ಸೋಮವಾರ, ಏಪ್ರಿಲ್ 28, 2025
HomeCinemaKGF Chapter 2 : ವೀಕ್ಷಣೆಯಲ್ಲೂ ದಾಖಲೆ ಬರೆದ ಕೆಜಿಎಫ್‌ : ದೇಶದಲ್ಲಿ ಕೆಜಿಎಫ್‌ ಸಿನಿಮಾ...

KGF Chapter 2 : ವೀಕ್ಷಣೆಯಲ್ಲೂ ದಾಖಲೆ ಬರೆದ ಕೆಜಿಎಫ್‌ : ದೇಶದಲ್ಲಿ ಕೆಜಿಎಫ್‌ ಸಿನಿಮಾ ನೋಡಿದ್ದು ಎಷ್ಟು ಕೋಟಿ ಜನರು ಗೊತ್ತಾ ?

- Advertisement -

ತೆರೆಗೆ ಬಂದಾಗಿನಿಂದಲೂ ದಾಖಲೆ‌ ಮೇಲೆ ದಾಖಲೆ ಬರೆಯುತ್ತಿರೋ ಕೆಜಿಎಫ್-2 (KGF Chapter 2) ಸಿನಿಮಾ ಈಗ ಕನ್ನಡಿಗರು, ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲರೂ ಹೆಮ್ಮೆ ಪಡುವಂತ ಸಾಧನೆ ಮಾಡಿದೆ. ಹೌದು, ಕೆಜಿಎಫ್-2 ಭಾರತದಲ್ಲೇ ಅತ್ಯಧಿಕ ಅಂದ್ರೇ ಬರೋಬ್ಬರಿ 5 ಕೋಟಿ ಜನರು ವೀಕ್ಷಿಸಿದ್ದು ಆ ಮೂಲಕ ಈ ಸಿನಿಮಾ ಹಲವು ಹಳೆಯ ದಾಖಲೆ‌ಸರಿಗಟ್ಟಿದೆ.

ರಿಲೀಸ್ ಆದ 26 ದಿನದಲ್ಲಿ ಸಿನಿಮಾ ಒಟ್ಟು 5.05 ಕೋಟಿ ಜನರಿಂದ ವೀಕ್ಷಿಸಲ್ಪಟ್ಟಿದ್ದು ಬರೋಬ್ಬರಿ 1020 ಕೋಟಿ ಆದಾಯ ಗಳಿಸಿದೆ ಎನ್ನಲಾಗಿದೆ. ಉತ್ತರ ಮತ್ತು ದಕ್ಷಿಣ ಭಾರತದಲ್ಲೂ ಈ ಸಿನಿಮಾ ದಾಖಲೆಯ ವೀಕ್ಷಣೆಯನ್ನು ಪಡೆದುಕೊಂಡಿದೆ. ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿರುವಂತೆ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಸಿನಿಮಾ ರಾಕಿಂಗ್ ಸ್ಟಾರ್ ಯಶ್ ನಾಯಕತ್ವದಲ್ಲಿ ಸಿನಿ‌ ಪ್ರಿಯರನ್ನು ಚುಂಬಕದಂತೆ ಸೆಳೆಯುತ್ತಿದ್ದು, ಉತ್ತರ ಭಾರತದಲ್ಲಿ ಸಿನಿಮಾ 2.35 ಕೋಟಿ ಜನರಿಂದ ವೀಕ್ಷಿಸಲ್ಪಟ್ಟಿದೆಯಂತೆ.

ಇನ್ನೊಂದೆಡೆ ಸೌತ್ ಇಂಡಿಯಾದಲ್ಲಿ ಇದುವರೆಗೂ ಕೆಜಿಎಫ್-2 ವೀಕ್ಷಿಸಿದವರ ಸಂಖ್ಯೆ 2.35 ಕೋಟಿ. ಹಲವು ಭಾಷೆಗಳಲ್ಲಿ ರಿಲೀಸ್ ಆಗಿರೋ ಕೆಜಿಎಫ್-2 ಆಂಧ್ರಪ್ರದೇಶದ ಜನರ ಮನಸ್ಸನ್ನು ಗೆದ್ದಿದ್ದು ರಿಲೀಸ್ ಆದ ತಿಂಗಳಲ್ಲೇ ಕೆಜಿಎಫ್-2 ಆಂಧ್ರದಲ್ಲಿ 85 ಲಕ್ಷ ಜನರನ್ನು ಸೆಳೆದಿದೆಯಂತೆ. ಇನ್ನು ಯಶ್ ತವರು ಕರ್ನಾಟಕ ಹಾಗೂ ಪಕ್ಕದ ರಾಜ್ಯ ತಮಿಳುನಾಡಿ ನಲ್ಲಿ ತಲಾ 70 ಲಕ್ಷ ಜನರು ಯಶ್ ಕೆಜಿಎಫ್-2 ಸಾಮ್ರಾಜ್ಯವನ್ನು ಕಣ್ತುಂಬಿ ಕೊಂಡಿದ್ದಾರಂತೆ. ಇನ್ನು ಕೇರಳದಲ್ಲಿ ಕೆಜಿಎಫ್-2 ನೋಡಿದವರ ಸಂಖ್ಯೆ ಬರೋಬ್ಬರಿ 46 ಲಕ್ಷ.

