kgf-2 : ನೂರು ದಿನ ಪೂರೈಸಿದ ಕೆಜಿಎಫ್​ – 2 ಸಿನಿಮಾ : ವಿಶೇಷ ವಿಡಿಯೋ ಶೇರ್​ ಮಾಡಿದ ಪ್ರಶಾಂತ್​ ನೀಲ್​​

kgf-2 : ಕೆಜಿಎಫ್​ 2 ಸಿನಿಮಾ,..ಸ್ಯಾಂಡಲ್​ವುಡ್​ನ ಸಿನಿಮಾವೊಂದು ಇಷ್ಟು ಎತ್ತರಕ್ಕೆ ಬೆಳೆಯಬಹುದು ಎಂದು ಯಾರೂ ಊಹಿಸದಷ್ಟರ ಮಟ್ಟಿಗೆ ಯಶಸ್ಸನ್ನು ಸಾಧಿಸಿತ್ತು. ವಿಶ್ವ ಮಟ್ಟದಲ್ಲಿ ಕನ್ನಡ ಭಾಷೆಯ ಸಿನಿಮಾವೊಂದು ಸದ್ದು ಮಾಡುತ್ತೆ ಎಂಬುದನ್ನು ಯಾರು ಊಹೆ ಕೂಡ ಮಾಡಿರಲಿಲ್ಲ. ಆದರೆ ಇಂತಹ ಸಾಧನೆಯನ್ನು ಪ್ರಶಾಂತ್​ ನೀಲ್​ ಹಾಗೂ ರಾಕಿಂಗ್​ ಸ್ಟಾರ್​ ಯಶ್​ ನಟನೆಯ ಸಿನಿಮಾವೊಂದು ಮಾಡಿತ್ತು. ಈ ಸಿನಿಮಾ ಬೆಳ್ಳಿ ತೆರೆಯಲ್ಲಿ ಪ್ರದರ್ಶನ ಕಾಣಲು ಆರಂಭಿಸಿ ಇಂದಿಗೆ ನೂರು ದಿನಗಳನ್ನು ಪೂರೈಸಿದೆ. ಹೌದು..! ಏಪ್ರಿಲ್​ 14ರಂದು ತೆರೆ ಕಂಡಿದ್ದ ಕೆಜಿಎಫ್​ 2 ಇಂದು ಶತದಿನೋತ್ಸವದ ಸಂಭ್ರಮದಲ್ಲಿದೆ. ಈ ಸಂಬಂಧ ನಿರ್ದೇಶಕ ಪ್ರಶಾಂತ್​ ನೀಲ್​​ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.


ಸೋಶಿಯಲ್​ ಮೀಡಿಯಾದಲ್ಲಿ ವಿಶೇಷ ವಿಡಿಯೋವನ್ನು ಶೇರ್​ ಮಾಡಿರುವ ಪ್ರಶಾಂತ್​ ನೀಲ್​, ಈ ಸಿನಿಮಾ ಎಂದಿಗೂ ನೆನಪಿನಲ್ಲಿ ಉಳಿಯಲಿದೆ. ಕೆಜಿಎಫ್​ನ ಆ ಎಮೋಷನ್​ ನಮ್ಮೊಂದಿಗೆ ಶಾಶ್ವತವಾಗಿರಲಿದೆ. ನೂರು ದಿನಗಳ ಭರವಸೆಗೆ ಧನ್ಯವಾದಗಳು ಎಂದು ಶೀರ್ಷಿಕೆ ನೀಡಿದ್ದಾರೆ.

ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ, ಮಲಯಾಳಂ ,ಇಂಗ್ಲೀಷ್​ ಸೇರಿದಂತೆ ಹಲವಾರು ಭಾಷೆಗಳಲ್ಲಿ ತೆರೆ ಕಂಡಿರುವ ಈ ಸಿನಿಮಾ 1350 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್​ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಸಾಧನೆಯನ್ನು ಮಾಡಿದೆ. ಈ ನಡುವೆ ಚಿತ್ರತಂಡ ಕೆಜಿಎಫ್​ 3 ಸಿನಿಮಾದ ಬಗ್ಗೆಯೂ ಸಾಕಷ್ಟು ರೀತಿಯಲ್ಲಿ ಸುಳಿವನ್ನು ನೀಡಿದೆ. ಕೆಜಿಎಫ್​ 3 ಸಿನಿಮಾ ಕೂಡ ಕೆಜಿಎಫ್​ 2 ಸಿನಿಮಾದಂತೆಯೆ ಚಂದನವನದ ಗರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಅನ್ನೋದೇ ಕನ್ನಡ ಸಿನಿ ರಸಿಕರ ಆಶಯವಾಗಿದೆ.

ಇತ್ತ ನಟ ಯಶ್​​ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಎಲ್ಲರ ಮನಸ್ಸಲ್ಲೂ ಮನೆ ಮಾಡಿರುವ ನಡುವೆಯೇ ರಾಕಿಭಾಯ್​ ತಮ್ಮ ಪತ್ನಿ ರಾಧಿಕಾ ಪಂಡಿತ್​ ಜೊತೆಯಲ್ಲಿ ವೆಕೇಷನ್​ ಮೂಡ್​ನಲ್ಲಿದ್ದಾರೆ. ಪತಿ – ಪತ್ನಿಯಿಬ್ಬರೂ ಹೊಸ ಹೊಸ ಜಾಗದಲ್ಲಿ ನಿಂತು ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. ಆದರೆ ತಾವು ಯಾವ ಸ್ಥಳದಲ್ಲಿ ವೆಕೇಷನ್​ ಎಂಜಾಯ್​ ಮಾಡ್ತಿದ್ದೇವೆ ಎಂಬ ಗುಟ್ಟನ್ನು ಬಿಟ್ಟು ಕೊಡದೇ ಅಭಿಮಾನಿಗಳಿಗೇ ಈ ಸ್ಥಳವನ್ನು ಗೆಸ್​ ಮಾಡಿ ಎಂದು ಹೇಳುವ ಮೂಲಕ ತಲೆಗೆ ಹುಳ ಬಿಟ್ಟಿದ್ದಾರೆ. ನಟ ಯಶ್​ರ 19ನೇ ಸಿನಿಮಾ ಯಾವುದಿರಬಹುದು ಎಂಬ ಕುತೂಹಲ ಕೇವಲ ಯಶ್​ ಫ್ಯಾನ್ಸ್​ಗೆ ಮಾತ್ರವಲ್ಲದೇ ಇಡೀ ಸ್ಯಾಂಡಲ್​ವುಡ್​ಗೇ ಇದೆ. ಆದರೆ ಈ ಬಗ್ಗೆ ಯಾವುದೇ ಸುಳಿವನ್ನು ಯಶ್​ ಆಗಲಿ ಅಥವಾ ಯಶ್​ ಆಪ್ತ ಮೂಲಗಳಾಗಲಿ ಬಿಟ್ಟು ಕೊಟ್ಟಿಲ್ಲ.

ಇದನ್ನು ಓದಿ: CBSE class 12 Results declared : CBSE 12 ನೇ ತರಗತಿ ಫಲಿತಾಂಶ 2022 ಪ್ರಕಟ : ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : ಕೋಟದಲ್ಲಿ ಮೀನುಗಾರಿಕಾ ದೋಣಿ ದುರಂತ : ಓರ್ವ ಸಮುದ್ರಪಾಲು

kgf-2 completes 100 days

Comments are closed.