Dowry Case: 20 ವರ್ಷದ ಹಳೆಯ ವರದಕ್ಷಿಣೆ ಕೇಸ್ ಗೆ ಮರುಜೀವ: ಕಿರುತೆರೆ ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ

ಬೆಂಗಳೂರು: 20 ವರ್ಷದ ಹಳೆಯ ವರದಕ್ಷಿಣೆ (Dowry Case) ಕಿರುಕುಳ ಪ್ರಕರಣಕ್ಕೆ ಮರುಜೀವ ಸಿಕ್ಕಿದ್ದು, ಬಣ್ಣದ ಲೋಕದ ಖ್ಯಾತ ನಟಿ ಅಭಿನಯಾ ಅವರಿಗೆ ಕೋರ್ಟ್ 2 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಅಂತೆಯೇ ಅವರ ತಾಯಿಗೆ 5 ವರ್ಷ ಹಾಗೂ ಸಹೋದರನಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಅಭಿನಯಾ ಅವರ ಅತ್ತಿಗೆ ಲಕ್ಷ್ಮಿದೇವಿ ಅವರು 2002ರಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು. ಬರೋಬ್ಬರಿ 20 ವರ್ಷಗಳ ಬಳಿಕ ಹೈಕೋರ್ಟ್ ತೀರ್ಪನ್ನು ನೀಡಿದೆ.

ಏನಿದು ಪ್ರಕರಣ..?

1998ರಲ್ಲಿ ಅಭಿನಯಾ ಅವರ ಸಹೋದರ ಶ್ರೀನಿವಾಸ್ ಜೊತೆ ಲಕ್ಷ್ಮಿದೇವಿ ವಿವಾಹ ನಡೆದಿತ್ತು. ಮದುವೆ ವೇಳೆ 80 ಸಾವಿರ ರೂ. ಹಾಗೂ 250 ಗ್ರಾಂ ಚಿನ್ನಾಭರಣವನ್ನು ವರದಕ್ಷಿಣೆ ರೂಪದಲ್ಲಿ ಪಡೆದಿದ್ದರು. ಬಳಿಕ 1 ಲಕ್ಷಕ್ಕೆ ಬೇಡಿಕೆ ಇಟ್ಟು ಅದರಲ್ಲಿ 20 ಸಾವಿರ ರೂ. ಪಡೆದ ಬಳಿಕವೂ ಕಿರುಕುಳ ನೀಡುತ್ತಿದ್ದರು ಎಂದು ಲಕ್ಷ್ಮೀದೇವಿ ಆರೋಪಿಸಿದ್ದರು. ಅಲ್ಲದೇ ಹೆರಿಗೆ ಬಳಿಕ ಪತಿ ಮನೆಯವರು ನನ್ನನ್ನು ಮನೆಯೊಳಗೆ ಸೇರಿಸಿಕೊಳ್ಳುತ್ತಿಲ್ಲ. ತವರು ಮನೆಯಲ್ಲೇ ಉಳಿದುಕೊಳ್ಳುವಂತೆ ಒತ್ತಡ ಹೇರಿದ್ದಾರೆ. ಗಂಡನ ಮನೆಗೆ ಬಂದಿದ್ದಾಗ ತನ್ನನ್ನೂ ಹಾಗೂ ತನ್ನ ಪೋಷಕರನ್ನೂ ಅವಮಾನ ಮಾಡಿದ್ದರು. ಜೊತೆಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಆರೋಪಿಸಿ ಲಕ್ಷ್ಮೀದೇವಿ 2002ರಲ್ಲಿ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: Chiranjeevi Sarja : ಕರುನಾಡ ಸಂಭ್ರಮ-2022ಕ್ಕೆ ತೆರೆ : ಚಿರು ಸರ್ಜಾಗೆ ಮರಣೋತ್ತರ ‘ಕನ್ನಡ‌ ಕಲಾ ಭೂಷಣ’ ಪ್ರಶಸ್ತಿ

ಚಂದ್ರಾಲೇಔಟ್ ಪೊಲೀಸರು ತನಿಖೆ ನಡೆಸಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಚಾರ್ಜ್ ಶೀಟ್ ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ 2012ರಲ್ಲಿ ಐವರು ಆರೋಪಿಗಳಿಗೆ ತಲಾ 2 ವರ್ಷ ಶಿಕ್ಷೆ ಪ್ರಕಟಿಸಿತ್ತು. ಹೀಗಾಗಿ ಆರೋಪಿಗಳು ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಜಿಲ್ಲಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಲಕ್ಷ್ಮೀದೇವಿ ಮತ್ತೆ ಸರ್ಕಾರ ಹಾಗೂ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ಐವರು ಆರೋಪಿಗಳ ಪೈಕಿ ಶ್ರೀನಿವಾಸ್ ಹಾಗೂ ರಾಮಕೃಷ್ಣ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಇದೀಗ ಲಕ್ಷ್ಮೀದೇವಿ ಅವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಉಳಿದ ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದೆ.

ಇದನ್ನೂ ಓದಿ: Meghana Raj Sarja body shaming : ಮೇಘನಾ ರಾಜ್ ಸರ್ಜಾಗೂ ಎದುರಾಗಿತ್ತು ಬಾಡಿ ಶೇಮಿಂಗ್ : ನೋವು ತೋಡಿಕೊಂಡ ಬಹುಭಾಷಾ ನಟಿ

ಪ್ರಕರಣವನ್ನು ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಬಿ. ಪ್ರಭಾಕರ್ ಶಾಸ್ತ್ರಿ ಅವರಿದ್ದ ಏಕಸದಸ್ಯ ಪೀಠ ನಟಿ ಅಭಿನಯಾ ಹಾಗೂ ಅವರ ಸಹೋದರ ಚೆಲುವರಾಜ್ ಗೆ 2 ವರ್ಷ ಜೈಲು ಶಿಕ್ಷೆ ಮತ್ತು ದಂಡ ಹಾಗೂ ಅವರ ಅಮ್ಮ ಜಯಮ್ಮನಿಗೆ 5 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಸರ್ಕಾರದ ಪರ ವಕೀಲ ಹೆಚ್.ವಿ.ನಾಯಕ್ ವಾದ ಮಂಡಿಸಿದ್ದರು.

Dowry Case: Actress Abhinaya gets 2 years jail in dowry and domestic violence case of 20 years old

Comments are closed.