ಖ್ಯಾತ ರಂಗಭೂಮಿ ಹಿರಿಯ ಕಲಾವಿದ ರಾಜಾರಾಮ್ ನಿಧನ

ಬೆಂಗಳೂರು : ಹಿರಿಯ ರಂಗಭೂಮಿ ಕಲಾವಿದ,‌‌‌ನಟ ರಾಜಾರಾಮ್ ಅವರು  ರಂಗಭೂಮಿ ಕಲಾವಿದ ರಾಜಾರಾಂ ಅವರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಹಿರಿಯ ಕಲಾವಿದ ರಾಜಾರಾಮ್ ಅವರಿಗೆ 84 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿದ್ದು, ನಂತರದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕನ್ನಡದ ಒಟ್ಟು 62 ಸಿನಿಮಾಗಳಲ್ಲಿ ನಟಿಸಿರುವ ರಾಜಾರಾಮ್ ಪಾಪಪುಣ್ಯ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಎಂಟ್ರಿಕೊಟ್ಟಿದ್ದರು. ವಿಧಾನಸೌಧದಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡಿಕೊಂಡೇ ಸಿನಿಮಾ ಹಾಗೂ ರಂಗಭೂಮಿಯಲ್ಲಿ ರಾಜಾರಾಮ್ ಸಕ್ರೀಯವಾಗಿದ್ದರು. ಇದೀಗ ಹಿರಿಯ ಕಲಾವಿದನ ನಿಧನಕ್ಕೆ ಹಲವು ನಟ, ನಟಿಯರು ಕಂಬನಿ ಮಿಡಿದಿದ್ದಾರೆ.

Comments are closed.