ಸ್ಯಾಂಡಲ್‌ವುಡ್ ನಟ ದರ್ಶನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಷ್ಟೇ ನಟ ದರ್ಶನ್ ಹುಟ್ಟುಹಬ್ಬದಂದು ಅವರ ‘D56’ ಸಿನಿಮಾ ಟೈಟಲ್ ರಿವೀಲ್ ಆಗಿದೆ. 70ರ ದಶಕದ ಕಥೆಗೆ ತರುಣ್ ಸುಧೀರ್ ‘ಕಾಟೇರ’ (Kattera Movie ) ಎನ್ನುವ ಟೈಟಲ್ ಫಿಕ್ಸ್ ಮಾಡಿದ್ದಾರೆ. ಲುಂಗಿ ಉಟ್ಟು, ಮಚ್ಚು ಹಿಡಿದು ‘ಕಾಟೇರ’ ಆಗಿ ದರ್ಶನ್ ರಗಡ್ ಲುಕ್‌ನಲ್ಲಿ ಸಿನಿಪ್ರೇಕ್ಷಕರಿಗೆ ದರ್ಶನ ನೀಡಿದ್ದಾರೆ. ಇದೀಗ ನಿರ್ದೇಶಕ ತರುಣ್ ಸುಧೀರ್ ಈ ಸಿನಿಮಾದ ನಾಯಕಿ ಪಾತ್ರದ ಪೋಸ್ಟರ್ ರಿವೀಲ್ (Kattera Movie – Radhana Ram) ಮಾಡುವ ಬಗ್ಗೆ ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ತರುಣ್ ಸುಧೀರ್ ಟ್ವಿಟರ್‌ನಲ್ಲಿ, ” ಮಾರ್ಚ್ 22 ರಂದು ಬೆಳಿಗ್ಗೆ 10.00 ಗಂಟೆಗೆ ಕಾಟೇರಾ ಹೀರೋಯಿನ್ ಎಫ್‌ಎಲ್ ಬಿಚ್ಚಿಡಲಿದ್ದು, ನಿಮ್ಮ ದಾರಿಗೆ ಆಗಮಿಸುವ ಮೋಡಿ ಮಾಡುವ ಭೀಕರ ಚಂಡಮಾರುತ!” ಎಂದು ಪೋಸ್ಟ್ ಮಾಡಿದ್ದಾರೆ. ‘ಕಾಟೇರ’ ಸಿನಿಮಾದಲ್ಲಿ ನಾಯಕಿಯಾಗಿ ನಟ ದರ್ಶನ್ ಜೊತೆ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಟಿಸುತ್ತಿದ್ದಾರೆ. ನಾಯಕಿ ಪಾತ್ರದಲ್ಲಿ ರಾಧನಾ ರಾಮ್ ಹೇಗೆ ಕಾಣಿಕೊಳ್ಳುತ್ತಾರೆ ಎನ್ನುವ ಕುತೂಹಲವನ್ನು ಸಿನಿಪ್ರೇಕ್ಷಕರಲ್ಲಿ ಹುಟ್ಟು ಹಾಕಿದ್ದಾರೆ.
A fiercely stunning storm of charm arriving your way 🔥#KaateraHeroineFL to unravel on 22 March at 10.00AM! #KAATERA #Dboss @dasadarshan @RocklineEnt @Radhanaram_ @harimonium @iamjaggubhai #D56 pic.twitter.com/oWvu0DG3m7
— Tharun Sudhir (@TharunSudhir) March 19, 2023
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಸಿನಿಮಾಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಸುಧಾಕರ್ ಸಿನಿಮಾಟೋಗ್ರಫಿ ಸಿನಿಮಾಕ್ಕಿದೆ. 70ರ ದಶಕದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಜಡೇಶ್ ಹಂಪಿ ಹಾಗೂ ತರುಣ್ ಸುಧೀರ್ ‘ಕಾಟೇರ’ ಸಿನಿಮಾಕ್ಕೆ ಕಥೆ ಸಿದ್ಧಪಡಿಸಿದ್ದಾರೆ. ಮಾಸ್ತಿ ಸಂಭಾಷಣೆ ಸಿನಿಮಾಕ್ಕಿದೆ. ಮೋಷನ್ ಪೋಸ್ಟರ್‌ನಲ್ಲಿ ‘ಪ್ರತಿ ಮಚ್ಚು ಎರಡು ದಪ ಕೆಂಪಾಗ್ತೈತೆ, ಬೆಂಕಿಲಿ ಬೆಂದಾಗ ರಕ್ತದಲ್ಲಿ ನೆಂದಾಗ’ ಎನ್ನುವ ಡೈಲಾಗ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡುತ್ತಿದೆ. ಇದು 1974ರಲ್ಲಿ ‘ಕಾಟೇರ’ ಕಥೆ ನಡೆಯಲಿದೆ ಎಂದಿದ್ದಾರೆ.
ಇದನ್ನೂ ಓದಿ : ಆಸ್ಕರ್ 2023 ರಲ್ಲಿ ಭಾಗವಹಿಸಲು ತಲಾ 25,000 ಡಾಲರ್ ಪಾವತಿಸಿದ ಆರ್‌ಆರ್‌ಆರ್ ಸಿನಿತಂಡ
ಇದನ್ನೂ ಓದಿ : ವಿಶ್ವದಾದ್ಯಂತ ದೂರದರ್ಶನದಲ್ಲಿ ಪ್ರೇಕ್ಷಕರ ಮನರಂಜಿಸಲು ಸಜ್ಜಾದ “ಕಾಂತಾರ”
ಈಗಾಗಲೇ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ‘ರಾಬರ್ಟ್’ ಸಿನಿಮಾದಲ್ಲಿ ನಟ ದರ್ಶನ್ ಬಹಳ ವಿಭಿನ್ನವಾಗಿ ತೋರಿಸಿ ಗೆದ್ದಿದ್ದ ತರುಣ್ ಮತ್ತೊಮ್ಮೆ ಅದೇ ಪ್ರಯತ್ನ ಮಾಡುತ್ತಿದ್ದಾರೆ. ‘ಹಿಂದಿರೋವ್ರಿಗೆ ದಾರಿ, ಮುಂದಿರೋವ್ನದ್ದು ಜವಾಬ್ದಾರಿ’ ಎನ್ನುವ ಟ್ಯಾಗ್‌ಲೈನ್ ಕೂಡ ಇದೆ. ತನ್ನ ಊರಿನ ಜನರಿಗಾಗಿ ಹೋರಾಡುವ ನಾಯಕನಾಗಿ ದರ್ಶನ್ ಸಿನಿಮಾದಲ್ಲಿ ಕಾಣಿಸಿಕೊಂಡಿರೋದು ಗೊತ್ತಾಗುತ್ತಿದೆ. ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.
Kattera Movie – Radhana Ram : On 22nd March “Kattera” Movie Poster Revealed