Digital Hundi Chamundi Hills : ದೇವರಿಗೂ ಡಿಜಿಟಲ್ ಕಾಣಿಕೆ : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಈ ಹುಂಡಿ ಸ್ಥಾಪನೆ

ಮೈಸೂರು : ( Digital Hundi Chamundi Hills ) ಜಗತ್ತು ಡಿಜಿಟಲ್ ವ್ಯವಸ್ಥೆಗೆ ಒಗ್ಗಿಕೊಂಡಿದೆ. ಭಾರತದಲ್ಲೂ ಮೋದಿ ಸರ್ಕಾರದ ಆಡಳಿತಾವಧಿಯಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಹೀಗಾಗಿ ಈಗ ನೀವೆಲ್ಲೂ ನಗದು ನೀಡಿ ವ್ಯವಹರಿಸುವ ಅಗತ್ಯವೇ ಇಲ್ಲ. ಈಗ ಈ ವ್ಯವಸ್ಥೆ ದೇವರ ಕಾಣಿಕೆ ಹುಂಡಿಯವರೆಗೂ ಬಂದು ತಲುಪಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನ ನಾಡ ಪ್ರಸಿದ್ಧ ಚಾಮುಂಡೇಶ್ವರಿ ಸನ್ನಿಧಾನದಲ್ಲೂ ಡಿಜಿಟಲ್ ಹುಂಡಿ ಕಾರ್ಯಾರಂಭ ಮಾಡಿದೆ.

ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ ಇ ಹುಂಡಿ ಆರಂಭವಾಗಲಿದೆ ಎಂಬ ಚರ್ಚೆ ನಡೆದಿತ್ತು. ಈಗ ಈ ಯೋಜನೆಯ ಮೊದಲ ಹಂತವಾಗಿ ಚಾಮುಂಡಿ ಬೆಟ್ಟದಲ್ಲಿ ಡಿಜಿಟಲ್ ಹುಂಡಿ ಆರಂಭಿಸಲಾಗಿದೆ. ಹೀಗಾಗಿ ನೀವು ಇನ್ಮುಂದೇ ಚಾಮುಂಡಿ ಬೆಟ್ಟದಲ್ಲಿ ಕುಳಿತಲ್ಲೇ ದೇವರಿಗೆ ಕಾಣಿಕೆ ಸಲ್ಲಿಸಬಹುದು. ಗೂಗಲ್ ಪೇ, ಫೋನ್ ಪೇ, ಬೀಮ್, ಪೇಟಿಎಂ ಸೇರಿದಂತೆ ಯಾವುದೇ ಆ್ಯಪ್‌ನಿಂದ ಕಾಣಿಕೆ ಸಲ್ಲಸಲು ಅವಕಾಶ ನೀಡಲಾಗಿದೆ. ಮುಜರಾಯಿ ಇಲಾಖೆ ಹಾಗೂ ಕರ್ನಾಟಕ ಬ್ಯಾಂಕ್ ಸಹಯೋಗದಲ್ಲಿ ಈ ಹುಂಡಿ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಭಕ್ತರು ಸರತಿ ಸಾಲುಗಳಲ್ಲಿ ನಿಂತು ಕ್ಯೂಆರ್ ಕೋಡ್ ಬಳಸಿ ಕೊಂಡು ತಮಗಿಷ್ಟವಾದಷ್ಟು ಹಣವನ್ನು ದೇವರ ಹುಂಡಿಗೆ ಅರ್ಪಿಸಬಹುದು. ಸ್ಕ್ಯಾನ್ ಮಾಡಿ ದೇವರಿಗೆ ಕಾಣಿಕೆ ಅರ್ಪಿಸಲು ಅವಕಾಶವಿರೋದರಿಂದ ಭಕ್ತರು ಖುಷಿಯಾಗಿದ್ದಾರೆ.

