Prabhas -Yash : ಕೆಜಿಎಫ್-3 ನಲ್ಲಿ ರಾಕಿಬಾಯ್ ಯಶ್‌ ಜೊತೆ‌ ಸಲಾರ್‌ ಹೀರೋ ಪ್ರಭಾಸ್‌

ಕೆಜಿಎಫ್-2 ಸಿನಿಮಾ ರಿಲೀಸ್ ಆಗಿ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಕೆಜಿಎಫ್-3 ಬಗ್ಗೆ ಚರ್ಚೆ ಆರಂಭಗೊಂಡಿದೆ. ಕೆಜಿಎಫ್-3 ತೆರೆಗೆ ಬರಲಿದೆ ಎಂಬುದನ್ನು ಪ್ರಶಾಂತ್ ನೀಲ್ ಖಚಿತಪಡಿಸಿದ್ದರೂ ಆ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಆದರೆ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಯಶ್ (YASH) ಗೆ ಕೆಜಿಎಫ್ -3 (KGF-3)ದಲ್ಲಿ ಹಲವು ಬಿಗ್ ಸ್ಟಾರ್ ಗಳು ಜೊತೆಯಾಗೋದು ಫಿಕ್ಸ್ ಎನ್ನಲಾಗಿದೆ. ಈ ಪೈಕಿ ಟಾಲಿವುಡ್ ಸ್ಟಾರ್ ಪ್ರಭಾಸ್ (Prabhas) ಹೆಸರು ಕೂಡ ಕೇಳಿಬಂದಿದೆ.

ಸದ್ಯ ಸಿನಿಮಾ ರಿಲೀಸ್ ಆದ 10 ದಿನಗಳ ಬಳಿಕವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಕೆಜಿಎಫ್-2 . ಇದರ ಮಧ್ಯೆಯೇ ಇನ್ನೊಂದು ವರ್ಷದ ಅವಧಿ ಬಳಿಕ ಇದೇ ಮಾದರಿಯಲ್ಲಿ ಕೆಜಿಎಫ್-3 ತೆರೆಗೆ ಬರಲಿದೆ ಅಂತಾನೂ ಪ್ರಶಾಂತ್ ನೀಲ್ ಹೇಳಿದ್ದಾರೆ. ಹೀಗಾಗಿ ಈಗ ಕೆಜಿಎಫ್-2 ಜೊತೆ ಜೊತೆಗೆ ಕೆಜಿಎಫ್-3 ಬಗ್ಗೆಯೂ ಚರ್ಚೆ ಜೋರಾಗಿದೆ. ಕೆಜಿಎಫ್-3 ದಲ್ಲಿ ಕತೆ ಏನಿರುತ್ತೆ. ಹೀರೋನಿಗೆ ಸರಿಸಾಟಿಯಾಗಿ ನಿಲ್ಲೋ ವಿಲನ್ ಯಾರು? ಹೀಗೆ ನೊರೆಂಟು ಚರ್ಚೆಗಳು ಸಿನಿಮಾ ರಂಗದಲ್ಲಿ ಸದ್ದು ಮಾಡ್ತಿದೆ.

ಸದ್ಯ ಕೆಜಿಎಫ್-2 ಗೆಲುವಿನ ಖುಷಿಯಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಟಾಲಿವುಡ್ ನ ಬಹುನೀರಿಕ್ಷಿತ ಸಲಾರ್ ಸಿನಿಮಾದತ್ತ ಗಮನಹರಿಸಿದ್ದಾರೆ. ಈ ಮಧ್ಯೆ ಸಲಾರ್ ಸಿನಿಮಾದ ಬಳಿಕ ಪ್ರಭಾಸ್ ರಾಕಿಂಗ್ ಸ್ಟಾರ್ ಯಶ್ ಜೊತೆ ಕೆಜಿಎಫ್-3 ದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಮಾತುಕತೆ ನಡೆದಿದ್ದು, ಕೆಜಿಎಫ್-೩ ದಂತಹ ಮಾಸ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪಾತ್ರ ಮಾಡಲು ಪ್ರಭಾಸ್ ಖುಷಿಯಿಂದ ಒಪ್ಪಿಕೊಂಡಿದ್ದಾರಂತೆ.

ಆದರೆ ಕೆಜಿಎಫ್-3 ಯಾವ ಕತೆಯನ್ನು ಆಧರಿಸಿ ನಿರ್ಮಾಣಗೊಳ್ಳಲಿದೆ ಎಂಬ ಕುತೂಹಲ ಇರೋದರಿಂದ ಪ್ರಭಾಸ್ ಯಾವ ರೋಲ್‌ನಲ್ಲಿ ನಟಿಸಲಿದ್ದಾರೆ ಅನ್ನೋದು ರಿವೀಲ್ ಆಗಿಲ್ಲ. ಮೂಲಗಳ ಮಾಹಿತಿ ಪ್ರಕಾರ ಪ್ರಭಾಸ್ ಕೆಜಿಎಫ್-3 ದಲ್ಲಿ ಹೀರೋನ ಸ್ನೇಹಿತನ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗ್ತಿದೆ. ಕೆಜಿಎಫ್-2 ದಲ್ಲಿ ಅಧಿರಾ ಕೊಲ್ಲುವ ಪುಟ್ಟ ಹುಡುಗನ ಪಾತ್ರದಲ್ಲಿ ಕೆಜಿಎಫ್-3 ದಲ್ಲಿ ಪ್ರಭಾಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನಿಮಾದ ಅಭಿಮಾನಿಗಳು ಊಹಿಸುತ್ತಿದ್ದಾರೆ.

ಇನ್ನೊಂದೆಡೆ ಯಶ್ ಹಾಗೂ ಸಂಜಯ್ ದತ್ ಕಾಂಬಿನೇಶನ್ ಸಿನಿಮಾವೇ ಇಷ್ಟೊಂದು ಹವಾ ಸೃಷ್ಟಿಸಿ ಬಾಕ್ಸಾಫೀಸ್ ನಲ್ಲಿ ಮೋಡಿ ಮಾಡಿದ್ದು, ಇನ್ನು ಈ ಕಾಮಿನೇಶನ್ ಗೆ ಪ್ರಭಾಸ್ ಕೂಡ ಜೊತೆಯಾದರೇ ಬಾಕ್ಸಾಫೀಸ್ ಚಿಂದಿ ಚಿತ್ರಾನ್ನ ಎಂಬ ಮಾತು ಅಭಿಮಾನಿಗಳಿಂದ ಕೇಳಿ ಬರ್ತಿದೆ.

ಇದನ್ನೂ ಓದಿ : ಕೆಜಿಎಫ್-2 ಸಿನಿಮಾದ ಶೂಟಿಂಗ್ ನಡೆದ ಜಾಗ ಇದೀಗ, ಟೂರಿಸ್ಟ್‌ ಹಾಟ್‌ ಸ್ಪಾಟ್‌

ಇದನ್ನೂ ಓದಿ : ಜ್ಯೂನಿಯರ್ ಎನ್ ಟಿ ಆರ್ ಗೆ ಜೊತೆಯಾದ ಪುಷ್ಪ: ಮತ್ತೆ ಮೋಡಿ ಮಾಡಲು ಟಾಲಿವುಡ್ ಗೆ ಬಂದ ರಶ್ಮಿಕಾ

Salar Hero Prabhas with Rockyboy Yash at KGF-3

Comments are closed.