ಸದ್ಯ ಸ್ಯಾಂಡಲ್ ವುಡ್ ಸೇರಿದಂತೆ ದೇಶದ ಚಿತ್ರರಂಗದಲ್ಲಿ ಕೆಜಿಎಫ್-2 ಗಳಿಕೆಯಷ್ಟೇ ಸದ್ದು ಮಾಡಿರೋ ಇನ್ನೊಂದು ಸಂಗತಿ ರಾಕಿಂಗ್ ಸ್ಟಾರ್, ಪ್ಯಾನ್ ಇಂಡಿಯಾ ಹೀರೋ ಯಶ್ ಮುಂದಿನ ಸಿನಿಮಾ ಯಾವುದು ಅನ್ನೋದು. ಸದ್ಯ ಕೆಜಿಎಫ್-2 ಯಶಸ್ಸಿನ ಅಲೆಯಲ್ಲಿ ತೇಲ್ತಿರೋ ಯಶ್ ತಮ್ಮ ಮುಂದಿನ ಸಿನಿಮಾ ಎಂಬ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದರೆ ಮೂಲಗಳ ಪ್ರಕಾರ ಮತ್ತೊಂದು ಅದ್ದೂರಿ ಸಿನಿಮಾಗೆ ಯಶ್ (KGF Yash next Movie) ಸಜ್ಜಾಗುತ್ತಿದ್ದಾರೆ. ಈ ಭಾರಿ ಪ್ರಶಾಂತ್ ನೀಲ್ ಬದಲು ನರ್ತನ್ ಆಕ್ಷ್ಯನ್ ಕಟ್ ಹೇಳಲಿದ್ದಾರಂತೆ.
ಕೆಜಿಎಫ್ ಹಾಗೂ ಕೆಜಿಎಫ್-2 ಬಳಿಕ ಯಶ್ ಮುಂದಿನ ಸಿನಿಮಾದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.ಕೆಜಿಎಫ್ 3 ಬರೋದು ಬಹುತೇಕ ಖಚಿತ ಎನ್ನಲಾಗ್ತಿದ್ದರೂ ಸದ್ಯಕ್ಕಂತೂ ಯಶ್ ಮುಂದಿನ ಸಿನಿಮಾ ಕೆಜಿಎಫ್-3 ಅಲ್ಲ ಬೇರೊಂದು ಅನ್ನೋ ಸಂಗತಿ ಮಹತ್ವ ಪಡೆದುಕೊಂಡಿದೆ. ಡೈರೆಕ್ಟರ್ ನರ್ತನ್ ಯಶ್ ಮುಂದಿನ ಸಿನಿಮಾವನ್ನು ನಿರ್ದೇಶಿಸಲಿದ್ದಾರಂತೆ. ಇನ್ನೂ ವೆಂಕಟ್ ಕೋನಂಕಿ ಯಶ್ ಗಾಗಿ ಹೊಸ ಸಿನಿಮಾ ನಿರ್ಮಿಸಲಿದ್ದಾರಂತೆ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್ ಕನ್ನಡದ ಕೆವಿಎನ್ ಸಂಸ್ಥೆಯ ಜೊತೆ ಮುಂದಿನ ಸಿನಿಮಾ ಮಾಡೊದು ಪಕ್ಕಾ ಎಂಬ ಮಾಹಿತಿ ಸಿಗ್ತಿದೆ.
