ಮೆಟಡೋರ್.. ಹೀಗೊಂದು ಡಿಫರೆಂಟ್ ಟೈಟಲ್ ನ ಸಿನಿಮಾವೊಂದು ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿದೆ. ಕಳೆದ ಕೆಲ ತಿಂಗಳ ಹಿಂದಷ್ಟೇ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ, ಡಾಲಿ ಧನಂಜಯ್ ಮೆಟಡೋರ್ ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ರಿಲೀಸ್ ಆಗಿರುವ ಕವಿತಾ ಗೌಡ (Kavitha Gowda ) ನಟನೆಯ ಮೆಟಡೋರ್ ಸಿನಿಮಾದ ಪ್ರಮೋಷನಲ್ ಹಾಡು ಯೂಟ್ಯೂಬ್ ನಲ್ಲಿ ಸೌಂಡ್ ಮಾಡ್ತಿದೆ.

ಗಾಂಧಾರಿ…ಹೆಸರಲ್ಲಿ ಶುರುವಾಗುವ ಹಾಡು ಇದೀಗ ಯೂ ಟ್ಯೂಬ್‌ನಲ್ಲಿ ಪ್ರೇಕ್ಷಕರ ಮನಗೆದ್ದಿದೆ. ಅರ್ಥ ಪೂರ್ಣ ಗಾನಲಹರಿಗೆ ತಂಗಾಳಿ ನಾಗರಾಜ್ ಸಾಹಿತ್ಯ ಬರೆದಿದ್ದು, ಜೊತೆಗೆ ಮ್ಯೂಸಿಕ್ ನೀಡಿದ್ದಾರೆ. ಅಪೂರ್ವ ಶ್ರೀಧರ್ ಧ್ವನಿಯಾಗಿರುವ ಈ ಹಾಡಿನಲ್ಲಿ ಕವಿತಾ ಗೌಡ ಮಿಂಚಿದ್ದಾರೆ. ಈ ಹಿಂದೆ 13ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಸುದರ್ಶನ್ ಜಿ ಶೇಖರ್ ಮೆಟಡೋರ್ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

ಐದು ಕಥೆಯನ್ನು ಹೇಳುವ ಹೈಪರ್ ಲಿಂಕ್ ಸಿನಿಮಾವಾಗಿರುವ ಮೆಂಟಡೋರ್ ಚಿತ್ರದಲ್ಲಿ ಕಿರಣ್, ರವಿ ಮೈಸೂರು, ರಾಜ ಕರ್ಮ, ಅರ್ಚನಾ ಮಹೇಶ್, ಮೋಹನ್ ಬಾಬು ಸೇರಿದಂತೆ ಹೊಸ ಕಲಾಬಳಗ ಸಿನಿಮಾದಲ್ಲಿದೆ. ಓಂ ಸ್ಟುಡಿಯೋ ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿ ಕಿರಣ್ ಕುಮಾರ್ ಹೆಚ್ ಎಸ್ ಬಂಡವಾಳ ಹೂಡಿದ್ದು, ಈಗಾಗ್ಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಸಿನಿಮಾ ಮೇ 27ರಂದು ತೆರೆಗೆ ಬರ್ತಿದ್ದು, ಸದ್ಯ ಹಾಡು ರಿಲೀಸ್ ಮಾಡುವ ಮೂಲಕ ಪ್ರಮೋಷನ್ ಗೆ ಚಿತ್ರತಂಡ ಮುನ್ನುಡಿ ಬರೆದಿದೆ.

ಕವಿತಾ ಗೌಡ ಕಿರುತರೆಯಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ವಿದ್ಯಾ ವಿನಾಯಕ, ತಮಿಳಿನ ಮಹಾಭಾರತಂ, ಪಾಂಡಿಯನ್ ಸ್ಟೋರಿಸ್, ಅಂಬೆ ಶಿವಂ, ನೀಲಿ ಧಾರವಾಹಿಗಳಲ್ಲಿ ನಟಿಸಿದ್ದು, ಬಿಗ್ ಬಾಸ್ ಕನ್ನಡ, ತಕದಿಮಿತಾ, ಕುಕ್ಕು ವಿತ್ ಕಿರಿಕ್ಕು, ಡ್ಯಾನ್ಸ್ ಡ್ಯಾನ್ಸ್ ಶೋಗಳಲ್ಲಿಯೂ ಭಾಗವಹಿಸಿದ್ದಾರೆ. ಈಗಾಗಲೇ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿರುವ ಕವಿತಾ ಗೌಡ, ಶ್ರೀನಿವಾಸ ಕಲ್ಯಾಣ, ಫಸ್ಟ್ ಲವ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಗೋವಿಂದ ಗೋವಿಂದ, ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾಗಳಲ್ಲಿ ಕವಿತಾ ನಟಿಸಿದ್ದಾರೆ.
ಇದನ್ನೂ ಓದಿ : ಇನ್ಪೋಸಿಸ್ ಸುಧಾಮೂರ್ತಿ ಅವರನ್ನು ಭೇಟಿ ಮಾಡಿದ ರಾಬರ್ಟ್ ಬೆಡಗಿ ಆಶಾ ಭಟ್
ಇದನ್ನೂ ಓದಿ : ಬೇಕರಿ ಕೆಲಸದಿಂದ ಬಾಲಿವುಡ್ ನಟಿಯವರೆಗೆ…’ : ಇಲ್ಲಿದೆ ನೋಡಿ ನಟಿ ಸನ್ನಿ ಲಿಯೋನ್ ನಡೆದು ಬಂದ ಹಾದಿ
Kavitha Gowda Kannada new Movie Matador Gaandhari songs viral