Kantara Copyright Trouble : ಕಾಂತಾರ ವರಾಹಂ ರೂಪಂ ಹಾಡಿಗೆ ಕಾಪಿರೈಟ್ ಸಂಕಷ್ಟ: ಕಾನೂನು ಸಮರಕ್ಕೆ ಮುಂದಾದ ತೈಕುಡಂ ಬ್ರಿಗೇಡ್

ರಾಜ್ಯ ಹಾಗೂ ದೇಶದ ಗಡಿ ದಾಟಿ ವಿಶ್ವದೆಲ್ಲೆಡೆ ಸದ್ದು ಮಾಡ್ತಿರೋ ಕಾಂತಾರ ಸಿನಿಮಾಗೆ ಸಂಕಷ್ಟ(Kantara Copyright Trouble) ಎದುರಾಗಿದ್ದು, ಪ್ರಸಿದ್ಧಿ ಹಾಗೂ ವಿಶ್ವಾಸದ ಉತ್ತುಂಗದಲ್ಲಿದ್ದ ಚಿತ್ರತಂಡಕ್ಕೆ ಮುಜುಗರ ಎದುರಾಗಿದೆ. ಸಿನಿಮಾದ ಹಾಡನ್ನು ಚಿತ್ರತಂಡ‌ಕದ್ದಿದೆ ಎಂಬ ಆರೋಪ ಸಾಮಾಜಿಕ ಜಾಲತಾಣದಲ್ಲಿ (Facebook) ಕೇಳಿ ಬಂದಿದೆ. ರಿಶಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಸಿನಿಮಾ ಕಾಂತಾರಾ ತನ್ನ ವಿಭಿನ್ನ ಕಥಾಹಂದರ , ನಟನೆ,ದೃಶ್ಯ ಕಾವ್ಯ ಹಾಗೂ ಸುಮುಧುರ ಸಂಗೀತದ ಕಾರಣಕ್ಕೆ ಸಖತ್ ಹಿಟ್ ಆಗಿದೆ. ರಿಲೀಸ್ ಆದ 25 ದಿನಕ್ಕೆ ಸಿನಿಮಾ 75 ಕೋಟಿ ಗಳಿಸಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಇಂಥ ಹೊತ್ತಿನಲ್ಲಿ ಕಾಂತಾರ ಚಿತ್ರಕ್ಕೆ (Kantara Movie) ಸಂಕಷ್ಟ ಎದುರಾಗಿದೆ.

ಕಾಂತಾರ ಚಿತ್ರದ ವರಾಹ ರೂಪಂ ಹಾಡನ್ನು ಕಾಪಿ ಮಾಡಲಾಗಿದೆ ಎಂಬ ಆರೋಪ ಚಿತ್ರತಂಡ ಹಾಗೂ ಸಂಗೀತ ನಿರ್ದೇಶಕರ ವಿರುದ್ಧ ಕೇಳಿಬಂದಿದೆ. ಮಲೆಯಾಳಂ ಸಿನಿಮಾ ರಂಗದ ತೈಕುಡಂ ಬ್ರಿಗೇಡ್ ಕಾಂತಾರ ಸಿನಿಮಾದ ವಿರುದ್ಧ ಆರೋಪ ಮಾಡಿದೆ. ನವರಸಂ ಹಾಗೂ ವರಾಹ ರೂಪಂ ಹಾಡಿನ ಸಾಮ್ಯತೆ ಒಂದೇ ಇದೆ. ನಮ್ಮ ನವರಸಂ ಹಾಡನ್ನು ಕಾಂತಾರ ಚಿತ್ರತಂಡ ನಕಲು ಮಾಡಿದೆ ಇದು ಆಡಿಯೋ ಕಾಪಿ ರೈಟ್ಸ್ ಉಲ್ಲಂಘನೆ ಆಗಿದೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ತೈಕುಡಂ ಬ್ರಿಗೇಡ್ ನಾವು ಕಾಂತಾರ ಚಿತ್ರತಂಡದ ವಿರುದ್ದ ಕಾನೂನು ಸಮರ ಮಾಡ್ತಿವಿ ಎಂದಿದ್ದಾರೆ. ಕಾಪಿ ರೈಟ್ಸ್ ವಿಚಾರವಾಗಿ ಸಂಗೀತ ನಿರ್ದೇಶಕ. ಅಜನೀಶ್ ಲೋಕನಾಥ್ ,ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್ ಕಿರಂಗದೂರ್ ಅವರಿಗೆ ಟ್ಯಾಗ್ ಮಾಡಿರುವ ತೈಕುಡಂ ಬ್ರಿಗೇಡ್ ಸೋಷಿಯಲ್ ಮೀಡಿಯಾದಲ್ಲೂ ಅಸಮಧಾನ ಹೊರಹಾಕಿದೆ. ವರಾಹ ರೂಪಂ ಹಾಡು ವೈರಲ್ ಆಗ್ತಿದಂತೆ ಮಲೆಯಾಳಂ ಹಾಡಿನ ನಕಲು ಎಂದಿದ್ದ ನೆಟ್ಟಿಗರು ಟ್ವೀಟ್ ಹಾಗೂ ಪೋಸ್ಟ್ ಹಾಕಿದ್ದರು. ಆದರೆ ಆಗ ಈ ವಿಷ್ಯ ಹೈಪ್ ಪಡೆದುಕೊಂಡಿರಲಿಲ್ಲ. ಈಗ ವರಹಾ ರೂಪಂ ಹಾಡಿಗೆ ಕಾಪಿ ರೈಟ್ ಇಸ್ಯೂ ಆಗಿದ್ದು, ನವರಸಂ ಚಿತ್ರತಂಡ ತಿರುಗಿ ಬಿದ್ದಿದೆ.

ಈ ಹಿಂದೆ ರಿಷಬ್ ಶೆಟ್ಟಿ ಹಾಗೂ ಅಜನೀಶ್ ಕಿರಿಕ್ ಪಾರ್ಟಿ ಚಿತ್ರದಲ್ಲಿ ಶಾಂತಿಕ್ರಾಂತಿ ಹಾಡನ್ನು ಕದ್ದಿದ್ದ ಅರೋಪ ಎದುರಿಸಿದ್ರು. ಈಗ ಮತ್ತೆ ಈ ಜೋಡಿಗೆ ಅದೇ ಸಮಸ್ಯೆ ಎದುರಾಗಿದೆ. ಕಾಂತಾರ ವಿಶ್ವದಾದ್ಯಂತ ಹೆಸರು ಮಾಡ್ತಿರೋ ಹೊತ್ತಲ್ಲಿ ಕೇಳಿ ಬಂದಿರೋ ವಿವಾದ ಚಿತ್ರ ತಂಡಕ್ಕೆ ಮುಜುಗರ ತಂದಿದ್ದು, ಅಭಿಮಾನಿಗಳಿಗೂ ಬೇಸರವಾಗಿದೆ.

ಇದನ್ನೂ ಓದಿ : Kantara breaks KGF record : ಕೆಜಿಎಫ್ ದಾಖಲೆ ಮುರಿದ ಕಾಂತಾರ: ಹೊಂಬಾಳೆ ಫಿಲ್ಮ್ಸ್ ನಿಂದ ಅಧಿಕೃತ ಮಾಹಿತಿ

ಇದನ್ನೂ ಓದಿ : Kantara America : ಅಮೇರಿಕಾದಲ್ಲೂ ದೈವಗಗ್ಗರದ ಅಬ್ಬರ : ಎಂಟೂವರೆ ಕೋಟಿ ಗಳಿಸಿದ ಕಾಂತಾರ

Kantara Varaham Rupam Song Copyright Trouble Thaikkudam Bridge Goes For Legal Battle Kantara Movie

Comments are closed.