿ. ಬೋಲ್ಡ್ ಹಾಗೂ ಬಿಂದಾಸ್ ನಟನೆಯ ಮೂಲಕವೇ ಲಕ್ಷಾಂತರ ಫ್ಯಾನ್ಸ್ ಗಳನ್ನು ಗಳಿಸಿರೋ ರಾಗಿಣಿ, ನೋಂದಾಯಿತ ಅಭಿಮಾನಿಗಳ ಸಂಘವನ್ನು ಹೊಂದಿರೋ ಏಕೈಕ ನಟಿ. ಇನ್ನು ರಾಗಿಣಿ ಕೇವಲ ನಟಿ ಮಾತ್ರವಲ್ಲ ಸಾಮಾಜಿಕ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ.

ಕರೋನಾ ಹಾಗೂ ಕೊರೋನಾ ಬಳಿಕ ರಾಗಿಣಿ ಆಹಾರ ಪದಾರ್ಥ, ಬಟ್ಟೆ, ಸ್ವೆಟರ್ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಕೆಲಸದಲ್ಲೂ ತೊಡಗಿಸಿ ಕೊಂಡಿದ್ದಾರೆ. ಯೋಗಾಭ್ಯಾಸವನ್ನು ಮಾಡೋ ರಾಗಿಣಿ, ಹಾಟ್ ಹಾಟ್ ಪೋಸ್ ನಲ್ಲಿ ಯೋಗಾಭ್ಯಾಸ ಮಾಡಿ ಯುವ ಹೃದಯಗಳನ್ನು ಗೆದ್ದಿದ್ದಾರೆ .
Kannada Famous Actress ragini dwivedi Latest Photoshoot Goes viral