ಭಾನುವಾರ, ಏಪ್ರಿಲ್ 27, 2025
HomeCinemaKanthara Movie : ದಾಖಲೆ‌‌ ಮೊತ್ತಕ್ಕೆ ಕಾಂತಾರ ರೈಟ್ಸ್ ಸೇಲ್: ಓಟಿಟಿಯಲ್ಲೂ ಗೆದ್ದ ರಿಷಬ್ ಶೆಟ್ಟಿ

Kanthara Movie : ದಾಖಲೆ‌‌ ಮೊತ್ತಕ್ಕೆ ಕಾಂತಾರ ರೈಟ್ಸ್ ಸೇಲ್: ಓಟಿಟಿಯಲ್ಲೂ ಗೆದ್ದ ರಿಷಬ್ ಶೆಟ್ಟಿ

- Advertisement -

Kanthara Movie OTT : ದಸರಾ ಹೊತ್ತಿನಲ್ಲಿ ತೆರೆಗೆ ಬಂದ ಕಾಂತಾರ ಸಿನಿಮಾ ಮೋಡಿ‌ ಮಾಡ್ತಿದೆ. ಕೋಟಿ ಕೋಟಿ ಆದಾಯ ಗಳಿಸ್ತಿರೋ ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಪ್ರಚಾರವೂ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ಕಾಂತಾರ (Kanthara Movie)ಅಂಗಳದಿಂದ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ಕಾಂತಾರ ಕೇವಲ ಬಾಕ್ಸಾಫೀಸ್ ಮಾತ್ರವಲ್ಲ ಸ್ಯಾಟ್ ಲೈಟ್ ರೈಟ್ಸ್ ಹಾಗೂ ಓಟಿಟಿಯಲ್ಲೂ ಸಖತ್ ಸದ್ದು ಮಾಡಿದೆ.

ಕೆಜಿಎಫ್-೨ , ಕೆಜಿಎಫ್ , ರಾಘವೇಂದ್ರ್ ಸ್ಟೋರ್ ಸೇರಿದಂತೆ ಹಲವು ಹಿಟ್ ಸಿನಿಮಾವನ್ನು ಕನ್ನಡಕ್ಕೆ ನೀಡಿದ ಹೊಂಬಾಳೆ ಫಿಲ್ಮ್ಸ್ ಈ ವರ್ಷ ಕಾಂತಾರ ಸಿನಿಮಾ(Kanthara Movie)ದ ಮೂಲಕ ಮೋಡಿ ಮಾಡಿದೆ. ಸಖತ್ ಸದ್ದು ಮಾಡ್ತಿರೋ ಈ ಸಿನಿಮಾ ಕೋಟಿ ಕ್ಲಬ್ ಸೇರಿದೆ. ಇದರ ಮಧ್ಯೆ ಮತ್ತಷ್ಟು ದಾಖಲೆ‌ಬರೆಯಲು ಸಜ್ಜಾಗಿರೋ ಕಾಂತಾರ ದಾಖಲೆಯ‌ಮೊತ್ತಕ್ಕೆ ಓಟಿಟಿ ಫ್ಲ್ಯಾಟ್ ಫಾರಂಗೆ ಸೇಲ್ ಆಗಿದೆಯಂತೆ‌. ಸಾಮಾನ್ಯವಾಗಿ ಸಿನಿಮಾ ರಿಲೀಸ್ ಗೂ ಮುನ್ನವೇ ಸ್ಯಾಟ್ ಲೈಟ್ ಮತ್ತು ಓಟಿಟಿ ರೈಟ್ಸ್ ಸೇಲ್ ಆಗೋದು ವಾಡಿಕೆ. ಆದರೆ ಕಾಂತಾರದ ಬಗ್ಗೆ ವಿಶೇಷ ನೀರಿಕ್ಷೆ ಇದ್ದಿದ್ದರಿಂದಲೋ ಏನೋ ಹೊಂಬಾಳೆ ಫಿಲ್ಮ್ಸ್ ರೈಟ್ಸ್ ಗಳನ್ನು ಸೇಲ್ ಮಾಡಿರಲಿಲ್ಲ ಎನ್ನಲಾಗಿದೆ. ಈಗ ಕರ್ನಾಟಕ, ದೇಶ ಮಾತ್ರವಲ್ಲ‌ ವಿದೇಶದಲ್ಲೂ ಕಾಂತಾರ ಸಿನಿಮಾ ಪ್ರದರ್ಶನ ಯಶಸ್ವಿಯಾಗಿ ನಡೆದಿದ್ದು, ಸಿನಿಮಾದ ಮೇಲಿನ ನೀರಿಕ್ಷೆ ಹೆಚ್ಚಿದೆ.

