Lip Balm:ಮನೆಯಲ್ಲೇ ಕುಳಿತು ಲಿಪ್ ಬಾಲ್ಮ್ ತಯಾರಿಸಿ

(Lip Balm)ಸಾಮಾನ್ಯವಾಗಿ ಮಹಿಳೆಯರ ಸೌಂದರ್ಯ ವರ್ಧಕಗಳು ಅತಿ ಹೆಚ್ಚು ಬೆಲೆಯನ್ನು ಹೊಂದಿರುತ್ತದೆ. ಅಂದವಾಗಿ ಕಾಣಿಸುವುದಕ್ಕೆ ದುಪ್ಪಟ್ಟು ಹಣವನ್ನು ಖರ್ಚು ಮಾಡಿ ಸೌಂದರ್ಯ ವರ್ಧಕವನ್ನು ಖರೀದಿ ಮಾಡುತ್ತಾರೆ. ಆದರಲ್ಲೂ ಮಹಿಳೆಯರ ಮುಖದಲ್ಲಿ ಸೌಂದರ್ಯವನ್ನು ಹೆಚ್ಚಿಸುವಂತಹ ತುಟಿಗೆ ಹಚ್ಚುವಂತಹ ಬಣ್ಣಗಳಿಗೆ ಅತಿ ಹೆಚ್ಚು ಖರ್ಚು ಮಾಡುತ್ತಾರೆ. ಲಿಪ್‌ ಸ್ಟಿಕ್‌ , ಲಿಪ್ ಬಾಲ್ಮ್ ಗಳೂ ಎಷ್ಟೇ ಬೆಲೆ ಹೆಚ್ಚಾಗಿದ್ದರು ಅದನ್ನು ಖರೀದಿ ಮಾಡುತ್ತಾರೆ. ದುಪ್ಪಟ್ಟು ಹಣವನ್ನು ಖರ್ಚು ಮಾಡಿ ಲಿಪ್‌ ಸ್ಟಿಕ್‌ , ಲಿಪ್ ಬಾಲ್ಮ್ ಖರೀದಿಸುವ ಬದಲು ಮನೆಯಲ್ಲೇ ಇದನ್ನು ತಯಾರಿಸಿಕೊಳ್ಳಬಹುದು. ಇದನ್ನು ಹೇಗೆ ತಯಾರಿಸುವುದು ಎಂಬ ಮಾಹಿತಿಯನ್ನು ತಿಳಿಸಲಾಗಿದೆ.

(Lip Balm)ಬೇಕಾಗುವ ಸಾಮಗ್ರಿಗಳು:

