Kannada Rajyotsava 2022 : ಪುನೀತ್‌ ರಾಜ್‌ಕುಮಾರ್‌ಗೆ ನಾಳೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ

ಬೆಂಗಳೂರು : 67ನೇ ವರ್ಷದ (Puneeth Rajkumar Karnataka Ratna) ಕನ್ನಡ ರಾಜ್ಯೋತ್ಸವನ್ನು ಕನ್ನಡಿಗರು ಸಂಭ್ರಮದಿಂದ ಆಚರಿಸಲು ಸಿದ್ದರಾಗಿದ್ದಾರೆ. ನಾಡಿನಾದ್ಯಂತ ಜನರು ಜಾತಿ ಧರ್ಮ ಬೇಧಭಾವವಿಲ್ಲದೇ ಕೆಂಪು ಮತ್ತು ಹಳದಿ ಧ್ವಜವನ್ನು ಹಾರಿಸುವ ಮೂಲಕ ತಾಯಿ ಭುವನೇಶ್ವರಿಯನ್ನು ಪೂಜಿಸಿ ಸಂಭ್ರಮಿಸುತ್ತಾರೆ. ಈ ಹೊತ್ತಲ್ಲೇ ಕನ್ನಡ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ “ನನ್ನ ನಾಡು ನನ್ನ ಹಾಡು” ಎನ್ನುವ ಶೀರ್ಷಿಕೆಯೊಂದಿಗೆ ಕನ್ನಡ ನಾಡು ನುಡಿಯ ಬಗ್ಗೆ ನಮ್ಮ ಹೆಮ್ಮೆಯ ಕವಿಗಳು ಬರೆದಿರುವ ಆರು ಹಾಡುಗಳನ್ನು ಏಕಕಾಲದಲ್ಲಿ ಹಾಡುವ ಮೂಲಕ ಒಂದು ಕೋಟಿಗೂ ಅಧಿಕ ಜನರಿಂದ “ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಮಾಡುವ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆಯನ್ನು ನೀಡಿದ್ದಾರೆ.

ಈ ಬಾರಿಯ ಕನ್ನಡ ರಾಜ್ಯೋತ್ಸವ ಕನ್ನಡಿಗರ ಪಾಲಿಗೆ ಇನ್ನಷ್ಟು ಸಂತೋಷವನ್ನು ತರಲಿದೆ. ಕರ್ನಾಟಕ ಸರಕಾರದಿಂದ ನಗುಮೊಗದ ಸರದಾರ ಡಾ. ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರ “ಕರ್ನಾಟಕ ರತ್ನ”ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯನ್ನು ಪುನೀತ್‌ ಪತ್ನಿ ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಸ್ವೀಕಾರ ಮಾಡಲಿದ್ದಾರೆ.ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಕರ್ನಾಟಕ ಸರಕಾರವು ಸೂಪರ್‌ ಸ್ಟಾರ್‌ ರಜನಿಕಾಂತ್‌, ಟಾಲಿವುಡ್‌ ನಟ ಜ್ಯೂನಿಯರ್‌ ಎನ್‌ಟಿಆರ್‌ ಹಾಗೂ ಇನ್ಫೋಸಿಸ್‌ ಸಂಸ್ಥೆಯ ಮುಖ್ಯಸ್ಥೆಯಾದ ಸುಧಾಮೂರ್ತಿ ಅವರನ್ನು ಆಹ್ವಾನಿಸಲಾಗಿದೆ. ನವೆಂಬರ್‌ 1 ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಇದರಲ್ಲಿ ರಾಜಕೀಯ ಗಣ್ಯರಾದ ಕರ್ನಾಟಕ ರತ್ನ ಪ್ರಶಸ್ತಿ ಉಸ್ತುವಾರಿ ಸಮಿತಿ ಅಧ್ಯಕ್ಷರಾದ ಆರ್‌ ಅಶೋಕ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್‌ ಕುಮಾರ್‌, ವಿಧಾನಸಭೆ ಸ್ಪೀಕರ್‌ ಕಾಗೇರಿ, ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ : Priyanka Chopra : ಅಭಿಮಾನಿಗಳಿಗೆ ಸಿಹಿಸುದ್ದಿ : 3 ವರ್ಷಗಳ ಬಳಿಕ ಭಾರತಕ್ಕೆ ಬರಲಿದ್ದಾರೆ ಪ್ರಿಯಾಂಕಾ ಚೋಪ್ರಾ

ಇದನ್ನೂ ಓದಿ : Mansore:ತೆರೆಗೆ ಬರಲು ಸಜ್ಜಾಯ್ತು ಮಂಸೋರೆ ನಿರ್ದೇಶನದ ‘19.20.21’

ಇದನ್ನೂ ಓದಿ : Nee Maayeyolagu Maaye Ninnolago Movie:’ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ’ ನವೆಂಬರ್ 4ರಂದು ರಿಲೀಸ್- ಸುನೀಲ್ ಕುಮಾರ್ ಬಸವಂತಪ್ಪ ಚೊಚ್ಚಲ ಸಿನಿಮಾ

ವಿಧಾನಸೌಧದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಜನರ ಸೇರಲಿದ್ದಾರೆ ಎಂದು ಕರ್ನಾಟಕ ರತ್ನ ಪ್ರಶಸ್ತಿ ಉಸ್ತುವಾರಿ ಸಮಿತಿ ಅಧ್ಯಕ್ಷರಾದ ಸಚಿವ ಆರ್‌. ಅಶೋಕ ತಿಳಿಸಿದ್ದಾರೆ. ಹಾಗಾಗಿ ವಿಧಾನಸೌಧ ಸುತ್ತಮುತ್ತ ಡಿಸಿಪಿ ಆರ್‌ ಶ್ರೀನಿವಾಸ ಗೌಡ ನೇತೃತ್ವದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ನ್ನು ವಹಿಸಲಾಗಿರುತ್ತದೆ. ಹಾಗೆ ವಿಧಾನಸೌಧ ಎದುರಿನ ರೋಡ್‌ನ್ನು ನಾಳೆ ಬಂದ್‌ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

Kannada Rajyotsava 2022 Puneeth Rajkumar will receive the Karnataka Ratna Award tomorrow

Comments are closed.