Road Accident : ಮುಂಬೈನಲ್ಲಿ ಭೀಕರ ಅಪಘಾತ; ಐವರು ಸಾವು, 12 ಮಂದಿಗೆ ಗಾಯ

ಮುಂಬೈ : ( Road Accident ) ವೇಗವಾಗಿ ಬಂದ ಕಾರೊಂದು ಮೂರು ಕಾರು ಹಾಗೂ ಅಂಬ್ಯುಲೆನ್ಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿ, 12 ಮಂದಿ ಸಾವನ್ನಪ್ಪಿರುವ ಘಟನೆ ಮುಂಬೈನ ಬಾಂದ್ರಾ-ವರ್ಲಿ ಸಮುದ್ರ ಕೊಂಡಿಯಲ್ಲಿ ನಡೆದಿದೆ.ಭೀಕರ ಅಪಘಾತ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ.

ಬುಧವಾರ ಬೆಳಗ್ಗಿನ ಜಾವ 3.30ರ ಹೊತ್ತಿಗೆ ಮುಂಬೈನ ಬಾಂದ್ರಾ-ವಾರ್ಲಿಯ ರಸ್ತೆಬದಿಯಲ್ಲಿ ಅಪಘಾತ ( Road Accident )ವೊಂದು ಸಂಭವಿಸಿದ್ದು,ಅಪಘಾತಕ್ಕೀಡಾದ ಜನರನ್ನುಸಾಗಿಸಲು ಆಂಬುಲೆನ್ಸ್‌ ಮತ್ತು ಕೆಲವು ಇತರೆ ವಾಹನಗಳು ರಸ್ತೆ ಬದಿಯಲ್ಲಿ ನಿಂತಿದ್ದವು .ಆ ಸಮಯ ವೇಗವಾಗಿ ಬಂದ ಕಾರೊಂದು ಘಟನಾ ಸ್ಥಳದಲ್ಲಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.ಮೊದಲು ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸಾಗಿಸುವ ಸಿದ್ಧತೆಯಲ್ಲಿರುವಾಗ ಈ ಘಟನೆ ನಡೆದಿದೆ. ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇನ್ನೂ 12 ಮಂದಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : Ramya and Raj B Shetty : ಸ್ವಾತಿ ಮುತ್ತಿನ ಮಳೆ ಹನಿಯೇ: ರಾಜ್ ಜೊತೆ ರಮ್ಯ ಹೊಸ ಸಿನಿಮಾ ಟೈಟಲ್ ರಿವೀಲ್

ಇದನ್ನೂ ಓದಿ :Rana Daggubati : ನಟ ರಾಣಾ ದಗ್ಗುಬಾಟಿ ಕಛೇರಿಯಲ್ಲಿ ಅಪ್ಪು ಪುತ್ಥಳಿ : ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಪುಲ್‌ಖುಷ್‌

ಇದನ್ನೂ ಓದಿ : Kantara Movie leaks : ಕಾಂತಾರಕ್ಕೂ ಪೈರಸಿ ಕಾಟ: ಸೋಷಿಯಲ್ ಮೀಡಿಯಾದಲ್ಲಿ ಲಿಂಕ್ ವೈರಲ್

ಇದನ್ನೂ ಓದಿ : Hubballi : ವಾಣಿಜ್ಯ ನಗರಿಯಲ್ಲೊಂದು ವಿಸ್ಮಯ:ರಸ್ತೆ ಗುಂಡಿಯಲ್ಲಿ ದೇವಿ ಪ್ರತ್ಯಕ್ಷ

ದುರಂತಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿದ್ದಾರೆ.”ಮುಂಬೈನ ಬಾಂದ್ರಾ-ವಾರ್ಲಿ ಸೀ ಲಿಂಕ್‌ ನಲ್ಲಿ ನಡೆದ ಬೀಕರ ಅಪಘಾತದಿಂದ ಹಲವು ಪ್ರಾಣಹಾನಿಯಾಗಿದೆ . ಸಂತ್ರಸ್ತ ಕುಟುಂಬಗಳು ಧೈರ್ಯದಿಂದ ಇರಬೇಕು” ಎಂದು ಟ್ವೀಟ್‌ ಮಾಡುವ ಮೂಲಕ ದುಃಖತಪ್ತ ಕುಟುಂಬಗಳಿಗೆ ಸಾಂತ್ವಾನ ಹೇಳಿದ್ದಾರೆ . ಪಿಎಮ್‌ಒ ಕಚೇರಿ ” ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ” ಎಂದು ಟ್ವೀಟ್‌ ಮಾಡಿದೆ.

(Road Accident) A speeding car collided with three cars and an ambulance, killing five people on the spot and killing 12 people at the Bandra-Worli sea junction in Mumbai.

Comments are closed.