KL Rahul Suryakumar : ಕೆ.ಎಲ್ ರಾಹುಲ್ ಒಂದು ವೈಫಲ್ಯಕ್ಕೆ ಕಿಡಿ ಕಾರುವ ಸೋ ಕಾಲ್ಡ್ ಕ್ರಿಕೆಟ್ ಪಂಡಿತರು ಸೂರ್ಯನ ವಿಚಾರದಲ್ಲಿ ಮೌನವೇಕೆ?

ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಒಂದು ಪಂದ್ಯದಲ್ಲಿ ವಿಫಲರಾದರೆ ಸಾಕು, ಕೆಲ ಸೋ ಕಾಲ್ಡ್ ಕ್ರಿಕೆಟ್ ಪಂಡಿತರು ರಣ ಹದ್ದುಗಳಂತೆ ರಾಹುಲ್ ಮೇಲೆ ಮುಗಿ ಬೀಳುತ್ತಾರೆ. ಉದಾಹರಣೆಗೆ ಕರ್ನಾಟಕದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ (Border – Gavaskar year series) ರಾಹುಲ್ ವೈಫಲ್ಯ ಎದುರಿಸಿದಾಗ ಹಿಗ್ಗಾಮುಗ್ಗ ಟೀಕೆ ಮಾಡಿದ್ದ ವೆಂಕಟೇಶ್ ಪ್ರಸಾದ್, ಸೂರ್ಯಕುಮಾರ್ ಯಾದವ್ (KL Rahul Suryakumar) ವೈಫಲ್ಯದ ಬಗ್ಗೆ ತುಟಿ ಪಿಟಿಕ್ ಎನ್ನುತ್ತಿಲ್ಲ.

ವೆಂಕಟೇಶ್ ಪ್ರಸಾದ್ ನಿಜವಾದ ಕ್ರಿಕೆಟ್ ಪಂಡಿತನಾಗಿದ್ದರೆ ಏಕದಿನ ಕ್ರಿಕೆಟ್’ನಲ್ಲಿ ಸೂರ್ಯನ ವೈಫಲ್ಯವನ್ನು ಪ್ರಶ್ನಿಸಬೇಕಿತ್ತು. ಆದರೆ ನಮ್ಮ ಕನ್ನಡಿಗ ರಾಹುಲ್ ಅವರನ್ನು ಟೀಕಿಸುವುದಕ್ಕಷ್ಟೇ ವೆಂಕಟೇಶ್ ಪ್ರಸಾದ್ ಟೀಕೆ ಸೀಮಿತವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಅಜೇಯ 75 ರನ್ ಗಳಿಸಿ ಭಾರತವನ್ನು ಗೆಲ್ಲಿಸಿದ್ದ ರಾಹುಲ್ ಟೀಕಾಕಾರರಿಗೆ ಆಟದಿಂದಲೇ ಉತ್ತರಿಸಿದ್ದರು.

ಮತ್ತೊಂದೆಡೆ ಮುಂಬೈ ಬ್ಯಾಟ್ಸ್’ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಗೋಲ್ಡನ್ ಡಕ್’ಗೆ ಔಟಾಗಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ವೇಗಿ ಮಿಚೆಲ್ ಸ್ಟಾರ್ಕ್’ಗೆ ಎಲ್ಬಿಡಬ್ಲ್ಯೂ ಆಗಿದ್ದ ಸೂರ್ಯಕುಮಾರ್ ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಪಂದ್ಯದಲ್ಲೂ ಮೊದಲ ಎಸೆತದಲ್ಲೇ ಮಿಚೆಲ್ ಸ್ಟಾರ್ಕ್ ಬೌಲಿಂಗ್’ನಲ್ಲಿ ಎಲ್ಬಿಡಬ್ಲ್ಯೂ ಆಗಿ ಔಟಾಗಿದ್ದಾರೆ.

ಟಿ20 ಕ್ರಿಕೆಟ್’ನಲ್ಲಿ ಜಗತ್ತಿನ ನಂ.1 ಬ್ಯಾಟ್ಸ್’ಮನ್ ಆಗಿರುವ ಸೂರ್ಯಕುಮಾರ್ ಯಾದವ್ ಏಕದಿನ ಕ್ರಿಕೆಟ್’ನಲ್ಲಿ ದಯನೀಯ ವೈಫಲ್ಯ ಎದುರಿಸಿದ್ದಾರೆ. ಕಳೆದ 10 ಏಕದಿನ ಇನ್ನಿಂಗ್ಸ್’ಗಳಿಂದ ಸೂರ್ಯಕುಮಾರ್ ಯಾದವ್ ಗಳಿಸಿರುವ ಒಟ್ಟು ರನ್ ಕೇವಲ 110.

ಕಳೆದ 10 ಏಕದಿನ ಇನ್ನಿಂಗ್ಸ್’ಗಳಲ್ಲಿ ಸೂರ್ಯಕುಮಾರ್ ಯಾದವ್ ಗಳಿಸಿರುವ ರನ್:
9 (8), 8 (6), 4 (3), 34* (25), 6 (10), 4 (4), 31 (26), 14 (9), 0 (1), 0 (1).

ಏಕದಿನ ಕ್ರಿಕೆಟ್’ನಲ್ಲಿ ಸತತ ವೈಫಲ್ಯ ಎದುರಿಸುತ್ತಿರುವ ಸೂರ್ಯಕುಮಾರ್ ಯಾದವ್ ಬದಲು ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್’ಗೆ ಅವಕಾಶ ನೀಡಬೇಕೆಂದು ಕ್ರಿಕೆಟ್ ಪ್ರಿಯರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ : Sophie Devine : ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ ಒಂದೇ ಒಂದು ರನ್ನಿಂದ ಶತಕ ಮಿಸ್ ಮಾಡಿಕೊಂಡ RCB ಸ್ಟಾರ್

ಇದನ್ನೂ ಓದಿ : Exclusive: ಭಾರತ ಗೆದ್ದ ನಂತರ ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ ಮಾಡಿದ ಟೀಮ್ ಇಂಡಿಯಾ ಕನ್ನಡಿಗ

https://twitter.com/sportyvishai/status/1637379064922079233?s=21
https://twitter.com/sportyvishai/status/1637371739931041793?s=21

KL Rahul Suryakumar : Why are the so called cricket pundits silent on the matter of Surya, who is the spark of KL Rahul’s failure?

Comments are closed.