ಕಳೆದ ಎರಡೂವರೆ ವರ್ಷಗಳಿಂದ ನರ್ತನ್ ಯಶ್ ಗಾಗಿ ಕತೆ ಮಾಡ್ತಿದ್ದಾರೆ ಎನ್ನಲಾಗಿದ್ದು, ಸ್ವತಃ ಯಶ್ ನರ್ತನ್ ಗೆ ಊಟ ತಿಂಡಿ ಸಂಭಾವನೆ ಕೊಟ್ಟು ತಮಗಾಗಿ ಕತೆ ಬರೆಸುತ್ತಿದ್ದಾ ರಂತೆ. ಇದಕ್ಕಾಗಿ ನರ್ತನ್ ಐದು ಜನರ ಸ್ಟ್ರಾಂಗ್ ಟೀಮ್ ಕಟ್ಟಿ ಹಗಲು ರಾತ್ರಿ ಕಷ್ಟ ಪಡ್ತಿದ್ದಾರೆ. ಅಲ್ಲದೆ ಸ್ವತಃ ಯಶ್ ಕೂಡ ಈ ಟೀಮ್ ಜೊತೆ ಕೂತು ಸ್ಕ್ರಿಪ್ಟ್ ಕೆಲಸದಲ್ಲಿ ಇನ್ವಾಲ್ವ್ ಆಗಿದ್ದಾರಂತೆ. ಯಶ್ ಬಾಲಿವುಡ್ ಗಾಗಿ ಮುಂದಿನ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಅಲ್ಲದೇ ಬಾಂಬೇ ಮೂಲದ ನಿರ್ಮಾಪಕರಿಗೆ ಕಾಲ್ ಶೀಟ್ ನೀಡಿದ್ದಾರೆ, ಅಲ್ಲದೇ ಸ್ವತಃ ತಮ್ಮದೇ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಿಸುತ್ತಾರೆ ಅನ್ನೋ ರೂಮರ್ ಗಳು ಕೇಳಿ ಬಂದಿದ್ದವು.
ಆದರೆ ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದ ಯಶ್ ಕನ್ನಡದ ನಿರ್ಮಾಪಕರಿಗೆ ಕಾಲ್ ಶೀಟ್ ಕೊಟ್ಟಿದ್ದಾರೆ.ಈಗಾಗಲೇ ನಾಲ್ಕು ಸಿನಿಮಾಗಳ ನಿರ್ಮಾಣ RRR ನಂತ ಬಿಗ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿರುವ ಕೆವಿಎನ್ ಪ್ರೊಡಕ್ಷನ್ ಹೌಸ್ ನಲ್ಲಿ ಯಶ್ ಮುಂದಿನ ಸಿನಿಮಾ ಫೈನಲ್ ಆಗಿದೆ. ಕೆವಿಎನ್ ಪ್ರೊಡಕ್ಷನ್ ನಲ್ಲಿ ನರ್ತನ್ ಕಲ್ಪನೆಯ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಿವೃತ್ತ ಆರ್ಮಿ ಆಫೀಸರ್ ಪಾತ್ರದಲ್ಲಿ ಯಶ್ ಮಿಂಚಲಿದ್ದಾರಂತೆ. ಕೆವಿಎನ್ ಮಾಲೀಕರಾದ ವೆಂಕಟ್ ಕೋನಂಕಿ ಈಗಾಗಲೇ ಗೋವಾದಲ್ಲಿ ಬೀಡು ಬಿಟ್ಟಿದ್ದು ಯಶ್ ಜೊತೆ ಅಂತಿಮ ಹಂತದ ಮಾತುಕತೆಯಲ್ಲಿ ತೊಡಗಿದ್ದಾರಂತೆ. ಹೀಗಾಗಿ ಸದ್ಯದಲ್ಲೇ ಯಶ್ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಅನೌನ್ಸ್ ಗೆ ಸಿದ್ಧವಾಗಿದೆ.
ಇದನ್ನೂ ಓದಿ : ಇನ್ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಬರೆದ ಯಶ್ : ರಾಕಿ ಬಾಯ್ ಈಗ ನ್ಯಾಷನಲ್ ಸ್ಟಾರ್
ಇದನ್ನೂ ಓದಿ : ಸ್ಯಾಂಡಲ್‌ವುಡ್ ಖ್ಯಾತ ಹಾಸ್ಯನಟ ಮೋಹನ್ ಜುನೇಜ ಇನ್ನಿಲ್ಲ
What is KGF Starrer Rocking Star Yash next movie