Director Dilipkumar : ಮಾವ ರಜನಿಕಾಂತ್ ನಂತರ, ಮಾಜಿ ಅಳಿಯನ ಜೊತೆ ಹೊಸ ಸಿನಿಮಾ!

ವಿಜಯ್ ತಂದೆ, ಬೀಸ್ಟ್ ಸಿನಿಮಾ ಸೋಲುವುದಕ್ಕೆ ನಿರ್ದೇಶಕರೆ ಕಾರಣ ಅಂದರಲ್ಲ. ಅದೇ ನಿರ್ದೇಶಕ ನೆಲ್ಸನ್ ದಿಲೀಪಕುಮಾರ್(Director Dilipkumar) ಈ ಸುದ್ದಿಯಾಗಿದ್ದಾರೆ. ಕಳೆದವಾರವಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದರು. ಈಗಾಗಲೇ ಗ್ರೌಂಡ್ ವರ್ಕ್ ನಡೆಯುತ್ತಿದೆ ಎಂದು ಹೇಳಿಕೊಂಡಿದ್ದರು. ಆ ಸಿನಿಮಾದ ಹೆಸರು ತಲೈವಾ 169 ಅಂತ.

ಈಗ ಮತ್ತೊಂದು ಸುದ್ದಿ ಏನೆಂದರೆ, ದಿಲೀಪಕುಮಾರ್ ರಜನಿಕಾಂತ್ ಸಿನಿಮಾ ಮುಗಿಸಿದ ನಂತರ, ಅವರ ಮಾಜಿ ಅಳಿಯ ಧನುಷ್ ಅವರ ಸಿನಿಮಾವನ್ನೂ ನಿರ್ದೇಶನ ಮಾಡುತ್ತಿದ್ದಾರಂತೆ. ದಿಲೀಪಕುಮಾರ್ ಈಗಾಗಲೇ ಧನುಷ್ ಅವರನ್ನು ಕೂಡಿಸಿಕೊಂಡು ಕತೆಯ ಒನ್ ಲೈನ್ ಹೇಳಿದ್ದಾರಂತೆ. ಕತೆ ಕೇಳಿದ ಧನುಷ್ ಸಿನಿಮಾ ಮಾಡುವ ಬಗ್ಗೆ ಯಾವುದೇ ತೀರ್ಮಾನ ಮಾತ್ರ ಕೈಗೊಂಡಿಲ್ಲ ಎನ್ನಲಾಗುತ್ತದೆ. ಧನುಷ್ ಕೈತುಂಬಾ ಚಿತ್ರಗಳು ಇರುವುದರಿಂದ ಈ ಬಗ್ಗೆ ಅವರು ಇನ್ನೂ ಯೋಚಿಸಿಲ್ಲ ಎನ್ನುವ ಮಾತೂ ಇದೆ.

ಈ ಮೊದಲು ತಲೈವಾರ್ ಸಿನಿಮಾಕ್ಕೆ ನಿರ್ದೇಶಕರನ್ನು ಬದಲಾಯಿಸಲಾಗುತ್ತದೆ ಎನ್ನುವ ಗಾಳಿ ಸುದ್ದಿ ಓಡಾಡುತ್ತಿತ್ತು. ರಜನಿಕಾಂತ್ ಮೂಲಗಳು ಈ ಸುದ್ದಿಯನ್ನು ತಳ್ಳಿಹಾಕಿದ್ದವು. ರಜನಿಕಾಂತ್ ಕೂಡ ತಮ್ಮ ಟ್ವಿಟರ್ ಖಾತೆಯ ಕವರ್ ಪೇಜ್ ಅನ್ನು ತಲೈವಾರ್ 169 ಸಿನಿಮಾ ಪೋಸ್ಟರ್ ಹಾಕಿಕೊಳ್ಳುವ ಮೂಲಕ ಗಾಳಿಗೆಸುದ್ದಿಗೆ ಉತ್ತರ ಕೊಟ್ಟಿದ್ದರು.

ಈ ಮಧ್ಯೆ, ದಿಲೀಪಕುಮಾರ್ ಇತ್ತೀಚೆಗೆ ರಜನಿಕಾಂತ್ ಅವರೊಂದಿಗೆ ತಲೈವಾರ್ 169 ಕೆಲಸ ಮಾಡುತ್ತಿರುವುದಾಗಿ ಘೋಷಿಸುವ ಮೂಲಕ ಗಾಳಿ ಸುದ್ದಿ ಹಬ್ಬಿಸುವವರಿಗೆ ಪ್ರತ್ಯತ್ತರ ನೀಡಿದ್ದರು. ತಲೈವಾರ್ ಸಿನಿಮಾ ಚಿತ್ರೀಕರಣ ಆರಂಭಗೊಳ್ಳಲು ಸಮಯ ಹಿಡಿಯುತ್ತಿದೆ. ಸ್ಕ್ರಿಪ್ಟ್ ಕೆಲಸ ಸಂಪೂರ್ಣ ಗೊಂಡ ನಂತರ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಿದ್ದರು.

ಇತ್ತ ಧನುಷ್ ಸೆಲ್ವರಾಘವನ್ ಅವರ ನಾನಿ ವರುವನ್ ಸಿನಿಮಾವನ್ನು ಪೂರ್ಣಗೊಳಸಿದ್ದಾರೆ. ತಿರುಚಿತ್ರಂಬಲಮ್ ಸಿನಿಮಾದ ಕಡೆ ಹಂತದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಇದಾದ ನಂತರ ವಾತಿ ಸಿನಿಮಾದಲ್ಲಿ ತೊಡಗಿಕೊಳ್ಳುವ ಷೆಡ್ಯುಲ್ ಹಾಕಿಕೊಂಡಿದ್ದಾರೆ. ಎಲ್ಲದರ ನಂತರ, ನೆಲ್ಸನ್ ದಿಲೀಪಕುಮಾರ್ ಅವರ ಸಿನಿಮಾ ಮಾಡಬಹುದು ಎನ್ನುವ ಲೆಕ್ಕಾಚಾರವಿದೆಯಾದರೂ, ಧನುಷ್ ಅಧಿಕೃತವಾಗಿ ಘೋಷಣೆಯಾಗಬೇಕಿದೆ.

ಇದನ್ನೂ ಓದಿ : KGF 3 : ತೆರೆಗೆ ಬರುತ್ತಾ ಕೆಜಿಎಫ್-3 : ಮುಂದುವರಿಯುತ್ತೆ ರಾಕಿಬಾಯ್‌ ಅಬ್ಬರ

ಇದನ್ನೂ ಓದಿ : Amitabh Bachchan Grandson : ಅಮಿತಾಭ್ ಬಚ್ಚನ್ ಮೊಮ್ಮಗನ ಬಾಲಿವುಡ್ ಪ್ರವೇಶ

(Director Dilipkumar Will Actor rajanikanth and dhanush both act in dilipkumar film)

Comments are closed.