Kantara Hindi Box Office Collections : ಕಾಂತಾರ ಹಿಂದಿ ಬಾಕ್ಸಾಫೀಸ್ ದಾಖಲೆ : ಹೊಸ ಮೈಲಿಗಲ್ಲು ಸೃಷ್ಟಿಸಿದ ರಿಷಬ್ ಶೆಟ್ಟಿ

ಭಾರತೀಯ ಚಿತ್ರರಂಗವೇ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿರುವ ಕಾಂತಾರ ಸಿನಿಮಾ ದಿನಕ್ಕೊಂದು ದಾಖಲೆಯನ್ನು ಉಡೀಸ್ ಮಾಡುತ್ತಿದೆ. ಇದೀಗ ಹಿಂದಿ ಬಾಕ್ಸಾಫೀಸ್ ನಲ್ಲಿ(Kantara Hindi Box Office Collections) ಕಾಂತಾರ ಹೊಸ ದಾಖಲೆ ಬರೆದಿದೆ. ಈಗಾಗಲೇ 42.08 ಕೋಟಿ ರೂಪಾಯಿ ಬಾಚಿರುವ ಸಿನಿಮಾ 50 ಕೋಟಿ ಗಳಿಕೆಯತ್ತ ಮುನ್ನಡೆದಿದೆ. ಈ ಮೂಲಕ ರಿಷಬ್ ಶೆಟ್ಟಿ (Rishabh Shetty) ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.

ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸರಿ ಸುಮಾರು 300 ಕೋಟಿ ರೂ. ಕೆಲಕ್ಷನ್ಸ್ ಮಾಡಿ ಮುನ್ನುಗ್ಗುತ್ತಿದೆ. ಸದ್ಯದಲ್ಲಿಯೇ ದಿ ಕಾಶ್ಮೀರಿ ಫೈಲ್ಸ್ ಕಲೆಕ್ಷನ್ಸ್ ಮಾಡಿರುವ 340 ಕೋಟಿ ದಾಖಲೆಯನ್ನು ಶೀಘ್ರದಲ್ಲಿಯೇ ಉಡೀಸ್ ಮಾಡಲಿದೆ. ಕರಾವಳಿಯ ಭೂತಾರಾಧನೆ, ದೈವಾರಾಧನೆಯ ಕಥಾ ಹಂದರವನ್ನು ಹೊಂದಿರುವ ಸಿನಿಮಾ ಪ್ರಕೃತಿ ಹಾಗೂ ಮನುಷ್ಯನ ನಡುವಿನ ಸಂಘರ್ಷವನ್ನು ತೆರೆದಿಟ್ಟಿತ್ತು. ಸಿನಿಮಾವನ್ನು ಕರ್ನಾಟಕದ ಮಾತ್ರವಲ್ಲ ವಿಶ್ವದ ಸಿನಿ ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದರು. ಕನ್ನಡ ಭಾಷೆಯಲ್ಲಿಯೇ ತೆರೆಕಂಡ ಸಿನಿಮಾ ಕೇವಲ ಎರಡೇ ವಾರಗಳಲ್ಲಿ ಇತರ ಭಾಷೆಗಳಿಗೂ ಡಬ್ ಆಗಿತ್ತು.

ಕನ್ನಡ ಸಿನಿಮಾ ಇತಿಹಾಸದಲ್ಲಿಯೇ ಅತೀ ಹೆಚ್ಚು ಗಳಿಕೆಯ ಸಿನಿಮಾ ಅನ್ನೋ ಖ್ಯಾತಿಗೆ ಪಾತ್ರವಾಗಿರುವ ಕಾಂತಾರ ಇದೀಗ ಹಿಂದಿ ಭಾಷೆಯಲ್ಲಿಯೂ ಮೋಡಿ ಮಾಡಿದೆ. ಈಗಾಗಲೇ ಸಿನಿಮಾ ಮೊದಲ ದಿನವೇ 1.27 ಕೋಟಿ ಬಾಚಿಕೊಂಡಿತ್ತು. ಎರಡನೇ ದಿನದ ಸಂಗ್ರಹ 2.75 ಕೋಟಿ ಹಾಗೂ ಮೂರನೇ ದಿನ 3.5 ಕೋಟಿ.ಗಳಿಕೆ ಮಾಡಿದೆ. ಇದುವರೆಗೂ ಹಿಂದಿ ಬಾಕ್ಸಾಫೀಸ್ ನಲ್ಲಿ ಕಾಂತಾರ ಸಿನಿಮಾ 42.08 ಕೋಟಿ ರೂ ಗಳಿಕೆ ಮಾಡಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್, ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರು ಸಿನಿಮಾವನ್ನು ನೆಚ್ಚಿಕೊಂಡಿದ್ದಾರೆ. IMDb ಇತ್ತೀಚೆಗೆ ಬಿಡುಗಡೆ ಮಾಡಿದ ಭಾರತದ ಪ್ರಸ್ತುತ ಟಾಪ್ 250 ಚಲನಚಿತ್ರಗಳ ಪಟ್ಟಿಯಲ್ಲಿ ಕಾಂತಾರ ನಂ. 1 ಸ್ಥಾನದಲ್ಲಿದೆ. ಕಡಿಮೆ ಬಜೆಟ್ ನಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ತೆರೆದಿಟ್ಟಿದೆ. ವಿಶ್ವದಾದ್ಯಂತ ಜನರು ಕಾಂತಾರ ಸಿನಿಮಾವನ್ನು ನೆಚ್ಚಿಕೊಂಡಿದ್ದಾರೆ. ಅದ್ರಲ್ಲೂ ಮುಂಬೈ, ಮಹಾರಾಷ್ಟ್ರ, ದೆಹಲಿ ಚಿತ್ರಮಂದಿರಗಳಲ್ಲಿಯೂ ಇಂದಿಗೂ ಹೌಸ್ ಪುಲ್ ಪ್ರದರ್ಶನವನ್ನು ಕಾಣುತ್ತಿದೆ.

