ರಾಜ್ಯ, ದೇಶ ಮಾತ್ರವಲ್ಲ ವಿದೇಶದಲ್ಲೂ ಕಾಂತಾರದ ಹವಾ ಜೋರಾಗಿದೆ. ದೇಶದಲ್ಲೂ ಕೋಟಿ ಕೋಟಿ ಗಳಿಸಿರೋ ಕಾಂತಾರ ವಿದೇಶದಲ್ಲೂ ಡಾಲರ್ಸ್ ಗಳಿಸಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಈ ಮಧ್ಯೆ ಗಳಿಕೆಯ ಜೊತೆ ಚಿತ್ರ ವೀಕ್ಷಣೆಯಲ್ಲೂ ಕಾಂತಾರ ಹೊಸ ದಾಖಲೆ ಬರೆದಿದ್ದು (Kantara breaks KGF record) , ಈ ವಿಚಾರವನ್ನು ಸ್ವತಃ ಹೊಂಬಾಳೆ ಫಿಲ್ಮ್ಸ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಹೌದು ರಿಶಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಕಾಂತಾರ ಸಿನಿಮಾ ಹೊಸ ಹೊಸ ದಾಖಲೆ ಬರೆಯುತ್ತಿದೆ. ಕನ್ನಡದಲ್ಲಿ ಕಾಂತಾರ ಹೊಸ ಮೈಲಿಗಲ್ಲು ನಿರ್ಮಿಸಿರೋದನ್ನು ಸ್ವತಃ ಹೊಂಬಾಳೆ ಫಿಲ್ಸ್ಮ್ ಖಚಿತಪಡಿಸಿದೆ. ಹೊಂಬಾಳೆ ಫಿಲ್ಸ್ಮ್ ಇದುವರೆಗೂ ಕನ್ನಡದಲ್ಲಿ ಸಾಕಷ್ಟು ಸಿನಿಮಾ ನಿರ್ಮಿಸಿದೆ. ಹೊಂಬಾಳೆ ಬ್ಯಾನರ್ ನಲ್ಲಿ ಮೂಡಿ ಬಂದ ಕೆಜಿಎಫ್ ಹಾಗೂ ಕೆಜಿಎಫ್-೨ ಸಿನಿಮಾಗಳು ವಿಶ್ವವನ್ನೇ ಕನ್ನಡ ಚಿತ್ರರಂಗದತ್ತ ಮುಖಮಾಡುವಂತೆ ಮಾಡಿದೆ. ಹಿರಿಯ ನಟ ಜಗ್ಗೇಶ್ ರಿಂದ ಆರಂಭಿಸಿ ರಿಶಬ್ ಶೆಟ್ಟಿಯವರೆಗೆ ಹೊಸ ಮತ್ತು ಹಳೆಯ ನಟರಿಗೆ ಬಿಗ್ ಬಜೆಟ್ ಸಿನಿಮಾ ನಿರ್ಮಿಸಿದ ಹೊಂಬಾಳೆ ಫಿಲ್ಮ್ ಗೆದ್ದಿದೆ.