ರಾಜ್ಯದ ಮುಜರಾಯಿ ಇಲಾಖೆ ಅಧೀನದ ರಾಜ್ಯದ ಎಲ್ಲ ಎ ಗ್ರೇಡ್ ದೇವಾಲಯಗಳಲ್ಲೂ ಇ- ಹುಂಡಿ ಜಾರಿಗೆ ಚಿಂತನೆ ನಡೆದಿತ್ತು. ಇದೇ ಮೊದಲ ಬಾರಿಗೆ ಪ್ರಯೋಗಾರ್ಥವಾಗಿ ಈ ವ್ಯವಸ್ಥೆಯನ್ನು ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಾಲಯದಲ್ಲಿ ಜಾರಿಗೆ ತರಲಾಗಿದೆ. ಚಾಮುಂಡೇಶ್ವರಿ ಸಮೂಹ ದೇವಾಲಯಗಳಲ್ಲಿ ಕ್ಯೂಆರ್ ಕೋಡ್ ಬಳಕೆಗೆ ಚಾಲನೆ ನೀಡಲಾಗಿದೆ. ಇದರಿಂದ ಮನುಷ್ಯರ ಹಸ್ತಕ್ಷೇಪವಿಲ್ಲದೇ ಜನರ ಕಾಣಿಕೆ ರಾಜ್ಯದ ಬೊಕ್ಕಸ ಸೇರಲಿದೆ.

ಕಳೆದ ಹಲವು ವರ್ಷಗಳಿಂದ ರಾಜ್ಯದ ದೇವಾಲಯಗಳಲ್ಲಿ ಇ ಹುಂಡಿ ಸ್ಥಾಪಿಸಬೇಕೆಂಬ ಒತ್ತಡ ಕೇಳಿ ಬರುತ್ತಲೇ ಇತ್ತು. ಅದರಲ್ಲೂ ಈ ವರ್ಷ ಆಷಾಢಮಾಸದ ವೇಳೆ ಚಾಮುಂಡಿ ಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿದ್ದರಿಂದ ಆ ವೇಳೆಯೂ ಜನರು ಕ್ಯೂಆರ್ ಕೋಡ್ ಬೇಕೆಂದು ಒತ್ತಾಯಿಸಿದ್ದರು. ಈಗ ಪ್ರಯೋಗಾರ್ಥ ಈ ಹುಂಡಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ದೇವಾಲಯಗಳಲ್ಲಿ ಇನ್ನಷ್ಟು ಪಾರದರ್ಶಕ ವ್ಯವಸ್ಥೆ ಕಲ್ಪಿಸಿದಂತಾಗಲಿದ್ದು, ಹುಂಡಿ ದುರ್ಬಳಕೆಯಂತಹ ಅಕ್ರಮಗಳಿಗೆ ಕಡಿವಾಣ ಬೀಳಲಿದೆ ಅನ್ನೋದು ಭಕ್ತರ ಅನಿಸಿಕೆ. ಒಟ್ಟಿನಲ್ಲಿ ಇನ್ಮುಂದೇ ದೇವರ ಕಾಣಿಕೆಯೂ ಪೋನ್ ಪೇ, ಗೂಗಲ್ ಪೇಯಲ್ಲೇ ಸಲ್ಲಲಿದೆ.

ಇದನ್ನೂ ಓದಿ : BJP state president : ಸಿ.ಟಿ.ರವಿ, ಅಶ್ವತ್ಥ ನಾರಾಯಣ್, ಶೋಭಾ ಕರಂದ್ಲಾಜೆ : ಯಾರ ಹೆಗಲೇರುತ್ತೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಹೊಣೆ

ಇದನ್ನೂ ಓದಿ : harish rai battling cancer : ಕ್ಯಾನ್ಸರ್​​ನ ಕೊನೆಯ ಹಂತದಲ್ಲಿದ್ದಾರೆ ಕೆಜಿಎಫ್​ ಖ್ಯಾತಿಯ ನಟ ಹರೀಶ್​ ರೈ

Digital Hundi Chamundi Hills Mysore A digital offering to God, this hundi was established

Comments are closed.