Sarfaraz Khan : ಭಾರತ ತಂಡದಲ್ಲಿ ಸ್ಥಾನ ಪಡೆಯಲು ಈ ಆಟಗಾರ ಇನ್ನೆಷ್ಟು ಶತಕ ಹೊಡೆಯಬೇಕು ?

ಬೆಂಗಳೂರು: Sarfaraz Khan : ರಣಜಿ ಫೈನಲ್’ನಲ್ಲಿ ಶತಕ, ದುಲೀಪ್ ಟ್ರೋಫಿ ಫೈನಲ್’ನಲ್ಲಿ ಶತಕ, ಇರಾನಿ ಕಪ್ ಪಂದ್ಯದಲ್ಲಿ ಶತಕ.. ಕಳೆದ ಹತ್ತೇ ತಿಂಗಳುಗಳಲ್ಲಿ ಆರು ಶತಕಗಳು. ಭಾರತ ತಂಡದಲ್ಲಿ ಸ್ಥಾನ ಪಡೆಯಲು ಇಷ್ಟು ಸಾಕಲ್ಲವೇ..? ಆದರೆ ಮುಂಬೈನ ಯುವ ಬಲಗೈ ಬ್ಯಾಟ್ಸ್’ಮನ್ ಸರ್ಫರಾಜ್ ಖಾನ್(Sarfaraz Khan)ದೇಶೀಯ ಕ್ರಿಕೆಟ್’ನಲ್ಲಿ ರನ್ ಹೊಳೆಯನ್ನೇ ಹರಿಸಿದರೂ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿಲ್ಲ.

ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಇತ್ತೀಚೆಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ರೋಹಿತ್ ಶರ್ಮಾ ನಾಯಕತ್ವದ ತಂಡ ಐಸಿಸಿ ಟಿ20 ವಿಶ್ವಕಪ್’ನಲ್ಲಿ ಆಡಲು ತೆರಳಲಿರುವ ಕಾರಣ, ವಿಶ್ವಕಪ್ ಫೈನಲ್-15ನಲ್ಲಿರುವ ಯಾರನ್ನೂ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿಲ್ಲ. ಹೀಗಾಗಿ ಶಿಖರ್ ಧವನ್ ನಾಯಕತ್ವದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಆದರೆ ಆ ತಂಡದಲ್ಲಿ ಸರ್ಫರಾಜ್ ಖಾನ್(Sarfaraz Khan) ಅವರ ಹೆಸರಿಲ್ಲ.

ಕಳೆದ ರಣಜಿ ಸಾಲಿನಲ್ಲಿ ಆರು ಪಂದ್ಯಗಳಿಂದ ಬರೋಬ್ಬರಿ 982 ರನ್ ಗಳಿಸಿದ್ದ ಸರ್ಫರಾಜ್ ಖಾನ್ ಆಯ್ಕೆ ಸಮಿತಿಯ ಗಮನ ಸೆಳೆದಿದ್ದರು. ಇತ್ತೀಚೆಗೆ ನಡೆದ ದುಲೀಪ್ ಟ್ರೋಫಿ ಫೈನಲ್’ನಲ್ಲೂ ಶತಕ ಬಾರಿಸಿದ್ದ ಸರ್ಫರಾಜ್, ಮಧ್ಯಪ್ರದೇಶ ವಿರುದ್ಧದ ರಣಜಿ ಫೈನಲ್ ಪಂದ್ಯದಲ್ಲೂ ಶತಕದೊಂದಿಗೆ ಅಬ್ಬರಿಸಿದ್ದರು. ಮೊನ್ನೆ ಮುಕ್ತಾಯಗೊಂಡ ಸೌರಾಷ್ಟ್ರ ವಿರುದ್ಧದ ಇರಾನಿ ಕಪ್ ಪಂದ್ಯದಲ್ಲೂ ಶತಕ ಸಿಡಿಸಿದ್ದ ಸರ್ಫರಾಜ್ ರೆಸ್ಟ್ ಆಫ್ ಇಂಡಿಯಾ ತಂಡದ ಪ್ರಶಸ್ತಿ ಗೆಲ್ಲಲು ಕಾರಣರಾಗಿದ್ದರು.

ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ಸರ್ಫರಾಜ್ ಖಾನ್ ಇದುವರೆಗೆ 10 ಶತಕಗಳನ್ನು ಬಾರಿಸಿದ್ದಾರೆ. ಆ 10 ಶತಕಗಳಲ್ಲಿ ಒಂದು ತ್ರಿಶತಕ, ಎರಡು ದ್ವಿಶತಕ, ನಾಲ್ಕು 150+ ಸ್ಕೋರ್. ಶತಕಗಳ ಮೇಲೆ ಶತಕ ಬಾರಿಸಿದ್ರೂ ಬಿಸಿಸಿಐ ಆಯ್ಕೆ ಸಮಿತಿ ಮಾತ್ರ ಸರ್ಫರಾಜ್ ಖಾನ್’ನತ್ತ ಇನ್ನೂ ಕಣ್ಣೆತ್ತಿ ನೋಡಿಲ್ಲ. ದೇಶೀಯ ಕ್ರಿಕೆಟ್’ನಲ್ಲಿ ತೋರಿರುವ ಇಂಥಾ ಪ್ರದರ್ಶನಗಳನ್ನು ಕಡೆಗಣಿಸಬಾರದು ಎಂದು ಟೀಮ್ ಇಂಡಿಯಾ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೇಳುವ ಮೂಲಕ ಸರ್ಫರಾಜ್ ಖಾನ್ ಪರ ಬ್ಯಾಟ್ ಬೀಸಿದ್ದಾರೆ.

ಇದನ್ನೂ ಓದಿ : Jasprit bumrah Mohamed Shami: ಟಿ20 ವಿಶ್ವಕಪ್: ಶಮಿ, ಚಹರ್, ಸಿರಾಜ್, ಬುಮ್ರಾ ಬದಲು ಯಾರು ? ಬಿಗ್ ಅಪ್‌ಡೇಟ್ ಕೊಟ್ಟ ಕೋಚ್ ದ್ರಾವಿಡ್

ಇದನ್ನೂ ಓದಿ : Rishabh Pant Birthday : ರಿಷಬ್‌ ಪಂತ್‌ಗೆ ಪ್ಲೈಯಿಂದ ಕಿಸ್‌ ಮೂಲಕ ಶುಭ ಕೋರಿದ ಊರ್ವಶಿ ರೌಟೇಲಾ

ಇದನ್ನೂ ಓದಿ : AB de Villiers RCB : ಐಪಿಎಲ್ 2023ರಲ್ಲಿ ಆರ್‌ಸಿಬಿ ಪರ ಆಡುತ್ತೆನೆ ಎಂದ ಎಬಿ ಡಿವಿಲಿಯರ್ಸ್

24 ವರ್ಷದ ಸರ್ಫರಾಜ್ ಖಾನ್ ಒಟ್ಟು 29 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು, 81.33ರ ಅಮೋಘ ಸರಾಸರಿಯಲ್ಲಿ 10 ಶತಕ ಹಾಗೂ 8 ಅರ್ಧಶತಕಗಳ ಸಹಿತ 2,928 ರನ್ ಕಲೆ ಹಾಕಿದ್ದಾರೆ.

ಸರ್ಫರಾಜ್ ಖಾನ್ (Sarfaraz Khan ) ಪ್ರಥಮದರ್ಜೆ ಶತಕಗಳು :

  • 155 Vs ಮಧ್ಯಪ್ರದೇಶ: 2015
  • 301 Vs ಉತ್ತರ ಪ್ರದೇಶ: 2020
  • 226 Vs ಹಿಮಾಚಲ ಪ್ರದೇಶ: 2020
  • 177 Vs ಮಧ್ಯಪ್ರದೇಶ: 2020
  • 275 Vs ಸೌರಾಷ್ಟ್ರ: 2022
  • 165 Vs ಒಡಿಶಾ: 2022
  • 153 Vs ಉತ್ತರಾಖಂಡ್: 2022
  • 134 Vs ಮಧ್ಯಪ್ರದೇಶ: 2022 (ರಣಜಿ ಫೈನಲ್)
  • 127 Vs ದಕ್ಷಿಣ ವಲಯ: 2022 (ದುಲೀಪ್ ಟ್ರೋಫಿ ಫೈನಲ್)
  • 125 Vs ,ಸೌರಾಷ್ಟ್ರ: 2022 (ಇರಾನಿ ಕಪ್)

Mumbai’s young right-handed batsman Sarfaraz Khan Not place in india Cricket team

Comments are closed.