threw baby into a road : ಆಗತಾನೆ ಜನಿಸಿದ ಕಂದಮ್ಮನನ್ನು ರಸ್ತೆ ಬದಿಯಲ್ಲಿ ಎಸೆದು ಹೋದ ಪಾಪಿ ತಾಯಿ!

ಆನೇಕಲ್​ :threw baby into a road : ಜಗತ್ತಿನಲ್ಲಿ ಕೆಟ್ಟ ಮಕ್ಕಳಿದ್ದರೂ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂದು ಹೇಳ್ತಾರೆ.ಮಕ್ಕಳಿಗಾಗಿ ತಾಯಿಯಾದವಳು ಯಾವುದೇ ತ್ಯಾಗಕ್ಕೆ ಸಿದ್ಧರಿರುತ್ತಾರೆ. ಆದರೆ ಈ ಮಾತಿಗೆ ಸುಳ್ಳು ಎಂಬಂತಹ ಘಟನೆಯೊಂದು ಆನೇಕಲ್​​ನ ಬನ್ನೇರುಘಟ್ಟೆ ರಸ್ತೆಯ ವೀವರ್ಸ್ ಕಾಲೋನಿಯಲ್ಲಿ ನಡೆದಿದೆ. ಅನೈತಿಕ ಸಂಬಂಧಕ್ಕೆ ಜನಿಸಿದ ಮಗುವನ್ನು ಹೆತ್ತು ತಾಯಿಯು ಸ್ಥಳದಿಂದ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.


ವೀವರ್ಸ್ ಕಾಲೋನಿಯ 5ನೇ ಕ್ರಾಸ್​ ರಸ್ತೆಯಲ್ಲಿ ಬೆಳ್ಳಂ ಬೆಳಗ್ಗೆ ಕಂದಮ್ಮ ಒಂದೇ ಸಮನೇ ಅಳುತ್ತಿರುವ ಶಬ್ದ ಕೇಳಿದ ಸ್ಥಳೀಯರು ಮನೆಯಿಂದ ಹೊರ ಬಂದು ನೋಡಿದ ವೇಳೆಯಲ್ಲಿ ನವಜಾತ ಕಂದಮ್ಮ ರಕ್ತ ಸಿಕ್ತವಾಗಿ ರಸ್ತೆ ಬದಿಯಲ್ಲಿ ಮಲಗಿದ್ದು ಕಂಡು ಬಂದಿದೆ. ಇಲ್ಲಿನ ನಿವಾಸಿಯಾದ ಚೂಡಾಮಣಿ ಎಂಬವರು ಕೂಡಲೇ ಮಗುವನ್ನು ಸ್ವಚ್ಛಗೊಳಿಸಿದ್ದಾರೆ.


ಮಗುವಿನ ರಕ್ಷಣೆ ಮಾಡಿದ ಪೊಲೀಸರು ಕೂಡಲೇ ಕೋಣನಕುಂಟೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾಗೂ ಪೋಷಕರ ಪತ್ತೆಗೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.


ಇನ್ನೂ ಸರಿಯಾಗಿ ಜಗತ್ತನ್ನೇ ನೋಡಿದ ಪುಟ್ಟ ಕಂದಮ್ಮನನ್ನು ಜನಿಸಿದ ಕೆಲವೇ ಕ್ಷಣಗಳಲ್ಲಿ ಇಷ್ಟೊಂದು ನಿರ್ದಾಕ್ಷಿಣ್ಯವಾಗಿ ರಸ್ತೆಯಲ್ಲಿ ಎಸೆದು ಹೋದ ಅಪರಿಚಿತ ಮಹಿಳೆಯ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಅನೈತಿಕ ಸಂಬಂಧಕ್ಕೆ ಈ ಮಗು ಜನಿಸಿರುವ ಸಾಧ್ಯತೆಯಿದೆ. ಹೀಗಾಗಿಯೇ ತಾಯಿ ಮಗುವನ್ನು ರಸ್ತೆಗೆ ಎಸೆದಿದ್ದಾಳೆ ಎಂದು ಸ್ಥಳೀಯರು ಮಾತನಾಡಿಕೊಳ್ತಿದ್ದಾರೆ.

ಇದನ್ನು ಓದಿ : Kavitha Gowda : ಸದ್ದು ಮಾಡ್ತಿದೆ ‘ಮೆಟಡೋರ್’ ಸಿನಿಮಾದ ’ಗಾಂಧಾರಿ’ ಹಾಡು : ಬೆಳ್ಳಿತೆರೆಯಲ್ಲಿ ಕವಿತಾ ಗೌಡ ಮಿಂಚು

ಇದನ್ನೂ ಓದಿ : Sunny Leone Birthday : ‘ಬೇಕರಿ ಕೆಲಸದಿಂದ ಬಾಲಿವುಡ್​ ನಟಿಯವರೆಗೆ…’ : ಇಲ್ಲಿದೆ ನೋಡಿ ನಟಿ ಸನ್ನಿ ಲಿಯೋನ್ ನಡೆದು ಬಂದ ಹಾದಿ

a mother who threw baby into a road

Comments are closed.