ಭಾನುವಾರ, ಏಪ್ರಿಲ್ 27, 2025
HomeCinemaBike Ride for Appu : ಅಪ್ಪುಗಾಗಿ ಬೈಕ್ ರೈಡ್ : ಪುನೀತ್ ರಾಜ್ ಕುಮಾರ್...

Bike Ride for Appu : ಅಪ್ಪುಗಾಗಿ ಬೈಕ್ ರೈಡ್ : ಪುನೀತ್ ರಾಜ್ ಕುಮಾರ್ ಸ್ಮರಿಸಲು ವಿಶಿಷ್ಟ ಕಾರ್ಯಕ್ರಮ

- Advertisement -

ಪುನೀತ್ ರಾಜ್ ಕುಮಾರ್ ದೈಹಿಕವಾಗಿ ಅಗಲಿ ಹೋಗಿದ್ದರೂ ಅಭಿಮಾನಿಗಳ ಪ್ರೀತಿಯಲ್ಲಿ ಸದಾ ಜೀವಂತವಾಗಿದ್ದಾರೆ. ಸದಾ ಅಪ್ಪು ನೆನಪು ಹಸಿರಾಗಿಸಲು ಪುನೀತ್ ಹೆಸರಿನಲ್ಲಿ ಬೈಕ್ ರೈಡ್ ಆಯೋಜಿಸಲಾಗಿದ್ದು, ಅಪ್ಪುಗಾಗಿ ಬೈಕ್ ರೈಡ್ (Bike Ride for Appu) ಹೆಸರಿನ ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗಿದೆ. ನವೆಂಬರ್ 28 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ಅಪ್ಪು ಸಮಾಧಿಯವರೆಗೆ ಬೈಕ್ ರೈಡ್ ನಡೆಯಲಿದೆ. ಅಪ್ಪು ಅಭಿಮಾನಿಗಳಾಗಿರುವ ದ್ವಿಚಕ್ರ ಸಂಸ್ಥೆ ಹಾಗೂ ಇಂಚರ್ ಸ್ಟುಡಿಯೋಸ್ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರಲ್ಲಿ ಅಪ್ಪು ಅಭಿಮಾನಿಗಳಿಗೆ ಮುಕ್ತ ಅವಕಾಶ ನೀಡಲಾಗಿದೆ.

ನವೆಂಬರ್ 28 ರಂದು ಕಾರ್ಯಕ್ರಮಕ್ಕೆ ಸಚಿವ ಡಾ.ಅಶ್ವತ್ಥ ನಾರಾಯಣ್ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಉಚಿತ ಉಪಹಾರ, ಟೀ ಶರ್ಟ್ , ಸರ್ಟಿಫಿಕೇಟ್ ನೀಡಲಾಗುತ್ತದೆ. ಬೈಕ್ ಚಾಲನೆ ವೇಳೆ ಹೆಲ್ಮೆಟ್ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಆಯೋಜಕರು ತಿಳಿಸಿದ್ದಾರೆ. ಅಪ್ಪು ಅಗಲಿ ಹೋಗಿದ್ದರೂ ಕರ್ನಾಟಕದಾದ್ಯಂತ ಪ್ರತಿ ಜಿಲ್ಲೆಯಲ್ಲೂ ಪ್ರತಿಯಿನ ಒಂದಿಲ್ಲೊಂದು ರೀತಿಯಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಳ್ಳುವ ಕೆಲಸ ಶ್ರದ್ಧೆ ಹಾಗೂ ಪ್ರೀತಿಯಿಂದ ನಡೆಯುತ್ತಲೇ ಇದೆ.

ಅದೇ ರೀತಿ ದ್ವಿಚಕ್ರ ಸಂಸ್ಥೆ ಹಾಗೂ ಇಂಚರ ಸ್ಟುಡಿಯೋಸ್ ಪುನೀತ್ ಗೆ ಬೈಕ್ ಚಲಾಯಿಸುವ ಕ್ರೇಜ್, ಬೆಟ್ಟ ಹತ್ತುವುದು ಈ ರೀತಿಯ ಸಾಹಸ ಕ್ರೀಡೆಯಲ್ಲಿದ್ದ ಆಸಕ್ತಿ ಗಮನಿಸಿ ಅದನ್ನು ಗೌರವಿಸುವ ನಿಟ್ಟಿನಲ್ಲಿ ಬೈಕ್ ರೈಡ್ ಆಯೋಜಿಸಿದೆ‌. ಅಸಕ್ತ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕಾರ್ಯಕ್ರಮಕ್ಕೆ ರಜಿಸ್ಟರ್ ಮಾಡಿಕೊಂಡು ಪಾಲ್ಗೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಪುನೀತ್‌ ಅಗಲಿಕೆಯ ನೋವಲ್ಲೂ ಅಭಿಮಾನಿಗಳ ಕಾಳಜಿ : ಪತ್ರದಲ್ಲಿ ಅಶ್ವಿನಿ ಹೇಳಿದ್ದೇನು ಗೊತ್ತಾ?

ಇದನ್ನೂ ಓದಿ : ಸಾವಿಗೂ ಎರಡು ದಿನ ಮೊದಲು ಸಿಎಂಗೆ ಅಪ್ಪು ಕಾಲ್ : ಕರೆ ಮಾಡಿ ಕೇಳಿದ್ದೇನು ಗೊತ್ತಾ?

( Bike Ride for Appu : A special program to commemorate Puneet Raj Kumar)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular