harish rai battling cancer : ಸ್ಯಾಂಡಲ್ವುಡ್ನ ಸಿನಿಮಾವನ್ನು ವಿಶ್ವ ಮಟ್ಟಕ್ಕೆ ಪ್ರಸಿದ್ಧಿ ತರುವಂತೆ ಮಾಡಿದ ಸಿನಿಮಾ ಕೆಜಿಎಫ್ 2. ಕೆಜಿಎಫ್ ಭಾಗ 1 ಹಾಗೂ ಭಾಗ 2ರಲ್ಲಿ ರಾಕಿ ಭಾಯ್ ಚಾಚಾ ಪಾತ್ರದಲ್ಲಿ ಅಭಿನಯಿಸಿದ್ದ ಹಿರಿಯ ನಟ ಹರೀಶ್ ರೈ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಪ್ರಸ್ತುತ ಅವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಯಾಂಡಲ್ವುಡ್ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಹರೀಶ್ ರೈ ಕೆಜಿಎಫ್ 2 ಸಿನಿಮಾದ ಬಳಿಕ ಮತ್ತಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ .
ನಟ ಹರೀಶ್ ಕ್ಯಾನ್ಸರ್ನ ಕೊನೆಯ ಹಂತದಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ಹರೀಶ್ರನ್ನು ಉಳಿಸಿಕೊಳ್ಳಲು ವೈದ್ಯರ ಬಳಗವು ಇನ್ನಿಲ್ಲದ ಹರಸಾಹಸ ಪಡುತ್ತಿದೆ.
ಕೆಲವು ತಿಂಗಳ ಹಿಂದೆಯಷ್ಟೇ ಕೆಜಿಎಫ್ 2 ಸಿನಿಮಾದಲ್ಲಿ ನಟಿಸಿದ್ದ ನಟ ಮೋಹನ್ ಜುನೇಜಾ ನಿಧನರಾಗಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಹೆಸರಘಟ್ಟ ರಸ್ತೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು.ಇದೀಗ ಹರೀಶ್ ರೈ ಕೂಡ ಜೀವನ್ಮರಣ ಹೋರಾಟ ನಡೆಸುತ್ತಿದ್ದು ಕೆಜಿಎಫ್ ಸಿನಿಮಾದ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಅಲ್ಲದೇ ಹರೀಶ್ ಕುಟುಂಬಸ್ಥರಿಗೆ ಇವರ ಚಿಕಿತ್ಸೆಗೆ ಹಣ ಹೊಂದಿಸಲೂ ಕೂಡ ಕಷ್ಟವಾಗುತ್ತಿದೆ ಎನ್ನಲಾಗಿದೆ.
ಚಂದನವನದಲ್ಲಿ ಸಾಮಾನ್ಯವಾಗಿ ನೆಗೆಟಿವ್ ಶೇಡ್ಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಹರೀಶ್ ರೈ ಕೆಜಿಎಫ್ ಸಿನಿಮಾಗಳಲ್ಲಿ ಒಳ್ಳೆಯ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ರಾಕಿ ಭಾಯ್ಗೆ ಮಾರ್ಗದರ್ಶನ ನೀಡುವ ರಾಕಿ ಭಾಯ್ ಪ್ರೀತಿಯ ಚಾಚಾನಾಗಿ ನಟಿಸುವ ಮೂಲಕ ಅಭಿಮಾನಿಗಳ ಮನಗೆಲ್ಲುವಲ್ಲಿ ಹರೀಶ್ ರೈ ಯಶಸ್ವಿಯಾಗಿದ್ದಾರೆ.
ಹರೀಶ್ ರೈ ಕೆಜಿಎಫ್ ಚಾಪ್ಟರ್ 1 ಹಾಗೂ ಚಾಪ್ಟರ್2ನ್ನು ಹೊರತುಪಡಿಸಿ ಬೆಂಗಳೂರು ಅಂಡರ್ವರ್ಲ್ಡ್, ಮೀಂದುಮ್ ಒರು ಕಾದಲ್ ಕಧೈ.ರಾಜ್ ಬಹದ್ದೂರ್,ಧನ್ ಧನಾ ಧನ್,ಸಂಜು ವೆಡ್ಸ್ ಗೀತಾ, ಭೂಗತ, ನನ್ನ ಕನಸಿನ ಹೂವೇ, ಓಂ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿದ್ದಾರೆ.
ಇದನ್ನು ಓದಿ : Meghanaraj Sarja foreign trip : ನೋವುಗಳಿಗೆ ನಲಿವಿನ ಉತ್ತರ ಕೊಟ್ಟ ದಿಟ್ಟೆ: ಮೇಘನಾ ರಾಜ್ ಸರ್ಜಾ ಫಾರಿನ್ ಟ್ರಿಪ್ ಪೋಟೋ ವೈರಲ್
ಇದನ್ನೂ ಓದಿ : role of Aryavardhan : ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರಕ್ಕೆ ಕೇಳಿ ಬರ್ತಿದೆ ಸಿ.ಟಿ ರವಿ ಹೆಸರು
kgf movie fame sandalwood actor harish rai battling cancer here is his health updates