ಮಂಗಳವಾರ, ಏಪ್ರಿಲ್ 29, 2025
HomeCinemaಕೆಬಿಸಿ13 ಶೋದಲ್ಲಿ ಚಿನ್ನದ ಹುಡುಗ: ಕಿರುತೆರೆ ಶೋಗೆ ಬಂದ ನೀರಜ್‌ ಚೋಫ್ರಾ ಹಾಗೂ ಶ್ರೀಜೇಶ್

ಕೆಬಿಸಿ13 ಶೋದಲ್ಲಿ ಚಿನ್ನದ ಹುಡುಗ: ಕಿರುತೆರೆ ಶೋಗೆ ಬಂದ ನೀರಜ್‌ ಚೋಫ್ರಾ ಹಾಗೂ ಶ್ರೀಜೇಶ್

- Advertisement -

ಹಿಂದಿ ಕಿರುತೆರೆಯ ಬಿಗ್ ಶೋಗಳಲ್ಲಿ ಬಿಗ್ ಬೀ ಅಮಿತಾಬ್ ಬಚ್ಚನ್ ನಡೆಸಿ ಕೊಡೋ ಕೌನ್ ಬನೇಗಾ ಕರೋಡಪತಿ ಕೂಡ ಒಂದು. ಕೆಬಿಸಿ ಶೋ 13 ನೇ ಸೀಸನ್ ಆರಂಭಗೊಂಡಿದ್ದು, ಈ ಸೀಸನ್ ನಲ್ಲಿ ಪ್ರತಿಶುಕ್ರವಾರ ಸೆಲೆಬ್ರೆಟಿಗಳು ಶೋದಲ್ಲಿ ಪಾಲ್ಗೊಳ್ಳುವುದು ಈ ಸೀಸನ್ ವಿಶೇಷತೆ.

ಈಗಾಗಲೇ ಹಲವು ಕ್ರಿಕೇಟಿಗರು, ನಟ-ನಟಿಯರು ಪಾಲ್ಗೊಂಡಿದ್ದು, ಮೊನ್ನೆ ಮೊನ್ನೆಯಷ್ಟೇ ದೀಪಿಕಾ ಪಡುಕೋಣೆ ಹಾಗೂ ಫರ್ಹಾ ಖಾನ್ ಪಾಲ್ಗೊಂಡಿದ್ದರು. ಈಗ ಚಿನ್ನದ ಹುಡುಗ ನೀರಜ್ ಚೋಫ್ರಾ ಶೋದಲ್ಲಿ ಪಾಲ್ಗೊಂಡಿದ್ದು ಪ್ರೋಮೋ ಪ್ರೇಕ್ಷಕರನ್ನು ಸೆಳೆಯುತ್ತಿದೆ.

ಟೋಕಿಯೋ ಓಲಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋದಲ್ಲಿ ಚಿನ್ನ ಗೆದ್ದ ಕೆಬಿಸಿ ಶೋದ ವಿಶೇಷ ಅತಿಥಿ ಕುರ್ಚಿಯಲ್ಲಿ ಕುಳಿತು ಶೋದ ಜನಪ್ರಿಯತೆ ಮತ್ತಷ್ಟು ಹೆಚ್ಚಿಸಿದ್ದಾರೆ. ನೀರಜ್ ಚೋಫ್ರಾ ಗೆ ಪುರುಷರ ಹಾಕಿ ತಂಡದ ಶ್ರೀಜೇಶ್ ಸಾಥ್ ನೀಡಿದ್ದಾರೆ.

ಈಗಾಗಲೇ ಕೆಬಿಸಿ ಸೀಸನ್ 13 ರ ಪ್ರೋಮೋ ಪ್ರಸಾರವಾಗಿದ್ದು, ಜನರ ಮನಗೆದ್ದಿದೆ. ನೀರಜ್ ಭಾಗವಹಿಸಿದ ಶೋ ಸಪ್ಟೆಂಬರ್ 17 ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ಇದನ್ನೂ ಓದಿ : ಟ್ವಿಟರ್ ನಿಂದ ದಿನಕ್ಕೆ 200 FIR ದಾಖಲಾಗ್ತಿತ್ತು: ಕೊನೆಗೂ ಸತ್ಯ ಹೇಳಿದ ಕಂಗನಾ

ಇದನ್ನೂ ಓದಿ : ಹೀರೋ ನಂ1 ಮನೆಜಗಳ‌ ಬೀದಿಗೆ : ಬದುಕಿರೋವರೆಗೂ ಮುಖ ನೋಡಲ್ಲ ಅಂದ್ರು ಗೋವಿಂದ ಪತ್ನಿ

(KBC 13 promo: Olympic Gold winner Neeraj Chopra, P Sreejesh to be next guests )

RELATED ARTICLES

Most Popular