ಭಾನುವಾರ, ಏಪ್ರಿಲ್ 27, 2025
HomeCinemaChiranjeevi Sarja : ಕರುನಾಡ ಸಂಭ್ರಮ-2022ಕ್ಕೆ ತೆರೆ : ಚಿರು ಸರ್ಜಾಗೆ ಮರಣೋತ್ತರ 'ಕನ್ನಡ‌ ಕಲಾ...

Chiranjeevi Sarja : ಕರುನಾಡ ಸಂಭ್ರಮ-2022ಕ್ಕೆ ತೆರೆ : ಚಿರು ಸರ್ಜಾಗೆ ಮರಣೋತ್ತರ ‘ಕನ್ನಡ‌ ಕಲಾ ಭೂಷಣ’ ಪ್ರಶಸ್ತಿ

- Advertisement -

ಕರುನಾಡ ಸಂಭ್ರಮ 2022ಕ್ಕೆ ಅದ್ದೂರಿಯಾಗಿ ತೆರೆ ಬಿದ್ದಿದೆ. 12ನೇ ವರ್ಷದ ಕರುನಾಡ ಸಂಭ್ರಮ ಚಂದನವನದ ಸ್ಟಾರ್ ತಾರೆಗಳ ಸಮಾಗಮ, ಹಾಡು, ಡಾನ್ಸ್ ಗಳಿಂದ ಕಳೆಗಟ್ಟಿತ್ತು. ಎರಡು ದಿನ‌ ಅದ್ದೂರಿಯಾಗಿ‌ ನಡೆದ ಈ ಕಾರ್ಯಕ್ರಮದಲ್ಲಿ ಗೆಲುವು ಕನ್ನಡ ಗೆಳೆಯರ ಬಳಗ ಸಮಿತಿ (Geluvu Kannada Geleyara Balaga) ವತಿಯಿಂದ ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರಿಗೆ ಮರಣೋತ್ತರ ಕನ್ನಡ ಕಲಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಟ ಚಿರಂಜೀವಿ ಸರ್ಜಾ ಅವರಿಗೆ ಮರಣೋತ್ತರ ‘ಕನ್ನಡ ಕಲಾ ಭೂಷಣ’ ಪ್ರಶಸ್ತಿಯನ್ನು ಗೆಲುವು ಕನ್ನಡ ಗೆಳೆಯರ ಬಳಗ ಸಮಿತಿ ನೀಡಿ ಗೌರವಿಸಿದೆ‌. ಸಹೋದರ ಹಾಗೂ ನಟ ಧ್ರುವ ಸರ್ಜಾ ಪ್ರಶಸ್ತಿಯನ್ನು ಸ್ವೀಕರಿಸಿ ಎಲ್ಲರಿಗೂ ಧನ್ಯವಾದ ತಿಳಿಸಿದ್ರು. ಈ ವೇಳೆ ಗೆಲುವು ಕನ್ನಡ ಗೆಳೆಯರ ಬಳಗ ಸಮಿತಿ ಅಧ್ಯಕ್ಷ ಕೃಷ್ಣೇಗೌಡ್ರು, ಪ್ರದೀಪ್, ಪ್ರಶಾಂತ್ ಮತ್ತು ತಂಡ ಹಾಜರಿದ್ರು.

ವರುಣ್ ಸ್ಟುಡಿಯೋಸ್ ಮತ್ತು ರಾಜ್ ಇವೆಂಟ್ಸ್ ಸಹಯೋಗದಲ್ಲಿ ನಡೆದ ಕರುನಾಡ ಸಂಭ್ರಮ‌ ಯಶಸ್ವಿಯಾಗಿ ತೆರೆ ಕಂಡಿದೆ.ಕಾರ್ಯಕ್ರಮ ಪ್ರತಿ ವರ್ಷದಂತೆ ಈ ಬಾರಿಯೂ ಕಲರ್ ಫುಲ್ ಆಗಿತ್ತು. ಚಂದನವನದ ಖ್ಯಾತ ತಾರೆಯರು ಭಾಗಿಯಾಗಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ಗಿಲ್ಲಕ್ಕೋ ಶಿವ ಗಿಲ್ಲಕ್ಕೋ’ ಹಾಡಿಗೆ ಹೆಜ್ಜೆ ಹಾಕಿ ಕಾರ್ಯಕ್ರಮದ ಎನರ್ಜಿ ಹೆಚ್ಚಿಸಿದ್ರೆ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಕಾವ್ಯಾ ಶಾ, ವಿಕ್ರಮ್ ರವಿಚಂದ್ರನ್, ನಿಧಿ ಸುಬ್ಬಯ್ಯ, ಸಂಗೀತಾ ಶೃಂಗೇರಿ, ವಿರಾಟ್ ಸೇರಿದಂತೆ ಹಲವು ತಾರೆಯರು ತಮ್ಮ ಡಾನ್ಸ್ ಮೂಲಕ ನೆರೆದಿದ್ದವರನ್ನು ರಂಜಿಸಿದ್ರು. ಎಸ್. ಪಿ. ಬಿ ಚರಣ್, ಸಿಂಗರ್ ಮನು, ನವೀನ್ ಸಜ್ಜು, ಅನುರಾಧ ಭಟ್, ವಿಜಯ್ ಪ್ರಕಾಶ್ ತಮ್ಮ ಗಾಯನದ ಮೂಲಕ ಕಾರ್ಯಕ್ರಮದ ರಂಗು ಹೆಚ್ಚಿಸಿದ್ರು.

ಮಾನ್ವಿತ ಹರೀಶ್, ಸೃಜನ್ ಲೊಕೇಶ್, ಶ್ರೀನಗರ ಕಿಟ್ಟಿ, ರವಿಶಂಕರ್ ಗೌಡ, ರವಿಶಂಕರ್ ಸೇರಿದಂತೆ ಹಲವು ತಾರೆಯರು ಕಲರ್ ಫುಲ್ ಕರುನಾಡ ಸಂಭ್ರಮ ಕಾರ್ಯಕ್ರಮಕ್ಕೆ ಸಾಕ್ಷಿಯಾದ್ರು.

ಇದನ್ನೂ ಓದಿ : Meghana Raj Sarja body shaming : ಮೇಘನಾ ರಾಜ್ ಸರ್ಜಾಗೂ ಎದುರಾಗಿತ್ತು ಬಾಡಿ ಶೇಮಿಂಗ್ : ನೋವು ತೋಡಿಕೊಂಡ ಬಹುಭಾಷಾ ನಟಿ

ಇದನ್ನೂ ಓದಿ : Meghana Raj Sarja Photo Viral : ಥೈಲ್ಯಾಂಡ್ ನಲ್ಲಿ ಮೇಘನಾ ರಾಜ್ ಸರ್ಜಾ : ಬಿಕನಿ ಪೋಟೋ ವೈರಲ್

Also Read : News Next English

Karunada Celebration-2022 Chiranjeevi Sarja posthumously awarded ‘Kannada Kala Bhushan’ Geluvu Kannada Geleyara Balaga

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular