loudspeakers vs azaan : ಮೈಕ್ ಬಳಕೆಗೆ ಸರ್ಕಾರದ ಸುತ್ತೋಲೆ : ಆಜಾನ್ vs ಮೈಕ್ ಫೈಟ್ ಗೆ ಬಿತ್ತು ತೆರೆ

ಬೆಂಗಳೂರು : ರಾಜ್ಯದಲ್ಲಿ ಅಜಾನ್ ವರ್ಸಸ್ ಸುಪ್ರಭಾತ (loudspeakers vs azaan ) ವಿವಾದಕ್ಕೆ ಕೊನೆಗೂ ತೆರೆ ಬೀಳುವ ಕಾಲ‌ ಸನ್ನಿಹಿತವಾದಂತಿದ್ದು, ಲೌಡ್ ಸ್ಪೀಕರ್ ಗೆ ಮಾರ್ಗಸೂಚಿ ಪ್ರಕಟಿಸಿ ಸರ್ಕಾರ ಆದೇಶ ಹೊರಡಿಸಿದೆ. ಆಜಾನ್ ವರ್ಸಸ್ ಭಜನೆ ದಂಗಲ್ ಜೋರಾಗಿದ್ದರಿಂದ ಸರ್ಕಾರ ತಡವಾಗಿಯಾದರೂ ಎಚ್ಚೆತ್ತುಕೊಂಡಿದ್ದು, ಧ್ವನಿವರ್ಧಕ ಬಳಕೆ ಸೇರಿದಂತೆ ಎಲ್ಲದಕ್ಕೂ ಸ್ಪಷ್ಟ ಸೂಚನೆಯೊಂದಿಗೆ ಸುತ್ತೋಲೆ ಹೊರಡಿಸಿದೆ. ಸರ್ಕಾರದಿಂದ ಅಧಿಕೃತ ಸುತ್ತೋಲೆ ಬಿಡುಗಡೆಯಾಗಿದ್ದು, ಇದರಲ್ಲಿ ದೇವಾಲಯಗಳು ಸೇರಿದಂತೆ ಧಾರ್ಮಿಕ ಕೇಂದ್ರಗಳು 15 ದಿನದೊಳಗೆ ಧ್ವನಿ ವರ್ಧಕಗಳಿಗೆ ಅನುಮತಿ ಪಡೆಯುವುದು ಕಡ್ಡಾಯ ಎಂದಿದೆ.

ಈ ನಿಯಮ ಎಲ್ಲ ಧಾರ್ಮಿಕ ಕೇಂದ್ರಗಳಿಗೂ ಅನ್ವಯ ಎಂದಿರುವ ಸರ್ಕಾರ, ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಹಾಗೂ ರಾತ್ರಿ 10 ಯಿಂದ ಬೆಳಗಿನ ಜಾವ 6 ಗಂಟೆವರೆಗೆ ಮೈಕ್ ಬಳಕೆಗೆ ಅವಕಾಶ ನೀಡಿದ್ದು, ಈ ವೇಳೆಯೂ ಶಬ್ದದ ಪ್ರಮಾಣಕ್ಕೆ ನಿರ್ದಿಷ್ಟ ಡೆಸಿಬಲ್ ನಿಗದಿ ಪಡಿಸಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಡಿಸೆಬಲ್ ಮಿತಿ ಇರಬೇಕು ಎಂದಿರುವ ಸರ್ಕಾರ ಒಂದೊಮ್ಮೆ ನಿಯಮ ಉಲ್ಲಂಘಿಸಿದ್ರೇ, ಡಿಎಸ್ಪಿ ದರ್ಜೆಯಿಂದ ಮೇಲ್ಪಟ್ಟ ರಾಜ್ಯ ಪೊಲೀಸ್ ಮಹಾನಿರ್ದೇಶಕರ ದರ್ಜೆವರೆಗೂ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುವ ಅಧಿಕಾರವಿದೆ ಎಂದಿದೆ. ಸಾರ್ವಜನಿಕ ಸಮಾರಂಭ ಕಾರ್ಯಕ್ರಮ ನಡೆಸುವರಿಗೂ ಅನುಮತಿ ಕಡ್ಡಾಯ ಎಂದಿರುವ ಸರ್ಕಾರ, ಎಲ್ಲದಕ್ಕೂ ಶಬ್ದದ ಮಿತಿ ಅಳವಡಿಸಿದೆ. ಯಾವ ಯಾವ ಝೋನ್ ಗೆ ಎಷ್ಟು ಡೆಸಿಬಲ್‌ ಮಿತಿ ಅಳವಡಿಸಲಾಗಿದೆ ಎಂಬುದನ್ನು ನೋಡೋದಾದರೇ,

(ಝೋನ್ – ಹಗಲು – ರಾತ್ರಿ)

ಕೈಗಾರಿಕಾ ಝೋನ್ – 75 dB – 70 dB

ಕಮರ್ಷಿಯಲ್ ಝೋನ್ – 65 dB – 55 dB

ರೆಸಿಡೆನ್ಸಿಯಲ್ ಝೋನ್ – 55 dB – 45 dB

ಸೈಲೆಂಟ್ ಝೋನ್ – 50 dB – 40 dB

ಇನ್ನು ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಎಲ್ಲಾ ರೀತಿಯ ಧ್ವನಿ ವರ್ಧಕ, ತಮಟೆ, ಬ್ಯಾಂಡ್, ಡಿಜೆ ಎಲ್ಲದಕ್ಕೂ ಬ್ರೇಕ್ ಹಾಕಲಾಗಿದ್ದು, ಅಗತ್ಯ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಮೇರೆಗೆ ಅನುಮತಿ ಪಡೆದು ಮೈಕ್ ಅಳವಡಿಸಲು ಅವಕಾಶವಿದೆ. ಇದಲ್ಲದೇ, ರೆಸಿಡೆನ್ಸಿಯಲ್ ಏರಿಯಾದಲ್ಲಿ ವಾಹನಗಳು ಹಾರ್ನ್ ಮೂಲಕ ಕಿರಿಕಿರಿ ಮಾಡುವಂತಿಲ್ಲ ಎನ್ನಲಾಗಿದ್ದು, ಸಾರ್ವಜನಿಕರಿಂದ ದೂರು ಬಂದರೆ ಕ್ರಮಕೈಗೊಳ್ಳಲು ಸರ್ಕಾರ ಅಧಿಕಾರ ನೀಡಿದೆ. ಇನ್ನು ಮನೆಯಲ್ಲಿ ನಡೆಸುವ ಕಾರ್ಯಕ್ರಮ ಹಾಗೂ ಇತರೆ ಖಾಸಗಿ ಕಾರ್ಯಕ್ರಮ ಶಬ್ಧ 5dB ಮೀರದಂತೆ ಇರಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ : ಕಾಲ್ಗೆಜ್ಜೆ ಕದ್ದಳೆಂದು ನೆರೆಮನೆಯ ಬಾಲಕಿಯನ್ನು ಉಸಿರುಗಟ್ಟಿಸಿ ಸಾಯಿಸಿದ ಪಾಪಿ ಮಹಿಳೆ

ಇದನ್ನೂ ಓದಿ : KGF Chapter 2 : ವೀಕ್ಷಣೆಯಲ್ಲೂ ದಾಖಲೆ ಬರೆದ ಕೆಜಿಎಫ್‌ : ದೇಶದಲ್ಲಿ ಕೆಜಿಎಫ್‌ ಸಿನಿಮಾದ ನೋಡಿದ್ದು ಎಷ್ಟು ಕೋಟಿ ಜನರು ಗೊತ್ತಾ ?

loudspeakers vs azaan controversy Karnataka Government New circulation

Comments are closed.