  • ಆಲ್ಕನೆಟ್ ರೂಟ್
  • ಕೊಬ್ಬರಿ ಎಣ್ಣೆ
  • ತುಪ್ಪ
  • ಜೇನುಮೇಣ
  • ವಿಟಮಿನ್ ಇ ಆಯಿಲ್

ಸಣ್ಣ ಬಾಣಲೆಯಲ್ಲಿ 7 ಚಮಚ ಕೊಬ್ಬರಿ ಎಣ್ಣೆ ಹಾಕಿ ಅದಕ್ಕೆ ಒಂದು ಚಮಚ ಆಲ್ಕನೆಟ್ ರೂಟ್ ಬೆರೆಸಿ 5 ನಿಮಿಷ ಬಿಸಿ ಮಾಡಬೇಕು. ನಂತರ ಮತ್ತೊಂದು ಬಾಣಲೆಯಲ್ಲಿ 7 ಚಮಚ ತುಪ್ಪವನ್ನು ಹಾಕಿ ಅದಕ್ಕೆ ಬಿಸಿ ಮಾಡಿಟ್ಟುಕೊಂಡ ಕೊಬ್ಬರಿ ಎಣ್ಣೆ ಮತ್ತುಆಲ್ಕನೆಟ್ ರೂಟ್ ನ್ನು ಬೆರೆಸಬೇಕು. ಆನಂತರ ಅದಕ್ಕೆ 2 ಚಮಚ ಜೇನುಮೇಣ ಸೇರಿಸಿ, ಗ್ಯಾಸ್ ಮೇಲೆ ಬಿಸಿನೀರನ್ನು ಇಟ್ಟುಕೊಂಡು ಅದರೊಳಗೆ ಜೇನುಮೇಣ ಕರಗುವ ವರೆಗೆ ಕಾಯಿಸಬೇಕು. ಜೇನುಮೇಣ ಕರಗಿದ ನಂತರ ಕೆಳಗೆ ಇಳಿಸಿಕೊಂಡು ಅದಕ್ಕೆ ವಿಟಮಿನ್ ಇ ಆಯಿಲ್ ಹಾಕಬೇಕು. ಒಂದುವೇಳೆ ಸುವಾಸನೆ ಭರಿತ ಲಿಪ್ಬಾಂಬ್ ಬೇಕೆಂದರೆ ಅದಕ್ಕೆ ಎರಡು ಮೂರು ಹನಿಗಳಷ್ಟು ಎಸೆಂಶಿಯಲ್ ಆಯಿಲ್ ಸೇರಿಸಿಕೊಳ್ಳಿ. ಇದನ್ನು ಬಿಸಿಲಿನ ಜಾಗದಲ್ಲಿ ಇಡದೆ ಪ್ರಿಡ್ಜನಲ್ಲಿ ಇಟ್ಟುಕೊಂಡರೆ ಸೂಕ್ತವಾಗಿರುತ್ತದೆ.

ಇದನ್ನೂ ಓದಿ:Kannada Rajyotsava 2022 : ಪುನೀತ್‌ ರಾಜ್‌ಕುಮಾರ್‌ಗೆ ನಾಳೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ

ಇದನ್ನೂ ಓದಿ:SSC Constable Recruitment 2022 ; SSC ಕಾನ್ಸ್ಟೇಬಲ್ ಹುದ್ದೆಗೆ ನೇಮಕಾತಿ ಆರಂಭ

ಆಲ್ಕನೆಟ್ ರೂಟ್
ಆಲ್ಕನೆಟ್ ರೂಟ್ ಅನ್ನು ರತನ್‌ ಜೋಟ್‌ ಎಂದು ಇನ್ನೊಂದು ಹೆಸರಿನಿಂದ ಕರೆಯಲಾಗುತ್ತದೆ. ಇದು ನೈಸರ್ಗಿಕ ಬಣ್ಣವಾಗಿದ್ದು, ಆಹಾರಕ್ಕೆ ಬಣ್ಣವನ್ನು ಸೇರಿಸಲು ಬಳಸಲಾಗುತ್ತದೆ. ಮುಕ್ಯವಾಗಿ ಚಿಕನ್‌ ಪದಾರ್ಥಗಳನ್ನು ಮಾಡುವ ಸಂದರ್ಭದಲ್ಲಿ ಇದನ್ನು ಬಳಸಲಾಗುತ್ತದೆ.

ಕೊಬ್ಬರಿ ಎಣ್ಣೆ
ಸಾಮಾನ್ಯವಾಗಿ ಕೊಬ್ಬರಿ ಎಣ್ಣೆಗಳನ್ನು ಅಡುಗೆಯಲ್ಲಿ ಬಳಸುತ್ತಾರೆ. ತ್ವಚೆಗೂ ಹಚ್ಚುವುದರಿಂದ ಕಾಂತಿಯನ್ನು ಕೊಡುತ್ತದೆ. ಪ್ರತಿದಿನ ಮುಖಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಮೇಕಪ್‌ ಒರೆಸುವುದಕ್ಕೂ ಕೂಡ ಕೊಬ್ಬರಿ ಎಣ್ಣೆ ಉಪಯುಕ್ತವಾಗಿದೆ.

prepare lip balm at home

Comments are closed.