ಈ ಮಧ್ಯೆ ಇತ್ತೀಚಿಗೆ ಯಂಗ್ ಡೈರೈಕ್ಷರ್ ಹಾಗೂ ಆಕ್ಟರ್ ರಿಶಬ್ ಶೆಟ್ಟಿ ಜೊತೆಗೂ ಹೊಂಬಾಳೆ ಫಿಲ್ಸ್ಮ್ ಕಾಂತಾರ ಒಂದು ದಂತಕತೆ ಎಂಬ ಸಿನಿಮಾ ನಿರ್ಮಿಸಿತ್ತು. ಸಪ್ಟೆಂಬರ್ 30 ರಂದು ತೆರೆ ಕಂಡ ಕಾಂತಾರ ಸಿನಿಮಾ ಈಗ ಹೊಂಬಾಳೆ ಫಿಲ್ಮ್ಸ್ ನಿಂದ ಇದುವರೆಗೂ ತೆರೆಕಂಡ ಸಿನಿಮಾದಲ್ಲಿ ಅತಿ ಹೆಚ್ಚು ವೀಕ್ಷಣೆಕಂಡ ಸಿನಿಮಾ ಕಾಂತಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ವಿಚಾರವನ್ನು ಸ್ವತಃ ಹೊಂಬಾಳೆ ಫಿಲ್ಮ್ಸ್ ಹಾಗೂ ನಿರ್ಮಾಪಕ ವಿಜಯ್ ಕಿರಂಗದೂರು ಕೂಡಾ ಖಚಿತಪಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈವರೆಗೆ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚುಜನ ವೀಕ್ಷಿಸಿದ ಚಿತ್ರ ಹೆಗ್ಗಳಿಕೆ . ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ಕಾಂತಾರ. ನಿಮ್ಮ ಪ್ರೋತ್ಸಾಹ ಕ್ಕೆ ನಾವು ಚಿರ ಋಣಿ ಧನ್ಯವಾದ ಕರ್ನಾಟಕ ಎಂದಿದ್ದಾರೆ.
ಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ ಕಾಂತಾರ ‘..!
— Hombale Films (@hombalefilms) October 24, 2022
ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ..
ಧನ್ಯವಾದ ಕರ್ನಾಟಕ..🙏 #Kantara #DivineBlockbusterKantara pic.twitter.com/i1yr4lSazG
ಇನ್ನು ಸಿನಿಮಾ ಸೃಷ್ಟಿಸುತ್ತಿರುವ ವಿವಾದದ ಬಗ್ಗೆ ಸಿನಿಮಾದಲ್ಲಿ ಅರಣ್ಯಾಧಿಕಾರಿ ಪಾತ್ರದಲ್ಲಿ ಸಂಚಲನ ಮೂಡಿಸಿದ ನಟ ಕಿಶೋರ್ , ನಮ್ಮ ಜನಪದೀಯರ ಕೋಲದ ಭೂತಕ್ಕೂ ನೇಮದ ದೈವಕ್ಕೂ ಧರ್ಮದ ಬಣ್ಣ ಬಳಿಯುತ್ತಿರುವವರಲ್ಲಿ ಕಳಕಳಿಯ ಮನವಿ. ಅದೇ ದೈವದ ವೇಷ ಧರಿಸುವವನನ್ನು ಅಸ್ಪಷ್ಯನೆಂದು ಮನೆಯೊಳಗೆ ಸೇರಿಸದ, ಮನೆಯೊಳಗೆ ಬಂದರೆ ಶುದ್ಧಿ ಮಾಡಿಸುವ ಅಸ್ಪಷ್ಯತೆಯ ಆಚರಣೆಯಲ್ಲಿ ನಮಗೆ ಅಧರ್ಮದ ಬಣ್ಣ ಕಾಣುತ್ತಿಲ್ಲವೇಕರೆ , ಜನರಿಗಾಗಿ ಬಾಂಬು ಸಿಡಿಸಿ ಜೀವತೆತ್ತ ಗರ್ನಾಲು ಸಾಹೇಬನ ಧರ್ಮ ಕಾಣುತ್ತಿಲ್ಲವೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಕಾಂತಾರ ದಿನದಿಂದ ದಿನಕ್ಕೆ ಹೊಸ ಹೊಸ ಆಯಾಮದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.
ಇದನ್ನೂ ಓದಿ : Kantara America : ಅಮೇರಿಕಾದಲ್ಲೂ ದೈವಗಗ್ಗರದ ಅಬ್ಬರ : ಎಂಟೂವರೆ ಕೋಟಿ ಗಳಿಸಿದ ಕಾಂತಾರ
ಇದನ್ನೂ ಓದಿ : ಕಾಂತಾರ ಸಿನಿಮಾ ಮೆಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ : ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯೆ
Kantara breaks KGF record: Official information from Hombale Films