ಇನ್ನು ಭಾರತದ ಸಿನಿ ಇತಿಹಾಸದಲ್ಲಿ ಗದ್ದರ್ ಹಾಗೂ ಬಾಹುಬಲಿ ಬಳಿಕ ಐದು ಕೋಟಿ ಜನರಿಂದ ವೀಕ್ಷಿಸಿಲ್ಪಟ್ಟ ಮತ್ತೊಂದು ಸಿನಿಮಾ ಕೆಜಿಎಫ್-2 ಆಗಿದ್ದು, ಇಂತಹದೊಂದು ದಾಖಲೆ ಬರೆಯುತ್ತಿರುವ ಮೂರನೇ ಸಿನಿಮಾ ಎಂಬ ಖ್ಯಾತಿಗೂ ಕೆಜಿಎಫ್-2 ಭಾಜನವಾಗಿದೆ. ಇನ್ನೂ 2000 ನಂತರ ಭಾರತದಲ್ಲಿ ಅತ್ಯಂತ ಹೆಚ್ಚು ವೀಕ್ಷಿಸಲಾದ ಸಿನಿಮಾಗಳೇ ಬೆರಳೆಣಿಕೆಯಷ್ಟು. ಬಾಹುಬಲಿ-2 ಸಿನಿಮಾವನ್ನು 10.80 ಕೋಟಿ ಜನ ವೀಕ್ಷಿಸಿದ್ದರೇ, ಗದರ್ 8-9 ಕೋಟಿ ಜನರು ವೀಕ್ಷಿಸಿದ್ದರು. ಈಗ ಭಾರತದ ಮತ್ತೊಂದು ಚಿತ್ರ ಕೆಜಿಎಫ್-2 ಸಿನಿಮಾವನ್ನು 5.05 ಕೋಟಿ ಜನ ಕಣ್ತುಂಬಿಕೊಂಡು ಹರಸಿದ್ದಾರೆ.

ಇದಾದ ಬಳಿಕದ ಸ್ಥಾನದಲ್ಲಿ ಬಾಹುಬಲಿ ಹಾಗೂ ಆರ್ ಆರ್ ಆರ್ ಪಾಲಾಗಿದೆ. ಇನ್ನೂ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ‌ಮೆರೆದಿರೋ ಕೆಜಿಎಫ್-2 ಸಿನಿಮಾವನ್ನು ಭಾರತದಲ್ಲೇ 5.5 ಕೋಟಿ ಜನರು ವೀಕ್ಷಿಸಿದ್ದು ವಿಶ್ವದಲ್ಲಿ ಈ ಸಂಖ್ಯೆ ಇನ್ನಷ್ಟು ದೊಡ್ಡದಿದೆ. ಒಟ್ಟಿನಲ್ಲಿ ಕೆಜಿಎಫ್-2 ಸಿನಿಮಾ ಭಾರತೀಯ ಹಾಗೂ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲಾಗೋ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ : KGF Chapter 2 OTT : ಕೆಜಿಎಫ್ ಚಾಪ್ಟರ್ 2 ಮತ್ತೊಂದು ದಾಖಲೆ : OTT ಹಕ್ಕು ದಾಖಲೆಯ ಮೊತ್ತಕ್ಕೆ ಸೇಲ್‌

ಇದನ್ನೂ ಓದಿ : Sonakshi Sinha : ಸದ್ದಿಲ್ಲದ್ದೇ ಎಂಗೇಜ್​ಮೆಂಟ್​ ಮಾಡಿಕೊಂಡ ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ

KGF new record 5 crore Indians views KGF Chapter 2 Movie

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular