ಗೋವಾ IFFIನಲ್ಲಿ ಕನ್ನಡಿಗ ಅಗ್ನಿ ಪವರ್- ‘ರುಧಿರ್ವನ’ ಸಿನಿಮಾ ಹೌಸ್‌ಫುಲ್

ಗೋವಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಗಾಲಾ ಪ್ರೀಮಿಯರ್ ವಿಭಾಗಕ್ಕೆ ಆಯ್ಕೆಯಾಗಿರುವ ಕನ್ನಡದ ಚಲನಚಿತ್ರ ‘ರುಧಿರ್ವನ’ ಇದೀಗ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ನಾಳೆ ಪ್ರದರ್ಶನಗೊಳ್ಳಲಿರುವ ಈ ಚಿತ್ರದ ಟಿಕೆಟ್‌ಗಳು ಈಗಾಗಲೇ ಸಂಪೂರ್ಣವಾಗಿ ಮಾರಾಟವಾಗಿ ಹೌಸ್‌ಫುಲ್ ಆಗಿರುವುದು ಚಿತ್ರತಂಡಕ್ಕೆ ಭಾರೀ ಸಂತಸ ತಂದಿದೆ. ಕನ್ನಡಿಗ ನಿರ್ದೇಶಕನೊಬ್ಬನ ಚೊಚ್ಚಲ ಸಿನಿಮಾ ಅಂತರಾಷ್ಟ್ರೀಯ ವೇದಿಕೆಯಲ್ಲಿ ಈ ಮಟ್ಟದ ಯಶಸ್ಸು ಸಾಧಿಸಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಕಥಾಹಂದರ ಮತ್ತು ವಿಶೇಷ ತಾರಾಬಳಗ
‘ರುಧಿರ್ವನ’ ಎಂದರೆ ರಕ್ತಸಿಕ್ತವಾದ ಕಾಡು ಎಂಬ ಅರ್ಥವಿದೆ. ಹೆಸರೇ ಸೂಚಿಸುವಂತೆ, ಇದು ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕುರಿಸುವ ಭಯಾನಕ ಕಥಾಹಂದರ (Horror) ಹೊಂದಿರುವ ಚಿತ್ರವಾಗಿದೆ. ಕನ್ನಡಿಗ ನಿರ್ದೇಶಕ ಅಗ್ನಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ನಟಿ ಪವನಾ ಗೌಡ, ಭೀಮ ಪೊಲೀಸ್ ಪಾತ್ರದಲ್ಲಿ ನಟಿಸಿದ್ದ ಪ್ರಿಯಾ ಶಠಮರ್ಷಣ, ಬಲರಾಜವಾಡಿ, ಕೃಷ್ಣ ಹೆಬ್ಬಾಲೆ, ಮೇದಿನಿ ಕೆಳಮನೆ, ಮತ್ತು ಅವಿನಾಶ್ ರೈ ಸೇರಿದಂತೆ ಪ್ರತಿಭಾವಂತ ತಾರಾಬಳಗವಿದೆ. ಸಂದೀಪ್ ವೆಲ್ಲೂರಿ ಛಾಯಾಗ್ರಹಣ ಮತ್ತು ರೋಣದ ಬಕ್ಕೇಶ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕೆ ಮತ್ತಷ್ಟು ವಿಶೇಷ ಸ್ಪರ್ಶ ನೀಡಿದೆ.
ಇದನ್ನೂ ಓದಿ: Smriti Mandhana Wedding: ಟೀಂ ಇಂಡಿಯಾ ಉಪ ನಾಯಕಿಗೆ ನಿಶ್ಚಿತಾರ್ಥ, ಭಾವೀ ಪತಿ ಹೆಸರು ಬಹಿರಂಗ! ಮದುವೆ ಯಾವಾಗ?
ಇದು ‘ಜನರ ಸಿನಿಮಾ’: ವಿಶಿಷ್ಟ ನಿರ್ಮಾಣ ಶೈಲಿ
‘ರುಧಿರ್ವನ’ ಸಿನಿಮಾವು ತನ್ನ ವಿಭಿನ್ನ ಕಥಾಹಂದರ ಮಾತ್ರವಲ್ಲದೆ, ನಿರ್ಮಾಣದ ಹಿಂದಿನ ಪ್ರಯೋಗದಿಂದಲೂ ಗಮನ ಸೆಳೆದಿದೆ. ಇದು ಕ್ರೌಡ್ ಫಂಡೆಂಡ್ ಸಿನಿಮಾವಾಗಿದ್ದು, ನಿರ್ದೇಶಕ ಅಗ್ನಿ ಅವರ ಸ್ನೇಹಿತರು ಹಾಗೂ ಅವರ ಯೂಟ್ಯೂಬ್ ಚಂದಾದಾರರ ಆರ್ಥಿಕ ಸಹಕಾರದಿಂದಾಗಿ ಈ ಸಿನಿಮಾ ತೆರೆಕಾಣುತ್ತಿದೆ. ಪಾಯಿಂಟ್ ಆಫ್ ವೀವ್ ಪಿಕ್ಚರ್ ಹೌಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ಸ್ಯಾಂಗ್ವಿನ್ ಹೋಲ್ಮ್ ಎಂಟರ್ಟೈನ್ಮೆಂಟ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದೆ. ವಿಶ್ವಾದ್ಯಂತ ಮನ್ನಣೆ ಗಳಿಸುತ್ತಿರುವ ಈ ‘ಜನರ ಸಿನಿಮಾ’ ಗಲ್ಲಾಪೆಟ್ಟಿಗೆಯಲ್ಲಿ ಯಾವ ಮಟ್ಟಿಗೆ ಯಶಸ್ಸು ಗಳಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ರುಧಿರ್ವನ’ ಸಿನಿಮಾವು ಕೇವಲ ತನ್ನ ಕಥಾಹಂದರದಿಂದ ಮಾತ್ರವಲ್ಲದೆ, ನಿರ್ಮಾಣದ ಹಿಂದಿನ ಪ್ರಯೋಗದಿಂದಲೂ ಗಮನ ಸೆಳೆದಿದೆ. ಇದು ಕ್ರೌಡ್ ಫಂಡೆಂಡ್ ಸಿನಿಮಾವಾಗಿದ್ದು, ನಿರ್ದೇಶಕ ಅಗ್ನಿ ಅವರ ಸ್ನೇಹಿತರು ಹಾಗೂ ಅವರ ಯೂಟ್ಯೂಬ್ ಚಂದಾದಾರರ ಆರ್ಥಿಕ ಸಹಕಾರದಿಂದಾಗಿ ಈ ಸಿನಿಮಾ ತೆರೆಕಾಣುತ್ತಿದೆ.



