Vijaya Raghavendra – Spandana : ಅಗಲಿಕೆಯ ನಡುವಲ್ಲೇ‌ ಬಂತು ಆನ್ಯಿವರ್ಸರಿ : ಸ್ಪಂದನಾಗೆ ವಿಜಯ್ ರಾಘವೇಂದ್ರ ಭಾವುಕ ವಿದಾಯ

ಎರಡು ಒಲಿದ ಹೃದಯಗಳು ಒಂದಾದ ಗಳಿಗೆ ಆ ಜೋಡಿಯ ಪಾಲಿಗೆ ಸದಾಸ್ಮರಣಿಯ. ಇಂತಹ ಮಧುರ ಗಳಿಗೆಯಲ್ಲಿ ನಟ ವಿಜಯ್ ರಾಘವೇಂದ್ರ (Vijaya Raghavendra – Spandana Wedding Anniversary) ಒಂಟಿಯಾಗಿ ನಿಂತಿದ್ದಾರೆ. ಪತ್ನಿಯನ್ನು ಕಳೆದುಕೊಂಡ ಕೆಲವೇ ದಿನಗಳಲ್ಲಿ ಮರಳಿ ಬಂದ ವಿವಾಹ ವಾರ್ಷೀಕೋತ್ಸವದ ದಿನ ಚಿನ್ನಾರಿಮುತ್ತ ಪತ್ನಿಗೆ ನೆನಪುಗಳ ತರ್ಪಣ ಬಿಟ್ಟಿದ್ದಾರೆ‌

ಅಗಸ್ಟ್ 26 ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ ಮದುವೆಯಾದ ದಿನ. ಎಲ್ಲ‌ಅಂದುಕೊಂಡಂತೆ ಆಗಿದ್ದರೇ ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ್ ಅದ್ದೂರಿಯಾಗಿ ಮ್ಯಾರೇಜ್ ಆನ್ಯಿವರ್ಸರಿ ಆಚರಿಸಬೇಕಿತ್ತು. ಆದರೆ ವಿಧಿಯಾಟಕ್ಕೆ ಬಲಿಯಾದ ಸ್ಪಂದನಾ ಹೃದಯಾಘಾತದಿಂದ ದೂರ ಬಹುದೂರ ಸಾಗಿದ್ದಾರೆ. ಪುತ್ರ ಶೌರ್ಯ, ಪತಿ ವಿಜಯ್ ರಾಘವೇಂದ್ರ ಹಾಗೂ ಎರಡು ಕುಟುಂಬದ ಸದಸ್ಯರು ಸ್ಪಂದನಾ ನಿಧನದಿಂದ ಅಕ್ಷರಷಃ ಕಣ್ಣೀರಾಗಿ ಮೌನದ ಮೊರೆ ಹೋಗಿದ್ದಾರೆ.

ಈ ಮಧ್ಯೆ ಸದಾ ಪತ್ನಿಯ ಗುಣಗಾನ ಮಾಡುತ್ತಿದ್ದ, ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ವಿಜಯ್ ರಾಘವೇಂದ್ರ್ ವಿವಾಹ ವಾರ್ಷೀಕೋತ್ಸವದಂದು ಪತ್ನಿಗೆ ತಮ್ಮ ಮನದಾಳದ ಮಾತುಗಳನ್ನು ಅಕ್ಷರ ರೂಪದಲ್ಲಿ ಜೋಡಿಸುವ ಮೂಲಕ ಶುಭಾಶಯ ಕೋರಿದ್ದಾರೆ. ಮಾತ್ರವಲ್ಲದೇ ಪುತ್ರ ಶೌರ್ಯನನ್ನು ಬಿಗಿದಪ್ಪುತ್ತಾ, ಸ್ಪಂದನಾ ನೆನಪುಗಳ ಜೊತೆಗೇ ಬದುಕುವ ವಾಗ್ದಾನ ಮಾಡಿದ್ದಾರೆ. ಇನ್ ಸ್ಟಾಗ್ರಾಂ ನಲ್ಲಿ ಸ್ಪಂದನಾ ವಿಜಯ್ ಹಳೆದ ಪೋಟೋಗಳನ್ನು ವಿಜಯ್ ಹಂಚಿಕೊಂಡಿದ್ದಾರೆ.

