KGF Chapter 2 : ಅಮುಲ್ ಟೇಸ್ಟ್ ಆಫ್ ಇಂಡಿಯಾ ಎಂಬ ಮಾತು ಎಷ್ಟು ಸತ್ಯವೋ.. ಸೋಶಿಯಲ್ ಮೀಡಿಯಾದಲ್ಲಿ ಅಮುಲ್ ತನ್ನ ಕ್ರಿಯೇಟಿವಿಟಿಯನ್ನು ಪದೇ ಪದೇ ಪ್ರೂವ್ ಮಾಡುತ್ತೆ ಎನ್ನುವುದು ಕೂಡ ಅಷ್ಟೇ ಸತ್ಯ. ಕೆಲವು ದಿನಗಳ ಹಿಂದಷ್ಟೇ ಬ್ಲಾಕ್ಬಸ್ಟರ್ನಲ್ಲಿ ಭರ್ಜರಿ ಸೌಂಡ್ ಮಾಡಿದ್ದ ಆರ್ಆರ್ಆರ್ ಹಾಗೂ ಪುಷ್ಪಾ : ದಿ ರೈಸ್ ಸಿನಿಮಾಗಳಲ್ಲಿನ ಪಾತ್ರಗಳನ್ನು ಕಾಮಿಕ್ ಮಾಡುವ ಮೂಲಕ ಅಮುಲ್ ಸಿನಿಮಾ ಅಭಿಮಾನಿಗಳ ಮೆಚ್ಚುಗೆಯನ್ನು ಗಳಿಸಿತ್ತು. ಇದೀಗ ಬಾಕ್ಸಾಫೀಸಿನಲ್ಲಿ ಬಾದ್ಶಾ ಎನಿಸಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ಕೂಡ ಅಮುಲ್ ಚಿಂತನೆಯಲ್ಲಿ ಮೂಡಿ ಬಂದಿದೆ.
ಅಮುಲ್ನ ಪ್ರಸಿದ್ಧ ಕಾಮಿಕ್ ಪಾತ್ರವನ್ನು ರಾಕಿ ಭಾಯ್ ರೂಪದಲ್ಲಿ ರಚಿಸಲಾಗಿದೆ. ಕೆಜಿಎಫ್ 2 ಸಿನಿಮಾದಲ್ಲಿ ಯಶ್ ಯಾವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೋ ಅದೇ ರೀತಿಯಲ್ಲಿ ಈ ಕಾಮಿಕ್ನ್ನು ರಚಿಸಲಾಗಿದೆ. ಈ ಪೋಸ್ಟ್ನಲ್ಲಿ ರಾಕಿ ಭಾಯ್ ರಾಕಿ ಎಂದು ಬರೆಯಲಾದ ಬೈಕ್ ಮೇಲೆ ಕುಳಿತು ಬ್ರೆಡ್ & ಬಟರ್ ಸವಿಯುತ್ತಿದ್ದಾರೆ. ಈ ಫೋಟೋದ ಮೇಲೆ ಕೋಲಾರದಲ್ಲಿ ಚಿನ್ನವಿಡಿ.ಅಮುಲ್ ಇದನ್ನು ಯಶ್ಗೆ ಹೇಳಿ ಎಂದು ಬರೆಯಲಾಗಿದೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾದ ಈವರೆಗಿನ ಸ್ಯಾಂಡಲ್ವುಡ್ ಇಂಡಸ್ಟ್ರಿಯಲ್ಲಿಯೇ ದೊಡ್ಡ ಬಜೆಟ್ನ ಸಿನಿಮಾವಾಗಿದೆ. ಈ ಸಿನಿಮಾವನ್ನು 100 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಿಸಲಾಗಿದೆ. ಆದರೆ ಸಿನಿಮಾ ತೆರೆ ಕಂಡ ಕೇವಲ ಐದು ದಿನಗಳಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ 500 ಕೋಟಿ ರೂಪಾಯಿಗಳನ್ನು ಗಳಿಸಿದೆ.
ಅಮುಲ್ ಪೋಸ್ಟ್ ಮಾಡಿರುವ ಈ ಫೋಟೋವು ಕೆಲವೇ ಕೆಲವು ನಿಮಿಷಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ 5 ಸಾವಿರಕ್ಕೂ ಅಧಿಕ ಲೈಕ್ಸ್ ಸಂಪಾದಿಸಿದೆ. ಕಮೆಂಟ್ ಸೆಕ್ಷನ್ನಲ್ಲಿಯೂ ಕೂಡ ಯಶ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಅಮುಲ್ ಇಂಡಿಯಾವು ವಿಶ್ವದಲ್ಲಿ ನಡೆಯುವು ಸೆನ್ಸೇಷನಲ್ ವಿಷಯಗಳನ್ನು ಕಾಮಿಕ್ ರೂಪದಲ್ಲಿ ಪ್ರಕಟಿಸುತ್ತದೆ. ಅಮುಲ್ ಇಂಡಿಯಾದ ಕ್ರಿಯೇಟಿವಿಟಿಯು ಎಲ್ಲರ ಗಮನ ಸೆಳೆಯುವಂತೆ ಮಾಡುತ್ತದೆ. ಕೆಲವು ದಿನಗಳ ಹಿಂದಷ್ಟೇ ಅಮುಲ್ ಎಲಾನ್ ಮಸ್ಕ್ರನ್ನು ಚಿತ್ರಿಸಿತ್ತು. ಮಸ್ಕ್ ಕೈಯಲ್ಲಿ ಪಂಜರವನ್ನು ಹಿಡಿದು ಟ್ವಿಟರ್ನ ಹಕ್ಕಿಯನ್ನು ಅದರೊಳಗೆ ಹಾಕಲು ಯತ್ನಿಸುತ್ತಿರುವ ರೀತಿಯಲ್ಲಿ ಕಾಮಿಕ್ನ್ನು ಬಿಡಿಸಲಾಗಿತ್ತು.
ಕೆಜಿಎಫ್ ಚಾಪ್ಟರ್ 2 ಸಿನಿಮಾವು ಏಪ್ರಿಲ್ 14ರಿಂದ ಸಿನಿಮಾ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. 2018ರಲ್ಲಿ ಕೆಜಿಎಫ್ ಸಿನಿಮಾ ತೆರೆ ಕಂಡಿತ್ತು. ಇದಾದ ಬಳಿಕ ಕೋವಿಡ್ ಕಾರಣದಿಂದಾಗಿ ಸಾಕಷ್ಟು ಬಾರಿ ಮುಂದೂಡಿಕೆಯಾಗಿದ್ದ ಕೆಜಿಎಫ್ 2 ಸಿನಿಮಾ ಕೊನೆಗೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟರಾದ ಸಂಜಯ್ ದತ್ ಹಾಗೂ ರವೀನಾ ಟಂಡನ್ರಂತಹ ದಿಗ್ಗಜರು ಅಭಿನಯಿಸಿದ್ದಾರೆ.
ಇದನ್ನು ಓದಿ : Kajal Aggarwal : ಗಂಡು ಮಗುವಿಗೆ ಜನ್ಮ ನೀಡಿದ ನಟಿ ಕಾಜಲ್ ಅರ್ಗವಾಲ್
KGF Chapter 2: Amul celebrates Yash-starrer film’s success with latest topical