KGF Running Successfully: ಬಾಲಿವುಡ್ ನಿದ್ದೆಗೆಡಿಸಿದ ಯಶ್! ಕೆಜಿಎಫ್ ಹಿಂದಿ ಪ್ರದೇಶಗಳಲ್ಲೂ ನಾಗಾಲೋಟ

ಬಾಲಿವುಡ್ ನಟ ಅಮೀರ್ ಖಾನ್ ಬುದ್ಧಿವಂತ ಅನ್ನೋದು ಈಗ ಅರ್ಥವಾಗುತ್ತಿದೆ. ತಾನು ನಟಿಸಿದ ಲಾಲ್ ಸಿಂಗ್ ಛಡ್ಡಾ ಸಿನಿಮಾವನ್ನು ಕೆಜಿಎಫ್ (KGF Running successfully) ಜೊತೆ ಜೊತೆಗೇ ಬಿಡುಗಡೆ ಮಾಡಬೇಕಿತ್ತು. ಬಿಡುಗಡೆ ಮಾಡೇ ತೀರುತ್ತೇನೆ ಎಂದು ದಿನಾಂಕವನ್ನು ಘೋಷಣೆ ಮಾಡಿದ್ದರು. ಆದರೆ, ಕೊನೆಗೆ ಹಿಂದೆ ಸರಿದರು. ನಟ ಯಶ್ ಮುಂಬಯಿಗೆ ಕಾಲಿಟ್ಟಾಗ ಅವರಿಗೆ ಸಿಕ್ಕ ಸಮ್ಮಾನ, ಗೌರವಗಳನ್ನು ಗಮನಿಸಿಯೋ, ಕೆಜಿಎಫ್ ಚಾಪ್ಟರ್ -2 ಸಿನಿಮಾದ ಹವಾ ಹೇಗಿರಬಹುದು ಎನ್ನುವ ಗುಪ್ತಮಾಹಿತಿ ಪಡೆದೋ ಏನೋ ತಮ್ಮ ಸಿನಿಮಾ ಬಿಡುಗಡೆಯನ್ನು ಎರಡು ತಿಂಗಳು ಮುಂದಕ್ಕೆ ಹಾಕಿಬಿಟ್ಟರು.

ಆರಂಭದಲ್ಲಿ ಅಮೀರ್ ಖಾನ್ ಕೆಜಿಎಫ್-2ಗೆ ಹೆದರಲು ಸಾಧ್ಯವೇ ಇಲ್ಲ. ಎಲ್ಲಿ ಅಮೀರ್ ಖಾನ್, ಎಲ್ಲಿಯಾ ಯಶ್ ಅನ್ನೋ ಮಾತುಗಳೂ ಕೇಳಿಬಂದವು. ಒಂದು ಪಕ್ಷ ಕೆಜಿಎಫ್-2 ಜೊತೆ ಛಡ್ಡಾ ಬಿಡುಗಡೆಯಾಗಿದ್ದಾರೆ ಅಮೀರ್ ಖಾನ್ ಗೆ ಮುಖಭಂಗ ಆಗುತ್ತಿದ್ದದ್ದು ಗ್ಯಾರಂಟಿ. ಇದೀಗ ಬಂದ ಸುದ್ದಿಯ ಪ್ರಕಾರ, ಯಶ್ ಬಾಕ್ಸ್ ಆಫೀಸ್ ಬಾದಷಾ ಆಗಿದ್ದಾರೆ. ಕೇವಲ 5 ದಿನಕ್ಕೆ ಕೆಜಿಎಫ್ ಚಿತ್ರದ ಕಲಕ್ಷನ್ 500 ಕೋಟಿ ದಾಟಿದೆ. ಜೊತೆಗೆ ಹಿಂದಿ ಭಾಷಿಕ ಪ್ರದೇಶಗಳಲ್ಲಿ ಬಾಹುಬಲಿ-2 ನಿರ್ಮಿಸಿದ್ದ ಮೈಲಿಗಲ್ಲನ್ನು ಕೆಜಿಎಫ್ ಸಿನಿಮಾ ಪುಡಿಗಟ್ಟಿದೆಯಂತೆ.

