Rishi Sunak UK PM : ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ, ಸುಧಾಮೂರ್ತಿ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ

ಲಂಡನ್ : ಕನ್ಸರ್ವೇಟಿವ್ ಪಕ್ಷದ ನಾಯಕ ರಿಷಿ ಸುನಕ್ (Rishi Sunak UK PM) ಅವರು ಬ್ರಿಟನ್ ಪ್ರಧಾನಿ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿಯೋರ್ವರು ಪ್ರಧಾನಿ ಆಗಿ ಆಯ್ಕೆಯಾದಂತಾಗಿದೆ. ಬ್ರಿಟನ್ ನಲ್ಲಿ ಸಂಸದರಾಗಿ ಆಯ್ಕೆಯಾಗಿರುವ ಏಳು ವರ್ಷಗಳಲ್ಲಿಯೇ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ.

ಹಂಗಾಮಿ ಪ್ರಧಾನ ಮಂತ್ರಿ ಲಿಜ್ ಟ್ರಸ್ ಮತ್ತು ರಿಷಿ ಸುನಕ್ ಅವರು ನಾಳೆ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗಲಿದ್ದಾರೆ. ಟ್ರಸ್ ತನ್ನ ರಾಜೀನಾಮೆಯನ್ನು ಔಪಚಾರಿಕವಾಗಿ ಸಲ್ಲಿಸಲಿದ್ದಾರೆ. ಲಿಜ್ ಟ್ರಸ್ ಅಕ್ಟೋಬರ್ 20 ರಂದು ಬ್ರಿಟನ್‌ನ 56 ನೇ ಪ್ರಧಾನ ಮಂತ್ರಿಯಾಗಿ ರಾಜೀನಾಮೆ ಘೋಷಿಸಿದ್ದರು. ಇನ್ನು ರಿಷಿ ಸುನಕ್ ಇನ್ಫೋಸಿಸ್ ಸಂಸ್ಥಾಪಕರ ಅಳಿಯ.

ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಿಷಿ ಸುನಕ್, ಕನ್ಸರ್ವೇಟಿವ್ ಪಕ್ಷದ ರಿಚ್ಮಂಡ್ (ಯಾರ್ಕ್ಸ್) ಯುಕೆ ಸಂಸತ್ತಿನ ಸದಸ್ಯರಾಗಿದ್ದಾರೆ. ರಿಷಿ ಸುನಕ್ ತಾಯಿ ಫಾರ್ಮಸಿಸ್ಟ್ ಆಗಿದ್ದರೆ, ಅವರ ತಂದೆ, ಆಕ್ಸ್‌ಫರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ಪದವೀಧರರು. ಅಲ್ಲದೇ ವೈದ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಯುಕೆ ಆರೋಗ್ಯ ಸಂಸ್ಥೆ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ನೊಂದಿಗೆ ಸಾಮಾನ್ಯ ವೈದ್ಯರು (ಜಿಪಿ)ರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾರಾಯಣಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಮಗಳಾಗಿರುವ ಅಕ್ಷತಾ ಮೂರ್ತಿ ಅವರನ್ನು ಮದುವೆಯಾಗಿರುವ ರಿಷಿ ಸುನಕ್ ಅವರಿಗೆ ಕೃಷ್ಣ ಹಾಗೂ ಅನುಷ್ಕಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಸುನಕ್ ಅವರು 2015 ರಲ್ಲಿ ಮೊದಲ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಇಂಗ್ಲೆಂಡ್ ನಲ್ಲಿ ಮೊದಲ ಬಾರಿಗೆ ಹಿಂದೂ ವ್ಯಕ್ತಿಯೋರ್ವರು ಪ್ರಧಾನಿ ಹುದ್ದೆ ಅಲಂಕರಿಸಲಿದ್ದಾರೆ. ರಿಷಿ ಸುನಕ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಮೊದಲು ತಾಯಿಯ ಔಷಧಾಲಯದಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಔಷಧಾಯವನ್ನು ದೊಡ್ಡ ಮಟ್ಟದ ವ್ಯವಹಾರವನ್ನಾಗಿ ಬೆಳೆಸುವಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದಾರೆ. ಅಲ್ಲದೇ ಶತಕೋಟಿ ಪೌಂಡ್ ಹೂಡಿಕೆಯ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದಾರೆ.

ಇದನ್ನೂ ಓದಿ : Rare Pink Diamond : ಅತ್ಯಂತ ಅಪರೂಪದ ಗುಲಾಬಿ ಬಣ್ಣದ ವಜ್ರ ಆಫ್ರಿಕಾದಲ್ಲಿ ಪತ್ತೆ : ಇದರ ಬೆಲೆ ಎಷ್ಟಿದೆ ಗೊತ್ತಾ

ಇದನ್ನೂ ಓದಿ : Britain PM: ರಿಷಿ ಸುನಕ್ ಹಾದಿ ಮತ್ತಷ್ಟು ಸುಗಮ: ಪಿಎಂ ರೇಸ್‍ನಿಂದ ಹಿಂದೆ ಸರಿದ ಬೋರಿಸ್..!

Rishi Sunak Infosys founder’s son-in-law become UK PM

Comments are closed.