Namma Metro : ಈ ವರ್ಷವೂ ನಷ್ಟದಲ್ಲಿ ಬಿಎಂಆರ್ ಸಿಎಲ್ : ನಮ್ಮ‌ಮೆಟ್ರೋಗೆ ಪ್ರಯಾಣಿಕರದ್ದೇ ಕೊರತೆ

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಿನ ಜನರನ್ನು ಟ್ರಾಫಿಕ್ ದಟ್ಟಣೆಯ ಸಮಸ್ಯೆಯಿಂದ‌ ಪಾರು ಮಾಡಿದ ನಮ್ಮ‌ಮೆಟ್ರೋಗೆ (Namma Metro ) ಈಗ ಸಂಕಷ್ಟ ಎದುರಾಗಿದೆ. ಕಳೆದ 10 ವರ್ಷ ಗಳಿಂದ ನಷ್ಟದ ಹಾದಿ ಹಿಡಿದಿರೋ ನಮ್ಮ ಮೆಟ್ರೋಗೆ ಈ ವರ್ಷ ಬರೋಬ್ಬರಿ 335 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಹೀಗಾಗಿ ನಮ್ಮ ಮೆಟ್ರೋ ಆಡಳಿತ ಮಂಡಳಿ ಕಂಗಾಲಾಗಿದೆ.

ಈ ಹಣಕಾಸು ವರ್ಷದಲ್ಲಿ ಬರೋಬ್ಬರಿ 335 ಕೋಟಿ ರೂ. ನಷ್ಟ ಎದುರಿಸುತ್ತಿದೆ ಬಿಎಂಆರ್‌ಸಿಎಲ್, BMRCL ವಾರ್ಷಿಕ ವರದಿಯಲ್ಲಿ ಮಾಹಿತಿ ಬಹಿರಂಗಗೊಂಡಿದ್ದು,ನಷ್ಟದಿಂದ ಬಿಎಂಆರ್ ಸಿಎಲ್ ಮುಂದಿನ ಕಾಮಗಾರಿಗಳಿಗೆ ಅಡಚಣೆ ಉಂಟಾಗಿದೆ. ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲು ಮಾಡಿದ್ದ ಸಾಲಕ್ಕೆ ಪ್ರತಿಯಾಗಿ ಕೋಟ್ಯಂತರ ರು ಬಡ್ಡಿ ಸಂದಾಯ ಮಾಡಿದೆ ಬಿಎಂಆರ್ ಸಿಎಲ್. ಇದಲ್ಲದೇ ಆದಾಯಕ್ಕಿಂತ ಖರ್ಚು ಹೆಚ್ಚಿದ ಪರಿಣಾಮ ನಮ್ಮ ಮೆಟ್ರೋ ಸಾಲದ ಸುಳಿಗೆ ಸಿಲುಕಿದೆ.

ಹತ್ತು ವರ್ಷದಲ್ಲಿ ನಮ್ಮ ಮೆಟ್ರೋ (Namma Metro ) ನಷ್ಟದ ವಿವರ

2013- 14 – 83 ಕೋಟಿ ನಷ್ಟ
2014-15 – 33 ಕೋಟಿ ನಷ್ಟ
2015-16 – 341 ಕೋಟಿ ನಷ್ಟ
2016-17 – 457 ಕೋಟಿ ನಷ್ಟ
2017-18 – 352 ಕೋಟಿ ನಷ್ಟ
2018-19 – 498 ಕೋಟಿ ನಷ್ಟ
2020-21 – 320 ಕೋಟಿ ನಷ್ಟ
2021-22 – 335 ಕೋಟಿ ನಷ್ಟ