ಇದನ್ನೂ ಓದಿ : Dhruva Sarja : ಅಜ್ಜಿ,ಅಣ್ಣನ ಅಗಲಿಕೆ ಕಾಡ್ತಿದೆ: ಅದ್ದೂರಿ ಬರ್ತಡೇ ಬೇಡ ಎಂದ ಧ್ರುವ ಸರ್ಜಾ

ಇದನ್ನೂ ಓದಿ : Rayan Raj Sarja : ಅಪ್ಪು ಕಂಡು ರಾಯನ್ ರಾಜ್ ಸರ್ಜಾ ಏನಂದ್ರು ಗೊತ್ತಾ? ಇಲ್ಲಿದೆ ಎಕ್ಸಕ್ಲೂಸಿವ್ ವಿಡಿಯೋ

ಹೀಗಾಗಿ ಈಗ ಕಾಂತಾರ ಸ್ಯಾಟ್ ಲೈಟ್ ರೈಟ್ಸ್ ಹಾಗೂ ಓಟಿಟಿಗೆ (Kanthara Movie OTT) ಸಾಕಷ್ಟು ಬೆಲೆ ಬಂದಿದೆಯಂತೆ. ಸ್ಟಾರ್ ಸುವರ್ಣ ಚಾನೆಲ್ ಈಗ ಕಾಂತಾರ ಸಿನಿಮಾದ ಸ್ಯಾಟಲೈಟ್ ರೈಟ್ಸ್ ಖರೀದಿಸಿದೆ. ಅಂದಾಜು 6-7 ಕೋಟಿ ರೂಪಾಯಿಗೆ ಸ್ಟಾರ್ ಸುವರ್ಣ ಸಿನಿಮಾ ಸೇಲ್ ಆಗಿದೆಯಂತೆ. ಇನ್ನು ಕೇವಲ ಸ್ಯಾಟ್ ಲೈಟ್ ರೈಟ್ಸ್ ಮಾತ್ರವಲ್ಲ ಓಟಿಟಿ ಫ್ಲ್ಯಾಟ್ ಫಾರಂನಲ್ಲೂ ಕಾಂತಾರ ಭಾರಿ ಬೇಡಿಕೆಯಲ್ಲಿದೆ. ಕಾಂತಾರ ಖರೀದಿಗೂ ಪೈಪೋಟಿ ಇತ್ತು. ಆದರೆ ಎಲ್ಲರನ್ನೂ ಹಿಂದಿಕ್ಕಿ ಅಮೇಜಾನ್ ಪ್ರೈಂ ,7 ಕೋಟಿ ರೂಪಾಯಿಗೆ ಕಾಂತಾರ ರೈಟ್ಸ್ ಪಡೆದುಕೊಂಡಿದೆ. ಇನ್ನು ಕಳೆದ ಮೂರು ದಿನಗಳಿಂದ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಂತಾರ ನಾಲ್ಕನೇ ದಿನ ಸುಮಾರು ಆರು ಕೋಟಿ ಗಳಿಕೆ‌ಕಂಡಿದ್ದು ಒಟ್ಟು ಕಾಂತಾರ ಗಳಿಕೆ 23 ಕೋಟಿ ದಾಟಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : Sarja family : ಸರ್ಜಾ ಫ್ಯಾಮಿಲಿಗೂ ಅಕ್ಟೋಬರ್ ಗೂ ಇದೆ ವಿಶೇಷ ನಂಟು ; ಇದು ಸರ್ಜಾ ಕುಟುಂಬದ ಸ್ಪೆಶಲ್ ಸ್ಟೋರಿ

Kantara rights sale for record amount: Rishabh Shetty also won in OTT

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular