DK Shivakumar : ನನ್ನ ಹೆಸರು ಕೇಳಿದರೆ ಕೆಲವರಿಗೆ ಶಕ್ತಿ ಬರುತ್ತೆ : ಡಿ.ಕೆ ಶಿವಕುಮಾರ್ ವ್ಯಂಗ್ಯ

ಬೆಳಗಾವಿ : DK Shivakumar : ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣವು ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ಪರಸ್ಪರ ಆರೋಪ – ಪ್ರತ್ಯಾರೋಪಗಳಿಗೆ ವೇದಿಕೆಯನ್ನು ಕಲ್ಪಿಸಿದೆ. ಬಿಜೆಪಿಯದ್ದು ಪರ್ಸಂಟೇಜ್​ ಸರ್ಕಾರ ಎನ್ನುವುದು ಕಾಂಗ್ರೆಸ್​ ಆರೋಪವಾದರೆ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿಯೂ ಭ್ರಷ್ಟಾಚಾರಗಳು ನಡೆದಿವೆ. ಅವುಗಳ ದಾಖಲೆ ನಮ್ಮ ಬಳಿ ಇದೆ ಎಂದು ಬಿಜೆಪಿ ನಾಯಕರ ಪ್ರತ್ಯಾರೋಪವಾಗಿದೆ .


ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಕಮಿಷನ್​ ಚರ್ಚೆ ವಿಚಾರವಾಗಿ ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿ ಮಾತನಾಡಿದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್, ರಾಜ್ಯದ ಯಾವೆಲ್ಲ ಕಡೆಗಳಲ್ಲಿ ಕಮಿಷನ್​ ವ್ಯವಹಾರಗಳು ನಡೆಯುತ್ತಿವೆಯೂ ಅವೆಲ್ಲವೂ ಈ ಕೂಡಲೇ ಬಂದ್​ ಆಗಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ರಮೇಶ್​ ಜಾರಕಿಹೊಳಿಯಿಂದ ಮಹಾನಾಯಕನ ಹೆಸರು ಹೇಳಿಕೆ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಡಿಕೆಶಿ ಇದಕ್ಕೆಲ್ಲ ಮುಹೂರ್ತ, ಟೈಮ್​ ಎಲ್ಲ ಏಕೆ ಬೇಕು..? ಅವರ ಕಾಲದಲ್ಲಿ ಕೆಲಸ ಆರಂಭವಾಗಿರೋದಕ್ಕೆ ದಾಖಲೆ ಇದೆ. ಮುಕ್ತವಾಗಿ ಜನರ ಮುಂದೆ ಎಲ್ಲವೂವನ್ನು ಇಡಲಿ. ಈ ಹಿಂದೆ ಜನರ ಮುಂದೆ ಎಲ್ಲಾ ಬಿಚ್ಚಿಟ್ಟಿದ್ದಾರೆ, ಇದನ್ನೂ ಕೂಡ ಬಿಚ್ಚಿಡಲಿ ಎಂದು ಟಾಂಗ್​ ನೀಡಿದರು.


ಗೋಕಾಕ್​ನಲ್ಲಿ ಗುತ್ತಿಗೆದಾರು ಸಹ ರಮೇಶ್​ ಜಾರಕಿಹೊಳಿಯನ್ನು ಭೇಟಿಯಾಗಿದ್ದಾರೆ. ನನ್ನ ನೋಡಿದ ತಕ್ಷಣ ಕೆಲವರಿಗೆ ಖುಷಿ. ರಾಮ, ಹನುಮಾನ್ ಹೇಳಿದ್ರೆ ಕೆಲವರಿಗೆ ಶಕ್ತಿ ಬರುತ್ತದೆ. ಹಾಗೆ ನನ್ನ ಹೆಸರು ಹೇಳಿದ್ರೆ ಶಕ್ತಿ ಬರುತ್ತಿದೆ ಖುಷಿಯಾಗುತ್ತದೆ ಎಂದು ಡಿ.ಕೆ ಶಿವಕುಮಾರ್​ ವ್ಯಂಗ್ಯವಾಡಿದರು.


ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಗಳ ಬಂಧನ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಎಫ್​ಐಆರ್​ನಲ್ಲಿರುವ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿಲ್ಲ. ಇದೊಂದು ದಪ್ಪ ಚರ್ಮದ ಸರ್ಕಾರ. ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಚಿವ ಈಶ್ವರಪ್ಪ ಪರವೇ ಬ್ಯಾಟ್​ ಬೀಸುತ್ತಿದ್ದಾರೆ ಎಂದು ಹೇಳಿದರು. ಇದೇ ವೇಳೆ ಹುಬ್ಬಳ್ಳಿ ಗಲಾಟೆ ವಿಚಾರವಾಗಿಯೂ ಸ್ಪಷ್ಟನೆ ನೀಡಿದ ಅವರು ಇದಕ್ಕೂ ಕಾಂಗ್ರೆಸ್​ಗೂ ಯಾವುದೇ ಸಂಬಂಧವಿಲ್ಲ ಅಂತಂದ್ರು.

ಇದನ್ನು ಓದಿ : Siddaramaiah : ಸತ್ತವರ ಪರ ಹೋರಾಟ ಮಾಡಿದರೆ ಸಣ್ಣ ವಿಚಾರವೇ? ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ಇದನ್ನೂ ಓದಿ : basanagowda patil yatnal : ಗೃಹ ಸಚಿವ ಜ್ಞಾನೇಂದ್ರ ವಿರುದ್ಧ ಅಸಮಾಧಾನ ಹೊರ ಹಾಕಿದ ಶಾಸಕ ಯತ್ನಾಳ್​

DK Shivakumar’s outrage against BJP government

Comments are closed.