ಇನ್ನು ನಷ್ಟಕ್ಕೆ ಪ್ರಮುಖ ಕಾರಣಗಳೇನು ಅನ್ನೋದನ್ನು ಗಮನಿಸೋದಾದರೇ, ನಮ್ಮ ಮೆಟ್ರೋ ಸಂಚಾರ ಪ್ರಾರಂಭವಾಗಿ 10 ವರ್ಷವಾದರೂ ಮೆಟ್ರೋ ಆದಾಯದಲ್ಲಿ ಸುಧಾರಣೆ ಯಾಗ್ತಿಲ್ಲ. ಅಲ್ಲದೇ ಮೊದಲ ಹಂತಕ್ಕೆ ಮಾಡಿರುವ ಸಾಲಕ್ಕೆ ಹೆಚ್ಚು ಬಡ್ಡಿ ಹೊರೆ ಕಾರಣದಿಂದ ಹಾಗೂ ನಿರ್ವಹಣೆ ವೆಚ್ಚ ದುಬಾರಿಯಾಗ್ತಿದೆ. ಇನ್ನು 6 ಬೋಗಿ ಮೆಟ್ರೋ ರೈಲು ಆರಂಭವಾದರೂ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಯಷ್ಟು ಏರಿಕೆಯಾಗಲಿಲ್ಲ. ಒಂದು ಅಂದಾಜಿನ ಪ್ರಕಾರ ಮೆಟ್ರೋ ಮೊದಲ ಹಂತದಲ್ಲಿ 5 ಲಕ್ಷ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಆದರೆ ನಿರೀಕ್ಷೆಯಂತೆ ಮೆಟ್ರೋ ಪ್ರಯಾಣಿಕರು ಬೋಗಿ ಹತ್ತದ ಕಾರಣ ನಮ್ಮ ಮೆಟ್ರೋ ಆದಾಯ ಏರಿಕೆಯಾಗುತ್ತಿಲ್ಲ.

ಕೊರೋನಾ ಸೇರಿದಂತೆ ಕುಸಿದ ಆರ್ಥಿಕತೆ ಹಾಗೂ ಜನಜೀವನದ ಮಟ್ಟದಿಂದ ಜಾಹೀರಾತು ಹಾಗೂ ನಿಲ್ದಾಣದ ಮಳಿಗೆಗಳಿಂದ ಬರುತ್ತಿದ್ದ ಆದಾಯದಲ್ಲಿ ಕುಂಠಿತವಾಗಿದೆ. ಇನ್ನು ಜನಸಾಮಾನ್ಯರ ಪ್ರಕಾರ ನಮ್ಮ‌ಮೆಟ್ರೋ ಸಮಯದ ಉಳಿತಾಯದ ಪ್ರಯಾಣವಾಗಿದ್ದರೂ, ಬಿಎಂಟಿಸಿಗೆ ಹೋಲಿಸಿದ್ರೇ ನಮ್ಮ ಮೆಟ್ರೋ ಪ್ರಯಾಣ ಕೊಂಚ ದುಬಾರಿ. ಅಲ್ಲದೇ ಕಳೆದ ಎರಡು ವರ್ಷದಿಂದ ಕೊರೊನಾದಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದ ನಿಗಮಕ್ಕೆ ಆರ್ಥಿಕ ಹೊಡೆತ ಬಿದ್ದಿದೆ. ಅದರಲ್ಲೂ ಐಟಿ ಉದ್ಯಮ ವರ್ಕ್ ಫ್ರಂ ಹೋಂನಿಂದ ಹೊರಬಂದು ಕಚೇರಿಗೆ ತೆರಳಲು ಆರಂಭಿಸುವರೆಗೂ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗೋದು ಡೌಟ್. ಹೀಗಾಗಿ ಇನ್ನಷ್ಟು ಕಾಲ ನಮ್ಮ ಮೆಟ್ರೋ ನಷ್ಟದಲ್ಲೇ ಮುಂದುವರಿಯಬೇಕಾದ ಸ್ಥಿತಿ ಇದೆ.

ಇದನ್ನೂ ಓದಿ : ಬಸ್ ಗಳಿಗೆ ಬೆಂಕಿ ಕಾಟ : MIDI BUSಗಳ ಓಡಾಟವನ್ನೇ ನಿಲ್ಲಿಸಿದ ಬಿಎಂಟಿಸಿ

ಇದನ್ನೂ ಓದಿ : ಪೌರ ಕಾರ್ಮಿಕರ ಕಷ್ಟಕ್ಕೆ ಕಣ್ತೆರೆದ ಬಿಬಿಎಂಪಿ : ಕಾರ್ಮಿಕರಿಗೆ ಬರಲಿದೆ ಸುವಿಧಾ ಕ್ಯಾಬಿನ್

BMRCL Loss, Namma Metro shortage of passengers

Comments are closed.