ಕೋಟ: ಹೃದಯಾಘಾತದಿಂದ 30 ವರ್ಷದ ಮಹಿಳೆ ಸಾವು

ಉಡುಪಿ: (Heart attack death) ಹೃದಯಾಘಾತದಿಂದ ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕೋಟ ಪಡುಕೆರೆಯಲ್ಲಿ ನಡೆದಿದೆ. ಕೋಟ ಪಡುಕೆರೆಯ ನಿವಾಸಿ ಭವ್ಯ (30 ವರ್ಷ) ಹೃದಯಾಘಾತದಿಂದ ಮೃತಪಟ್ಟ ಮಹಿಳೆ.

ಇತ್ತೀಚೆಗೆ ಹೃದಯಾಘಾತದ (Heart attack death) ಪ್ರಕರಣಗಳು ಹೆಚ್ಚಾಗಿ ಕಾಡುತ್ತಿವೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ಹೃದಯಾಘಾತ ಬೆಂಬಿಡದ ಭೂತದಂತೆ ಕಾಡುತ್ತಿದೆ. ಈಗಾಗಲೇ ಹೃದಯಾಘಾತದಿಂದ ಚಿಕ್ಕ ಮಕ್ಕಳು, ಎಳೆ ವಯಸ್ಸಿನ ಹುಡುಗರು ಹುಡುಗಿಯರು ಸಾಯುತ್ತಿದ್ದಾರೆ. ಇದೀಗ ಕೋಟ ಪಡುಕೆರೆಯ ನಿವಾಸಿ ಭವ್ಯ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಮನೆಯಲ್ಲಿದ್ದಾಗ ಏಕಾಏಕಿ ಹೃದಯಾಘಾತ ಸಂಭವಿಸಿದೆ.

ಭವ್ಯ ಅವರು ಕೋಟ ಪಡುಕೆರೆ ಖಾಸಗಿ ಮೀನು ಸಂರಕ್ಷಣಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಪತಿ, ಸಹೋದರ, ತಂದೆ ಹಾಗೂ ತಾಯಿಯನ್ನು ಅಗಲಿದ್ದಾರೆ.

ಏಕಾಏಕಿ ಹೃದಯಾಘಾತದಿಂದ ಸಾವನ್ನಪ್ಪಿರುವ ಭವ್ಯ ಅವರ ಸಾವಿಗೆ ಸಂಬಂಧಿಕರು ಹಾಗೂ ಸ್ಥಳೀಯರು ಆಘಾತಗೊಂಡಿದ್ದಾರೆ. ಇತ್ತೀಚೆಗೆ ನಡೆಯುತ್ತಿರುವ ಹೃದಯಾಘಾತವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಮಹಿಳಾ ಆಯೋಗ ಕೇಂದ್ರ ಸರಕಾರಕ್ಕೆ ನೋಟಿಸ್‌ ನೀಡಿದೆ. ಏಕಾಏಕಿ ಹೃದಯಾಘಾತ ಸಂಭವಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆಯಾ? ಇಲ್ಲವಾ? ಎಂದು ಪ್ರಶ್ನಿಸಿ ಅದರ ಬಗ್ಗೆ ವಿವರಗಳನ್ನು ಕೇಳಿ ಮಹಿಳಾ ಆಯೋಗ ನೋಟಿಸ್‌ ನೀಡಿದೆ.

ಇದನ್ನೂ ಓದಿ : Family problem: ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಇದನ್ನೂ ಓದಿ : Cyber Crime: ಅಪ್ಪನ 2 ಲಕ್ಷ ರೂ. ಸಾಲ ತೀರಿಸಲು ಮಗಳು ತೆಗೆದುಕೊಂಡಿದ್ದು ‘ಆ’ ಒಂದು ದಿಟ್ಟ ನಿರ್ಧಾರ; ಆಮೇಲೆ ಏನಾಯ್ತು..?

ಇದನ್ನೂ ಓದಿ : Mangaluru crime: ಮಂಗಳೂರಿನ ಲಾಡ್ಜ್ ನಲ್ಲಿ ನಗ್ನ ಸ್ಥಿತಿಯಲ್ಲಿ ಪುರುಷನ ಶವ ಪತ್ತೆ

ಇದನ್ನೂ ಓದಿ : Hassan Murder Case : ಗಂಡನ ಬಿಟ್ಟು ಪ್ರಿಯಕರನೊಂದಿಗೆ ಅಕ್ರಮ ಸಂಬಂಧ : ಕಬ್ಬಿನಗದ್ದೆಯಲ್ಲಿ ಶವ ಪತ್ತೆ

(Heart attack death) An incident in which a woman died due to heart attack took place in Kota Padukere of Udupi district. Bhavya (30 years), a resident of Kota Padukere, died of a heart attack.

Comments are closed.