BJP state president : ಸಿ.ಟಿ.ರವಿ, ಅಶ್ವತ್ಥ ನಾರಾಯಣ್, ಶೋಭಾ ಕರಂದ್ಲಾಜೆ : ಯಾರ ಹೆಗಲೇರುತ್ತೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಹೊಣೆ

ಬೆಂಗಳೂರು : (BJP state president) ಸಚಿವ ಸಂಪುಟ ವಿಸ್ತರಣೆ, ಸಿಎಂ ಬದಲಾವಣೆಯ ಗಾಸಿಪ್ ಗಳ ಬಳಿಕ ರಾಜ್ಯ ಬಿಜೆಪಿಯಲ್ಲಿ ಸದ್ದು ಮಾಡ್ತಿರೋದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬದಲಾವಣೆಯ ಸುದ್ದಿ.‌ ರಾಜ್ಯಾಧ್ಯಕ್ಷ ಸ್ಥಾನದ ಅವಧಿ ಮುಗಿದಿರೋದರಿಂದ ನಳಿನ್ ಕುಮಾರ್ ಕಟೀಲ್ ರನ್ನು ಬದಲಾಯಿಸಲಾಗುತ್ತಿದೆ ಎಂದು ಬಿಜೆಪಿ ಹೇಳಿಕೊಂಡರೂ ನಳಿನ್ ಕುಮಾರ್ ಬದಲಾವಣೆಯ ಅಸಲಿ ಕಾರಣದ ಸಿಕ್ರೆಟ್ ಇಲ್ಲಿ ಬಯಲಾಗಿದೆ.

ಹಾಗಿದ್ದರೇ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿರೋ ನಳಿನ್ ಕುಮಾರ್ ಕಟೀಲ್ ಬದಲಾವಣೆಯ ಕಾರಣಗಳೇನು ಅನ್ನೋದನ್ನು ನೋಡೋದಾದರೇ, ರಾಜ್ಯ ಬಿಜೆಪಿಗೆ ಕಟೀಲ್ ಹೆಸರಿಗಷ್ಟೇ ಅಧ್ಯಕ್ಷ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನ ಸೂಪರ್ ಪ್ರೆಸಿಡೆಂಟ್ ಎಂಬ ಮಾತು ಎಲ್ಲೆಡೆ ಕೇಳಿಬಂದಿದೆ. ಅಲ್ಲದೇ ನಳೀನ್ ಕುಮಾರ್ ಕಟೀಲ್ ಸಮಗ್ರ ಕರ್ನಾಟಕ ದ ವಿಶ್ವಾಸ ಪಡೆಯುವಲ್ಲಿ ವಿಫಲರಾಗಿದ್ದು, ಕರಾವಳಿಗಷ್ಟೇ ಸೀಮಿತರಾಗಿದ್ದಾರೆ ಎಂಬ ಆರೋಪವಿದೆ. ಅಲ್ಲದೇ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಕರಾವಳಿಯಲ್ಲು ಕಟೀಲ್ ಪರ ಸದಾಭಿಪ್ರಾಯ ದೂರವಾಗಿದೆ.

ಇದು ಚುನಾವಣೆಯ ವರ್ಷ. ೨೦೨೩ ರ ಚುನಾವಣೆ ಮಹತ್ವದ ಚುನಾವಣೆ ಬಹಳ ಸ್ಟ್ರಾಂಗ್ ಹಾಗೂ ಆ್ಯಕ್ಟೀವ್ ಅಧ್ಯಕ್ಷರು ಬೇಕು ಇಡೀ ಕರ್ನಾಟಕ ಗೊತ್ತಿರೋ ರಾಜ್ಯದ ಅಷ್ಟೂ ಕಾರ್ಯಕರ್ತರ ಜೊತೆ ಸಂಹವನ ವಿಪಕ್ಷಗಳಿಗೆ ಕೌಂಟರ್ ಸ್ಟ್ರಾಟಜಿ ಮಾಡೋ ಅಧ್ಯಕ್ಷರ ನೇಮಕಕ್ಕೆ ಬಿಎಸ್ವೈ ಒಲವು ತೋರಿದ್ದಾರೆ ಎನ್ನಲಾಗ್ತಿದೆ. ಹಾಗಿದ್ದರೇ ನಳಿನ್ ಕುಮಾರ್ ಬಳಿಕ ರಾಜ್ಯ ಬಿಜೆಪಿಗೆ ನಾಯಕರ್ಯಾರು ಅನ್ನೋದನ್ನು ನೋಡೋದಾದರೇ, ಸಿಟಿ ರವಿ,ಡಾ ಅಶ್ವತ್ಥ ನಾರಾಯಣ,ಶೋಭಾ ಕರಂದ್ಲಾಜೆ ಹೆಸರು ಮುಂಚೂಣಿಯಲ್ಲಿದೆ.