ಹಿಂದಿ ಬಾಕ್ಸಾಫೀಸ್ ನಲ್ಲಿ ಕಾಂತಾರ ಗಳಿಗೆ (ಅಕ್ಟೋಬರ್ 17-ನವೆಂಬರ್ 2)

ಸೋಮವಾರ, ಅಕ್ಟೋಬರ್ 17 – 1.75 ಕೋಟಿ ರೂ
ಅಕ್ಟೋಬರ್ 18 ಮಂಗಳವಾರ – 1.88 ಕೋಟಿ ರೂ
ಅಕ್ಟೋಬರ್ 19 ಬುಧವಾರ – 1.95 ಕೋಟಿ ರೂ
ಅಕ್ಟೋಬರ್ 20 ಗುರುವಾರ – 1.90 ಕೋಟಿ ರೂ
ಶುಕ್ರವಾರ, ಅಕ್ಟೋಬರ್ 21 – 2.05 ಕೋಟಿ ರೂ
ಶನಿವಾರ, ಅಕ್ಟೋಬರ್ 22 – 2.55 ಕೋಟಿ ರೂ
ಭಾನುವಾರ, ಅಕ್ಟೋಬರ್ 23 – 2.65 ಕೋಟಿ ರೂ
ಸೋಮವಾರ, ಅಕ್ಟೋಬರ್ 24 – 1.90 ಕೋಟಿ ರೂ
ಅಕ್ಟೋಬರ್ 25 ಮಂಗಳವಾರ – 2.35 ಕೋಟಿ ರೂ
ಬುಧವಾರ, ಅಕ್ಟೋಬರ್ 26 – 2.60 ಕೋಟಿ ರೂ
ಗುರುವಾರ, ಅಕ್ಟೋಬರ್ 27 – 2.60 ಕೋಟಿ ರೂ
ಶುಕ್ರವಾರ, ಅಕ್ಟೋಬರ್ 28 – 2.75 ಕೋಟಿ ರೂ
ಶನಿವಾರ, ಅಕ್ಟೋಬರ್ 29 – 4.1 ಕೋಟಿ ರೂ
ಭಾನುವಾರ, ಅಕ್ಟೋಬರ್ 30 – 4.4 ಕೋಟಿ ರೂ
ಸೋಮವಾರ, ಅಕ್ಟೋಬರ್ 31 – 2.3 ಕೋಟಿ ರೂ
ನವೆಂಬರ್ 1 ಮಂಗಳವಾರ – 2.3 ಕೋಟಿ ರೂ
ಬುಧವಾರ, ನವೆಂಬರ್ 2 – 2.05 ಕೋಟಿ ರೂ
ಒಟ್ಟು – 42.08 ಕೋಟಿ ರೂ

ಹೊಂಬಾಳೆ ಫೀಲಂಸ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಂಡಿರುವ ಕಾಂತಾರ ಸಿನಿಮಾ ಈಗಾಗಲೇ ಕೆಜಿಎಫ್, ಬಾಹುಬಲಿ ಸೇರಿದಂತೆ ಹಲವು ಸಿನಿಮಾಗಳ ದಾಖಲೆಯನ್ನು ಬ್ರೇಕ್ ಮಾಡಿದೆ. ಕನ್ನಡ ಆವೃತ್ತಿಯಲ್ಲಿ ಕಾಂತಾರ ಸೆಪ್ಟೆಂಬರ್ 30 ಹಾಗೂ ಹಿಂದಿ ಆವೃತ್ತಿಯಲ್ಲಿ ಅಕ್ಟೋಬರ್ 14 ರಂದು ಸಿನಿಮಾ ಬಿಡುಗಡೆ ಆಗಿತ್ತು. ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್ ಕುಮಾರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್ ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿ ಬಣ್ಣಹಚ್ಚಿದ್ದರು.

ಇದನ್ನೂ ಓದಿ : Kantara : ಕಾಂತಾರ ಸಿನಿಮಾ ನೋಡುತ್ತಿದ್ದ ಮಹಿಳೆಯ ಮೇಲೆ ದೈವ ಆವಾಹನೆ

ಇದನ್ನೂ ಓದಿ : Kantara Movie : ಕಾಂತಾರ ಪ್ರೇಮಿಗಳಿಗೆ ಸಿಹಿಸುದ್ದಿ: ಬಿ ಟೌನ್ ಗೆ ಎಂಟ್ರಿಕೊಡ್ತಿದೆ ‘ಒಂದು ದಂತಕತೆ’

Kantara Hindi Box Office Collections 50 Crore Rishabh Shetty Creates New Milestones

Comments are closed.