ಕೆಜಿಎಫ್ 2 (KGF Chapter 2 ) ಸಿನಿಮಾ ಎಲ್ಲರ ನೀರಿಕ್ಷೆಯನ್ನು ಮೀರಿ ಗಲ್ಲಾಪೆಟ್ಟಿಗೆಯಲ್ಲಿ ಮೋಡಿ ಮಾಡಿದೆ. ಬಿಡುಗಡೆಯಾದ 10 ದಿನಗಳ ಬಳಿಕವೂ ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಸಿದ್ದು, ಸಾವಿರ ಕೋಟಿ ಕಲೆಕ್ಷನ್ ನತ್ತ ಹೆಜ್ಜೆ ಹಾಕುತ್ತಿದೆ. ಸಿನಿಮಾದ ಈ ಅಭೂತಪೂರ್ವ ಯಶಸ್ಸಿನ ಅಲೆಯಲ್ಲಿ ತೇಲ್ತಿರೋ ಚಿತ್ರತಂಡ ಈಗ ಗೋವಾದಲ್ಲಿ ಬೀಡು ಬಿಟ್ಟಿದ್ದು, ಸಿನಿಮಾ ಸಕ್ಸಸ್ ನ್ನು ಎಂಜಾಯ್ ಮಾಡ್ತಿದೆ.
ಕೋಟಿ ಬಜೆಟ್ ಸಿನಿಮಾಗಳೇ ಅಪರೂಪವಾಗಿದ್ದ ಸ್ಯಾಂಡಲ್ ವುಡ್ ಗೆ ಹೊಸ ಭಾಷ್ಯ ಬರೆದ ಸಿನಿಮಾಕೆಜಿಎಫ್ . ವಿಶ್ವವೇ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡಿದ ಈ ಸಿನಿಮಾ ನೊರೆಂಟು ದಾಖಲೆ ಬರೆದು ಮುಂದೇ ಸಾಗುತ್ತಿದೆ. ಹೀಗಾಗಿ ಮೂರು ವರ್ಷಗಳ ಕಾಲ ಸಿನಿಮಾ ಶೂಟಿಂಗ್ ಎಡಿಟಿಂಗ್ ಹೀಗೆ ನಾನಾ ಕೆಲಸದಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡ ಈಗ ಈ ಸಿನಿಮಾದ ಗೆಲುವಿನ ಖುಷಿಯನ್ನು ಎಂಜಾಯ್ ಮಾಡ್ತಿದೆ. ಇದಕ್ಕಾಗಿ ಗೋವಾದಲ್ಲಿ ಚಿತ್ರತಂಡ ಬೀಡು ಬಿಟ್ಟಿದ್ದು, ಐಷಾರಾಮಿ ಪಾರ್ಟಿ ಹಾಲ್ ವೊಂದರಲ್ಲಿ ಹಾಗೂ ಸಮುದ್ರ ತೀರದಲ್ಲಿ ಕೆಜಿಎಫ್-2 ಸಕ್ಸಸ್ ಪಾರ್ಟಿ ನಡೆದಿದೆಯಂತೆ.

ಈ ಸಕ್ಸಸ್ ಪಾರ್ಟಿಯ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಯಶ್ ರನ್ನು( YASH) ಹೊಂಬಾಳೆ ಫಿಲ್ಮ್ಸ್ ಮಾಲೀಕ ಹಾಗೂ ನಿರ್ಮಾಪಕ ವಿಜಯ್ ಕಿರಂಗದೂರು (Vijay Kirgandur) ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಚುಂಬಿಸಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ . ಕೇಕ್ ಕಟ್ಟಿಂಗ್, ಹಾಡು, ಡ್ಯಾನ್ಸ್ ಹೀಗೆ ಅದ್ದೂರಿಯಾಗಿ ಈ ಸಕ್ಸಸ್ ಮೀಟ್ ನಡೆದಿದ್ದು, ಇದರಲ್ಲಿ ನಿರ್ಮಾಪಕ ವಿಜಯ್ ಕಿರಂಗದೂರು ಪತ್ನಿ, ನಿರ್ದೇಶಕ ಪ್ರಶಾಂತ್ ನೀಲ್ ಪತ್ನಿ ಹಾಗೂ ಫೋಟೋಗ್ರಾಫರ್ ಭುವನ್, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ನಿರ್ದೇಶಕ ಸೂರಿ, ಕಾಸ್ಟ್ಯೂಮ್ ಡಿಸೈನರ್ ಸೇರಿದಂತೆ ಕೆಜಿಎಫ್-2 ಯಶಸ್ಸಿಗೆ ಕಾರಣರಾದ ಎಲ್ಲರೂ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ.

ಯಶ್ ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಫ್ಯಾಮಿಸಿ ವೆಕೆಶನ್ ಗಾಗಿ ಗೋವಾಕ್ಕೆ ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ತೆರಳಿದ್ದರು. ನಟಿ ರಾಧಿಕಾ ಅತ್ಯಂತ ಹೆಚ್ಚು ಪ್ರೀತಿಸುವ ಅವರ ಅಜ್ಜಿ ಮನೆ ಕೂಡ ಗೋವಾದಲ್ಲೇ ಇರೋದರಿಂದ ರಾಧಿಕಾ ಪಂಡಿತ್ ಆಗಾಗ ಗೋವಾಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಹೀಗಾಗಿ ಫ್ಯಾಮಿಲಿ ವೆಕೆಶನ್ ಬಳಿಕ ಯಶ್ ಕೆಜಿಎಫ್-2 ಸಕ್ಸಸ್ ಮೀಟ್ ನಲ್ಲೂ ಭಾಗಿಯಾಗಿದ್ದಾರೆ. ಸದ್ಯ ಇನ್ನೇನು ಕೆಲವು ಗಂಟೆಗಳಲ್ಲಿ ಕೆಜಿಎಫ್-2 ಸಾವಿರ ಕೋಟಿ ಕ್ಲಬ್ ಸೇರ್ಪಡೆಗೊಳ್ಳಲಿದ್ದು, ಬಾಲಿವುಡ್ ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಖ್ಯಾತಿಗೂ ಭಾಜನವಾಗಲಿದೆ.
ಇದನ್ನೂ ಓದಿ : ಬಿಕನಿಗಳ ಮೇಲೆ ಹಿಂದೂ ದೇವರ ಚಿತ್ರ: ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಗಳ ಸುರಿಮಳೆ
ಇದನ್ನೂ ಓದಿ : ಕೆಜಿಎಫ್-3 ನಲ್ಲಿ ರಾಕಿಬಾಯ್ ಯಶ್ ಜೊತೆ ಸಲಾರ್ ಹೀರೋ ಪ್ರಭಾಸ್
KGF Chapter 2 Succuss Party in Goa, Yash Vijay Kirgandur, Prashanth Neel