congresss nav sankalp chintan shivir : ಚುನಾವಣೆ ಗೆಲುವಿಗೆ ಕಾಂಗ್ರೆಸ್​ ಹೊಸ ಕಾರ್ಯತಂತ್ರ: ಒಂದು ಕುಟುಂಬಕ್ಕೆ ಒಂದೇ ಟಿಕೆಟ್​

congresss nav sankalp chintan shivir : 2024ರ ಸಾರ್ವತ್ರಿಕ ಚುನಾವಣೆ ಹಾಗೂ ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆಯಲ್ಲಿ ಶತಾಯ ಗತಾಯ ಗೆಲುವನ್ನು ಸಾಧಿಸಲು ಕಾಂಗ್ರೆಸ್​ ಇನ್ನಿಲ್ಲದ ಕಸರತ್ತನ್ನು ಮಾಡುತ್ತಿದೆ. ಈ ಹಿಂದೆ ದೇಶದಲ್ಲಿ ನಡೆದಿರುವ ಚುನಾವಣೆಗಳಲ್ಲಿ ಕಳಪೆ ಸಾಧನೆ ತೋರುತ್ತಿರುವ ಕಾಂಗ್ರೆಸ್​ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿದೆ. ಒಂದೊಂದೆ ರಾಜ್ಯಗಳಲ್ಲಿ ಅಧಿಕಾರವನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್​​​ ತನ್ನ ಕಾರ್ಯತಂತ್ರಗಳಲ್ಲಿ ಬದಲಾವಣೆಗಳನ್ನು ಮಾಡಲು ರಾಜಸ್ಥಾನದ ಉದಯಪುರದಲ್ಲಿ ನಿನ್ನೆಯಿಂದ ಮೂರು ದಿನಗಳ ನವಸಂಕಲ್ಪ ಚಿಂತನ ಶಿಬಿರವನ್ನು ಆರಂಭಿಸಿದ್ದು ಸಾಕಷ್ಟು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.


ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ದೇಶದ ಅತ್ಯಂತ ಹಿರಿಯ ಪಕ್ಷವಾದ ಕಾಂಗ್ರೆಸ್​ ಇದೀಗ ತನ್ನ ಕಾರ್ಯ ತಂತ್ರಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿದೆ. ಕಾಂಗ್ರೆಸ್​ನಲ್ಲಿ ಕುಟುಂಬ ರಾಜಕಾರಣ ನಡೆಯುತ್ತದೆ ಎಂಬ ಬಿಜೆಪಿಯ ಅಪವಾದಗಳಿಂದ ಮುಕ್ತಿ ಪಡೆಯಲು ಮುಂದಾಗಿರುವ ಕಾಂಗ್ರೆಸ್​ ಒಂದು ಕುಟುಂಬಕ್ಕೆ ಒಂದೇ ಟಿಕೆಟ್​ ನೀಡಲು ನಿರ್ಧಾರ ಕೈಗೊಂಡಿದೆ. ಯುವಜನತೆಗೆ ಹೆಚ್ಚಿನ ಅವಕಾಶ ಹಾಗೂ ಪಕ್ಷದ ಹಿರಿಯರಿಗೆ ಪಕ್ಷದಲ್ಲಿ ಮಾನ್ಯತೆ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಚಿಂತನ ಶಿಬಿರದಲ್ಲಿ ಚರ್ಚೆ ನಡೆಸಲಾಗಿದೆ.


ಕಾಲಕ್ಕೆ ತಕ್ಕಂತೆ ಪಕ್ಷದಲ್ಲಿ ಕಾರ್ಯತಂತ್ರಗಳಲ್ಲಿ ಬದಲಾವಣೆಗಳನ್ನು ತರುವ ಸಲುವಾಗಿ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್​ ಪಕ್ಷದಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್​ ನೀಡಲು ನಿರ್ಧರಿಸಲಾಗಿದೆ. ಈ ನಿರ್ಧಾರದಿಂದ ಸೋನಿಯಾ ಗಾಂಧಿ ಕುಟುಂಬಕ್ಕೆ ಮಾತ್ರ ವಿನಾಯಿತಿ ಇರಲಿದೆ. ಅಲ್ಲದೇ ಪಕ್ಷದಲ್ಲಿ ಐದು ವರ್ಷಕ್ಕೂ ಅಧಿಕ ಕಾಲ ದುಡಿದವರಿಗೆ ವಿಶೇಷ ಮಾನ್ಯತೆ ಸಿಗಲಿದೆ. ಇದರ ಜೊತೆಯಲ್ಲಿ ಪಕ್ಷದಲ್ಲಿ ಯುವಶಕ್ತಿಗೆ ಹೆಚ್ಚಿನ ಅವಕಾಶ ನೀಡುವ ಮೂಲಕ ಪಕ್ಷ ಸಂಘಟನೆ ಇನ್ನಷ್ಟು ಬಲಗೊಳಿಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಅಜಯ್​ ಮಕೇನ್​ ಮಾಹಿತಿ ನೀಡಿದರು.

ಇದನ್ನು ಓದಿ : Shoot Out Acid Nagesh : ಆಸಿಡ್‌ ನಾಗ ಎಸ್ಕೇಪ್‌ ಆಗಲು ಯತ್ನ : ಕಾಲಿಗೆ ಗುಂಡೇಟು

ಇದನ್ನೂ ಓದಿ : Brendon McCullum : ಬ್ರೆಂಡನ್‌ ಮೆಕಲಮ್‌ ಇಂಗ್ಲೆಂಡ್‌ ತಂಡಕ್ಕೆ ಕೋಚ್‌ : ಕೆಕೆಆರ್‌ ತೊರೆಯುತ್ತಾರಾ ನ್ಯೂಜಿಲೆಂಡ್‌ ಮಾಜಿ ನಾಯಕ

in udaipur congresss nav sankalp chintan shivir

Comments are closed.