ಬಾಲಿವುಡ್ ಬೆಲ್ಟ್ ನಲ್ಲಿ ಬಾಹುಬಲಿ-2 ಸಿನಿಮಾ 200 ಕೋಟಿ ಮಾಡಲು 6 ದಿನ ತೆಗೆದುಕೊಂಡಿತ್ತು. ಆದರೆ, ಕೆಜಿಎಫ್ -2 ಕೇವಲ 5 ದಿನದಲ್ಲಿ 230 ಕೋಟಿ ರೂ.ಗಳಿಸಿ ಆಶ್ಚರ್ಯ ಮೂಡಿಸಿದೆ. ಅಂದರೆ, ಮೂಲ ಹಿಂದಿ ಸಿನಿಮಾಗಳು ಮಾಡಲು ಆಗದ ಬಾಕ್ಸ್ ಆಫೀಸ್ ದಾಖಲೆಯನ್ನು ಕೆಜಿಎಫ್ ಎನ್ನುವ ಕನ್ನಡ ಸಿನಿಮಾ ಮಾಡಿದೆ.

ಇದನ್ನೂ ಓದಿ : free kgf2 tickets : ಉದ್ಯೋಗಿಗಳಿಗೆ ಉಚಿತ ಕೆಜಿಎಫ್​ 2 ಟಿಕೆಟ್​ ವಿತರಿಸಿದೆ ಈ ಖಾಸಗಿ ಕಂಪನಿ..!

ಭಾನುವಾರದ ಹೊತ್ತಿಗೆ ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್-2 193 ಕೋಟಿಗಳಿಸಿದೆ. ಇನ್ನೂ ಒಂದು ವಾರಗಳ ಕಾಲ ಕೆಜಿಎಫ್ ಸಿನಿಮಾವನ್ನು ಥಿಯೇಟರ್ ಗಳಿಂದ ತೆಗೆಯದಿರಲು ಅಲ್ಲಿನ ವಿತರಕರು ಆಸಕ್ತಿ ತೋರಿಸಿದ್ದಾರೆ. ಕೆಜಿಎಫ್ ಗಿಂತ ಹೆಚ್ಚು ಹಣ ತಂದುಕೊಡುವ ಪರ್ಯಾಯ ಸಿನಿಮಾ ಯಾವುದೂ ಇಲ್ಲ ಎನ್ನಲಾಗುತ್ತಿದೆ. ಹೀಗಾಗಿ, ಬೇರೆ ಯೋಚನೆ ಮಾಡದೆ ಮಹಾರಾಷ್ಟ್ರ ಹಾಗೂ ಪಂಜಾಬ್ ಪ್ರದೇಶಗಳಲ್ಲಿ ಹೆಚ್ಚು ಕಮ್ಮಿ ಇನ್ನೂ 7 ದಿನಗಳ ಕಾಲ ಕೆಜಿಎಫ್ ಸಿನಿಮಾ ಪ್ರದರ್ಶನ ಮುಂದುವರಿಯಲಿದೆಯಂತೆ. ಕೆಜಿಎಫ್ ನಲ್ಲಿ ಆಕ್ಷನ್ ಮತ್ತು ಸೆಂಟಿಮೆಂಟ್ ಗಾಢವಾಗಿಬೆರೆತಿರುವುದರಿಂದ ಎಲ್ಲಾ ಭಾಷೆಯ ಪ್ರೇಕ್ಷಕರನ್ನು ಭರಪೂರ ಸೆಳೆಯುತ್ತಿದೆ. ಫರ್ಹನ್ ಅಖ್ತರ್ ಅವರ ಎಕ್ಸೆಲ್ ಮೂವೀಸ್ ಕೆಜಿಎಫ್ ಚಾಪ್ಟ್-2ನ ಹಿಂದಿ ಭಾಷಿಕ ಕೇಂದ್ರಗಳ ವಿತರಣೆ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಪಡೆದಿದೆ.

ಕೆಜಿಎಫ್-2 ಮತ್ತು ಬಾಹುಬಲಿ-2 ಗಳಿಕೆ ಪಟ್ಟಿ

ಕೆಜಿಎಫ್-2
ಡೇ-1, 53.95 ಕೋಟಿ, ಡೇ-2, 46.79, ಡೇ-3, 42.90, ಡೇ-4, 50.35

ಬಾಹುಬಲಿ-2
ಡೇ-1, 41 ಕೋಟಿ, ಡೇ-2, 40.50, ಡೇ-3, 46.50, ಡೇ-4, 40.25

ಇದನ್ನೂ ಓದಿ :KGF Collection : ಏರುತಲಿದೆ ಕೆಜಿಎಫ್ ಕಾವು! ನಾಲ್ಕು ದಿನಕ್ಕೆ 400 ಕೋಟಿ ಗಳಿಕೆ?

KGF Running successfully in Hindi belt and became nightmare to Bollywood industry

Comments are closed.