ನಟ ಯಶ್‌ ಕಾಲಿಗೆ ಪೊಲೀಯೋ ? ಇಲ್ಲಿದೆ ವೈರಲ್‌ ವಿಡಿಯೋದ ಅಸಲಿ ಸತ್ಯ

ಇತ್ತೀಚೆಗಷ್ಟೇ ನಟ ಯಶ್, ಹಾಲಿವುಡ್ ಸಾಹಸ ನಿರ್ದೇಶಕರ ಜೊತೆ ಕಾಣಿಸಿಕೊಂಡಿದ್ದರು. ಹೀಗಾಗಿ 19 ನೇ ಸಿನಿಮಾ ಯಾವುದೇ ಆಗಿದ್ದರೂ ಯಶ್ ಸಖತ್ ಆಕ್ಷ್ಯನ್ ಪಾತ್ರದಲ್ಲಿ ಕಾಣಿಸಿಕೊಳ್ಳೋದು ಫಿಕ್ಸ್ ಎನ್ನಲಾಗ್ತಿತ್ತು. ಆದರೆ ಈಗ ಯಶ್ ಬಗ್ಗೆ ಕೀಳುಮಟ್ಟದ ಸುಳ್ಳು ಸುದ್ದಿಯೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿದೆ.

ಸ್ಯಾಂಡಲ್ ವುಡ್ ನ್ನು ಹಾಲಿವುಡ್ (Hollywood) ಎತ್ತರಕ್ಕೆ ಏರಿಸಿದ ರಾಕಿಂಗ್ ಸ್ಟಾರ್ (Rocking Star) ಸದ್ಯ ತಮ್ಮ ಮುಂದಿನ ಸಿನಿಮಾ ಘೋಷಿಸದೇ ಅಭಿಮಾನಿಗಳನ್ನು ಕಾಯಿಸುತ್ತಲೇ ಇದ್ದಾರೆ. ಈ ಮಧ್ಯೆ ಯಶ್ ಬಗ್ಗೆ ನೊರೆಂಟು ಊಹಾಪೋಹಗಳು ಹರಿದಾಡುತ್ತಲೇ ಇದ್ದು,ಯಶ್ (Yash) ಅನಾರೋಗ್ಯಕ್ಕಿಡಾಗಿದ್ದಾರೆ. ಯಶ್ ಕಾಲುಗಳಿಗೆ ಪೊಲೀಯೋ ಆಗಿದೆ ಅನ್ನೋದು ಲೇಟೆಸ್ಟ್ ರೂಮರ್. ಇಂತಹದೊಂದು ವೈರಲ್ ವಿಡಿಯೋದ ಅಸಲಿಯತ್ತೇನು ? ಇಲ್ಲಿದೆ ಎಕ್ಸಕ್ಲೂಸಿವ್ ಸ್ಟೋರಿ.

ನಟ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಹಾಗೂ ಕೆಜಿಎಫ್ 2 (KGF Chapter 2)ಬಳಿಕ ಹಾಲಿವುಡ್ ಮಟ್ಟದಲ್ಲಿ ಸ್ಯಾಂಡಲ್ ವುಡ್ ಬಗ್ಗೆ ಚರ್ಚೆಯಾಗುವಂತ ವಾತಾವರಣ ಸೃಷ್ಟಿಸಿದ್ದಾರೆ. ಹೀಗಾಗಿ ಯಶ್ 19 ನೇ ಸಿನಿಮಾ ಯಾವುದು ಎಂಬುದನ್ನು ಕನ್ನಡ ಚಿತ್ರ ಪ್ರೇಕ್ಷಕರು ಮಾತ್ರವಲ್ಲ ಬಾಲಿವುಡ್, ಟಾಲಿವುಡ್, ಕಾಲಿವುಡ್ ಮಂದಿ ಕೂಡ ಕಾಯ್ತಿದ್ದಾರೆ.