ಒಕ್ಕಲಿಗರನ್ನೇ ರಾಜ್ಯಾಧ್ಯಕ್ಷರನ್ನಾಗಿಸಬೇಕು ಎಂಬುದು ಬಿಜೆಪಿ ಲೆಕ್ಕಾಚಾರ. ಕಾಂಗ್ರೆಸ್ ನಲ್ಲಿ ಡಿಕೆಶಿ ನಾಯಕತ್ವ ಹೊತ್ತಿರೋದಿಂದ ಬಿಜೆಪಿಗೂ ಒಕ್ಕಲಿಗರೇ ಸೂಕ್ತ ಎನ್ನಲಾಗ್ತಿದೆ.
ಇನ್ನು ಪ್ರಸ್ತಾಪಿತ ಹೆಸರುಗಳ ಹಿಂದಿನ ಲೆಕ್ಕಾಚಾರ ಇಂತಿದೆ.

ಸಿಟಿ ರವಿ ( ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ )

ಅಗ್ರೆಸ್ಸಿವ್ ಲೀಡರ್, ಹಿಂದೂ ಪ್ರತಿಪಾದಕ ಒಕ್ಕಲಿಗರ ಸೆಳೆಯಬಹುದು ಅನ್ನೋ ಲೆಕ್ಕಚಾರ

ಡಾ ಅಶ್ವತ್ಥ ನಾರಾಯಣ ( ಸಚಿವರು )

ಡಿಕೆಶಿಗೆ ಠಕ್ಕರ್ ಕೊಡೋ ಶಕ್ತಿ ಇದೆ.ವಿದ್ಯಾವಂತ.ಬೆಂಗಳೂರು ಕೇಂದ್ರದಲ್ಲಿ ಇರುತ್ತಾರೆಸಚಿವರಾಗಿ ಅನುಭವ.ಒಕ್ಕಲಿಗ ಮತಗಳ ಸೆಳೆಯೋ ಶಕ್ತಿ ಇದೆ.

ಶೋಬಾ ಕರಂದ್ಲಾಜೆ (ಕೇಂದ್ರ ಸಚಿವರು )

ಮಹಿಳೆ – ಮಹಿಳಾ ಮತದಾರರ ಸೆಳೆಯಬಹುದು ಅಗ್ರೆಸ್ಸಿವ್ , ಹಿಂದುತ್ವ , ಕರಾವಳಿ ಭಾಗ ಅನುಭವ, ಒಕ್ಕಲಿಗ ಮಹಿಳೆ

ಇದಲ್ಲದೇ, ಒಬಿಸಿ ಅಥವಾ ಪರಿಶಿಷ್ಟರಿಗೂ ತಲಾಷ್ ನಡೆದಿದ್ದು, ಸುನೀಲ್ ಕುಮಾರ್- ಒಬಿಸಿಅರವಿಂದ ಲಿಂಬಾವಳಿ- ಪರಿಶಿಷ್ಟ ಜಾತಿಸುನಿಲ್ ಕುಮಾರ್- ಹಿಂದುತ್ವ, ಒಬಿಸಿ( ಈಡಿಗ ಸಮುದಾಯ) ಕರಾವಳಿ ಭಾಗ, ಅಗ್ರೆಸ್ಸಿವ್ , ಕಾರ್ಯಕರ್ತರ ನಾಡಿಮಿಡಿತ ಗೊತ್ತು ಅನ್ನೋದು ಅರವಿಂದ ಲಿಂಬಾವಳಿ- ಪರಿಶಿಷ್ಟ ಜಾತಿ ಉತ್ತಮ ಸಂಘಟಕ, ಬೆಂಗಳೂರು ಕೇಂದ್ರ, ಅಡ್ಜೆಸ್ಟಬಲ್ ನೇಚರ್, ಸ್ಟ್ರಾಟಜಿಸ್ಟ್ ಅನ್ನೋ ಮಾತು ಕೇಳಿಬಂದಿದೆ. ಈ ನಡುವೆ ಕಟೀಲ್ ಬದಲಾವಣೆಗೆ ಹಲವರ ವಿರೋಧ, ಚುನಾವಣೆ ಹೊತ್ತಲ್ಲಿ ಹೊಸ ಅಧ್ಯಕ್ಷರು ಬೇಡ ಕಟೀಲ್ ಮುಂದುವರೆಯಲಿ ಎಂದು ಬಿ ಎಲ್ ಸಂತೋಷ್ಹೇ ಳಿದ್ದಾರಂತೆ. ಒಟ್ಟಾರೆ ರಾಜ್ಯಾಧ್ಯಕ್ಷರ ಆಯ್ಕೆ ಸದ್ಯ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ : CT Ravi’s outrage : ಸುಳ್ಳು ಹಾಗೂ ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು : ಸಿ.ಟಿ ರವಿ ವ್ಯಂಗ್ಯ

ಇದನ್ನೂ ಓದಿ : CM Basavaraja Bommai : ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸಿಎಂ ಬೊಮ್ಮಾಯಿಗೆ ಹೆಚ್ಚಿದ ತವರು ಪ್ರೇಮ : ಹಾವೇರಿ ಜಿಲ್ಲೆಗೆ ಸಾಲು ಸಾಲು ಅನುದಾನ

CT Ravi Ashwattha Narayan Shobha Karandlaje whose should responsibility of the BJP state president

Comments are closed.