ಚಿನ್ನಾ, ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ, ಎಲ್ಲೆ ಮೀರಿ ಒಲದ ನೀಡಿದೆ ಎದೆಯ ಅಂತರಾಳದಲಿ, ಬದುಕನ್ನು ಕಟ್ಟಿ ಸರ್ವಸ್ವವಾದೆ, ಉಸಿರಲ್ಲಿ ಬೆರೆತು ಜೀವಂತವಾದೆ, ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು,ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ, ಶೌರ್ಯನಲ್ಲಿ‌ ನಾನಿನ್ನ ಬಿಗಿದಪ್ಪುವಷ್ಟು ಎಂದು ಬರೆದುಕೊಂಡಿದ್ದಾರೆ.

ವಿಜಯ್ ರಾಘವೇಂದ್ರ ಈ ಭಾವುಕ ಬರಹಕ್ಕೆ ಇಡಿ ಸ್ಯಾಂಡಲ್ ವುಡ್ ಕಣ್ಣೀರಾಗಿದ್ದು, ಎಲ್ಲರೂ ಆನ್ಯಿವರ್ಸರಿ ವಿಶ್ ಮಾಡೋದರ ಜೊತೆಗೆ ವಿಜಯ್ ರಾಘವೇಂದ್ರಗೆ ಧೈರ್ಯ ತುಂಬಿ ಸಾಂತ್ವನ ಹೇಳಿದ್ದಾರೆ. ನಟ ವಿಜಯ್ ರಾಘವೇಂದ್ರ ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದು, ಆಕೆಯ ಸಹಕಾರದಿಂದಲೇ ಎಲ್ಲ ಸಾಧನೆ ಸಾಧ್ಯವಾಗಿದೆ ಎಂದು ಸಾಕಷ್ಟು ಭಾರಿ ಹೇಳಿಕೊಂಡಿದ್ದರು. ಇದನ್ನೂ ಓದಿ : Dhruva Sarja – Prerana couple : ವರಮಹಾಲಕ್ಷ್ಮೀ ಹಬ್ಬದ ದಿನದಂದು ಸಿಹಿ ಸುದ್ದಿ ಹಂಚಿಕೊಂಡ ಧ್ರುವ ಸರ್ಜಾ -ಪ್ರೇರಣಾ ದಂಪತಿ

ಅಗಸ್ಟ್ ಮೊದಲ ವಾರದಲ್ಲಿ ಸ್ನೇಹಿತೆಯರ ಜೊತೆಗೆ ಥೈಲ್ಯಾಂಡ್ ಗೆ ತೆರಳಿದ್ದ ಸ್ಪಂದನಾ ಅಲ್ಲಿಯೇ ಹೃದಯಾಘಾತದಿಂದ ನಿಧನರಾಗಿದ್ದರು. ಈಗ ಸ್ಪಂದನಾ ನಿಧನದ 20 ದಿನಗಳ ಬಳಿಕ ವಿಜಯ್ ರಾಘವೇಂದ್ರ ಕುಟುಂಬ ಆನ್ಯಿವರ್ಸರಿ ಆಚರಿಸುತ್ತಿದ್ದು, ವಿಜಯ್ ಭಾವುಕರಾಗಿ ಪತ್ನಿಯನ್ನು ಸ್ಮರಿಸಿದ್ದಾರೆ.

Vijaya Raghavendra – Spandana: Anniversary came in the midst of separation: Vijaya Raghavendra bids emotional farewell to Spandana

Comments are closed.