KGF Actor Rocking Star Yash Suffering From Polio? Video Viral On Social Media
Image Credit To Original Source

ಆದರೆ ಅದ್ಯಾವ ಕಾರಣಕ್ಕೋ ಗೊತ್ತಿಲ್ಲ ಯಶ್ 19 ನೇ ಸಿನಿಮಾ ಇನ್ನೂ ಅನೌನ್ಸ್ ಆಗಿಲ್ಲ. ಇದರ ಮಧ್ಯೆ ಯಶ್ 19 ನೇ ಸಿನಿಮಾ ಬಾಲಿವುಡ್ ನಲ್ಲಿ (Bollywood), ಯಶ್ ಮಹಿಳಾ ನಿರ್ದೇಶಕಿ ಜೊತೆ ಮುಂದಿನ ಚಿತ್ರ ಮಾಡಲಿದ್ದಾರೆ ಹೀಗೆ ನಾನಾ ರೀತಿಯ ಉಹಾಪೋಹಗಳು ಯಶ್ ಬಗ್ಗೆ ಹರಿದಾಡುತ್ತಲೇ ಇದೆ.

ಇತ್ತೀಚೆಗಷ್ಟೇ ನಟ ಯಶ್, ಹಾಲಿವುಡ್ ಸಾಹಸ ನಿರ್ದೇಶಕರ ಜೊತೆ ಕಾಣಿಸಿಕೊಂಡಿದ್ದರು. ಹೀಗಾಗಿ 19 ನೇ ಸಿನಿಮಾ ಯಾವುದೇ ಆಗಿದ್ದರೂ ಯಶ್ ಸಖತ್ ಆಕ್ಷ್ಯನ್ ಪಾತ್ರದಲ್ಲಿ ಕಾಣಿಸಿಕೊಳ್ಳೋದು ಫಿಕ್ಸ್ ಎನ್ನಲಾಗ್ತಿತ್ತು. ಆದರೆ ಈಗ ಯಶ್ ಬಗ್ಗೆ ಕೀಳುಮಟ್ಟದ ಸುಳ್ಳು ಸುದ್ದಿಯೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿದೆ.

KGF Actor Rocking Star Yash Suffering From Polio? Video Viral On Social Media
Image Credit To Original Source

ಯಶ್ ವರ್ಕೌಟ್ ಮಾಡುತ್ತಿರುವಂತಹ ವಿಡಿಯೋವೊಂದನ್ನು ಶೇರ್ ಮಾಡಲಾಗಿದ್ದು, ವಿಡಿಯೋದ ಜೊತೆಗೆ ಯಶ್ ಕಾಲಿಗೆ ಪೊಲೀಯೋ ಆಗಿದೆ. ಅದಕ್ಕಾಗಿ ಯಶ್ 19 ನೇ ಸಿನಿಮಾ ಘೋಷಿಸಿಲ್ಲ. ಅವರು ತಮ್ಮ ಕಾಲಿನ ಚೇತರಿಕೆಗಾಗಿ ವ್ಯಾಯಾಮ ಮಾಡುತ್ತಿದ್ದಾರೆ. ಅವರು ಕಾಲು ಚೇತರಿಸಿಕೊಂಡ ಬಳಿಕ ಸಿನಿಮಾದ ಬಗ್ಗೆ ಅಪ್ಡೇಟ್ ನೀಡಲಿದ್ದಾರೆ ಎಂದು ಪೋಸ್ಟ್ ಹಾಕಲಾಗಿದೆ.

ಇದನ್ನೂ ಓದಿ: ಮತ್ತೆ ನಟನೆಗೆ ಮರಳಿದ್ರಾ ನಟಿ ಅಮೂಲ್ಯ ? ಶೇರ್ ಮಾಡಿದ್ರು ಸ್ಪೆಷಲ್‌ ವಿಡಿಯೋ

ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಯಶ್ ಸೊಂಟಕ್ಕೊಂದು ಬೆಲ್ಟ್ ಕಟ್ಟಿಕೊಂಡು ಕಾಲಿನ ಸ್ಟ್ರೆಂತ್ ಹೆಚ್ಚಿಸುವ ಎಕ್ಸೈಜ್ ಮಾಡ್ತಿರೋ ಈ ವಿಡಿಯೋ ನೋಡಿದರೇ ಅದು ಯಾರದ್ದೋ ಕಾಲಿಗೆ ಯಶ್ ದೇಹ ಜೋಡಿಸಿದ ಮಾರ್ಪಿಂಗ್ ವಿಡಿಯೋ ಎಂದು ಗೆಸ್ ಮಾಡುವಂತಿದೆ.

