Man Stabs Sister-In-Law : ವ್ಯಾಸಂಗಕ್ಕೆ ಅಡ್ಡಿಯಾಯ್ತೆಂದು ಅತ್ತಿಗೆಯನ್ನೇ ಇರಿದು ಕೊಂದ ಮೈದುನ..!

Man Stabs Sister-In-Law : ವೈದ್ಯಕೀಯ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕನೊಬ್ಬ ತನ್ನ ಅಂಬೆಗಾಲಿಡುವ ಸೋದರಳಿಯ ನಿರಂತರವಾಗಿ ಅಳುತ್ತಿರುವುದರಿಂದ ಕೋಪಗೊಂಡ ಪರಿಣಾಮ 22 ವರ್ಷದ ತನ್ನ ಅತ್ತಿಗೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಬೆಚ್ಚಿ ಬೀಳಿಸುವ ಘಟನೆಯು ಮಧ್ಯ ಪ್ರದೇಶದ ಭೋಪಾಲ್​​ನಲ್ಲಿ ನಡೆದಿದೆ.


ವೈದ್ಯಕೀಯ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮೈದುನ ಮನೋಜ್​ ಅಹಿರ್ವಾರ್​ ಎಂಬಾತ 25 ವರ್ಷದ ಕವಿತಾ ಅಹಿರ್ವಾರ್​ ಎಂಬವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಗಾಂಧಿ ನಗರ ಪೊಲೀಸ್​ ಠಾಣೆಯ ಇನ್​​ಸ್ಪೆಕ್ಟರ್​​ ಅರುಣ್​ ಕುಮಾರ್​ ಶರ್ಮಾ ಮಾಹಿತಿ ನೀಡಿದ್ದಾರೆ.


ಆರೋಪಿ ಮನೋಜ್​ ಅಹಿರ್ವಾರ್​​ ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ ನೀಟ್​ಗಾಗಿ ತಯಾರಿ ನಡೆಸುತ್ತಿದ್ದ.ಮನೆಯಲ್ಲಿ ಓದುತ್ತಾ ಕುಳಿತಿದ್ದ ವೇಳೆಯಲ್ಲಿ ಅಲ್ಲಿಯೇ ಇದ್ದ ಎರಡು ವರ್ಷದ ಸೋದರಳಿಯ ನಿರಂತರವಾಗಿ ಅಳುತ್ತಿದ್ದ ಎನ್ನಲಾಗಿದೆ. ಮನೋಜ್​ ಮಗು ಅಳುವುದಿಲ್ಲ ಅಲ್ಲವೇ ಎಂದು ಕೊಲೆಯಾದ ಮಹಿಳೆಯನ್ನು ಮೊದಲೇ ಕೇಳಿದ್ದ ಎನ್ನಲಾಗಿದೆ. ಆದರೆ ಇದಕ್ಕೆ ಕೊಲೆಯಾದ ಮಹಿಳೆಯು ಮಗು ಅಳುವುದಿಲ್ಲ ಎಂದು ಹೇಳಿದ್ದಳು ಎನ್ನಲಾಗಿದೆ.


ಮಗು ನಿರಂತರವಾಗಿ ಅಳುತ್ತಿದ್ದರಿಂದ ಕೋಪಗೊಂಡ ಮನೋಜ್​ ಅಡುಗೆ ಮನೆಯಿಂದ ಚಾಕುವನ್ನು ತಂದು ಮಹಿಳೆಗೆ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ವಿಚಾರವಾಗಿ ಅತ್ತಿಗೆ ಹಾಗೂ ಮೈದುನನ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಈ ಘಟನೆ ನಡೆಯುವ ದಿನವೂ ಕೂಡ ಕುಟುಂಬಸ್ಥರು ಅವರವರ ಕೆಲಸಗಳಲ್ಲಿ ನಿರತರಾಗಿದ್ದರು. ಹೀಗಾಗಿ ಯಾರೂ ಇವರ ಗಲಾಟೆಯ ಕಡೆಗೆ ಗಮನ ನೀಡಿರಲಿಲ್ಲ.


ಮಾಹಿತಿ ತಿಳಿಯುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹಾಗೂ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : Kajal Aggarwal : ಗಂಡು ಮಗುವಿಗೆ ಜನ್ಮ ನೀಡಿದ ನಟಿ ಕಾಜಲ್​ ಅರ್ಗವಾಲ್​​

ಇದನ್ನೂ ಓದಿ : Groom Arrest : ತಾಳಿ ಕಟ್ಟುವ ವೇಳೆಯಲ್ಲೇ ಅತ್ಯಾಚಾರ ಕೇಸ್‌ನಲ್ಲಿ ವರ ಅರೆಸ್ಟ್‌

Man Stabs Sister-In-Law To Death After Nephew Disrupts His Studies In Bhopal

Comments are closed.