KGF Actor Rocking Star Yash Suffering From Polio? Video Viral On Social Media
Image Credit To Original Source

 

ವಿಡಿಯೋ ನೋಡಿ:

ಬಾಕ್ಸ್ ಆಫಿಸ್- ಸೌತ್ ಇಂಡಿಯಾ (Box Office South India) ಎಂಬ ಹೆಸರಿನ ಎಕ್ಸ್ ನಲ್ಲಿ ಯಶ್ ಬಗ್ಗೆ ಈ ಪೋಸ್ಟ್ ಶೇರ್ ಮಾಡಲಾಗಿದೆ. ಪೋಸ್ಟ್ ಜೊತೆಗೆ ಸಲಾರ್, ಎಸ್ಆರ್ ಕೆ, ಕಿಚ್ಚಾಸುದೀಪ್ ಎಂದು ಟ್ಯಾಗ್ ಮಾಡಲಾಗಿದೆ.

ಇದನ್ನೂ ಓದಿ: ಸಿನಿಮಾ ಶೂಟಿಂಗ್ ಬ್ರೇಕ್ ನಲ್ಲಿ ಹೇಗಿರುತ್ತೆ ಮೇಘನಾ ರಾಜ್ ದಿನಚರಿ ? ಇಲ್ಲಿದೆ ಎಕ್ಸ್‌ಕ್ಲೂಸಿವ್ ವಿಡಿಯೋ

ಅಕ್ಟೋಬರ್ 17 ರಂದು ಸಂಜೆ 5.12 ಕ್ಕೆ ಈ ವಿಡಿಯೋ ಶೇರ್ ಮಾಡಲಾಗಿದೆ. ‌ಮೇಲ್ನೋಟಕ್ಕೆ ಫೇಕ್ ಎನ್ನಿಸುತ್ತಿರುವ ಈ ವಿಡಿಯೋವನ್ನು ಬರೋಬ್ಬರಿ 21.1 ಸಾವಿರ ಜನರು ಒಂದು ದಿನದಲ್ಲಿ ನೋಡಿದ್ದು, ಎಲ್ಲರೂ ಇದು ಸುಳ್ಳು ಸುದ್ದಿ ಮತ್ತು ವಿಡಿಯೋ ಎಂದು ಕಮೆಂಟ್ ಮಾಡ್ತಿದ್ದಾರೆ.

KGF Actor Rocking Star Yash Suffering From Polio? Video Viral On Social Media
Image Credit To Original Source

ಆದರೆ ಸದ್ಯ ಈ ವಿಡಿಯೋ ಗೆ ಯಶ್ ಅಥವಾ ಸ್ಯಾಂಡಲ್ ವುಡ್ ಯಾರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಯಶ್ ಫ್ಯಾನ್ಸ್ ಮಾತ್ರ ಯಶ್ ಫೇಕ್ ವಿಡಿಯೋ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಶ್ ಸಿನಿಮಾ ವಿಳಂಬವಾಗ್ತಿರೋದಿಕ್ಕೆ ಕಾರಣ ಏನೇ ಇರಲಿ.‌ಆದರೆ ಈ ರೀತಿಯ ಕೀಳುಮಟ್ಟದ ವಿಡಿಯೋ ಹರಿಬಿಡೋದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಅಭಿಮಾನಿಗಳ ಆಕ್ರೋಶ. ಸದ್ಯದಲ್ಲೇ ಯಶ್ ಅಭಿಮಾನಿಗಳು ಈ‌ಬಗ್ಗೆ ದೂರು ದಾಖಲಿಸಲಿದ್ದು, ಬಳಿಕ ಇದರ ಹಿಂದೆ ಯಾರಿದ್ದಾರೆ ಅನ್ನೋ ಸತ್ಯ ಹೊರಬೀಳಲಿದೆ

Comments are closed.