ಕೆಜಿಎಫ್ ಸುಂದರಿ ಬರ್ತಡೇಗೆ ಸ್ಪೆಷಲ್ ಗಿಫ್ಟ್….! ಚಿತ್ರತಂಡ ರಿಲೀಸ್ ಮಾಡಿದೆ ಫರ್ಸ್ಟ್ ಲುಕ್ ಪೋಸ್ಟರ್…!!

ಕೆಜಿಎಫ್ ಚಿತ್ರದಲ್ಲಿ ಮೋಹಕ ಸೌಂದರ್ಯದ ಜೊತೆ ಮನೆಮಾತಾದ ಶ್ರೀನಿಧಿ ಶೆಟ್ಟಿ ಕೆಜಿಎಫ್- 2 ನಲ್ಲೂ ತಮ್ಮ ಜರ್ನಿ ಮುಂದುವರಿಸಿದ್ದು ಈಗ ಹಳೇ ಸುದ್ದಿ. ಆದರೇ ಕೆಜಿಎಫ್ ಸುಂದರಿಯ ಬರ್ತಡೇ ಗೆ ಚಿತ್ರತಂಡ ಸ್ಪೆಶಲ್ ಗಿಫ್ಟ್ ನೀಡಿದ್ದು, ಮನಸೆಳೆಯುವ ಕೆಜಿಎಫ್-2 ಫರ್ಸ್ಟ್ ಲುಕ್ ರಿಲೀಸ್ ಮಾಡಿದೆ.

ಈಗಾಗಲೇ ರಿಲೀಸ್ ಆಗಿರೋ ಕೆಜಿಎಫ್-2 ಫರ್ಸ್ಟ್ ಲುಕ್ ನಷ್ಟೇ ಅಟ್ರಾಕ್ಟಿವ್ ಆಗಿ ಹಿರೋಯಿನ್ ಶ್ರೀನಿಧಿ ಶೆಟ್ಟಿ ಫರ್ಸ್ಟ್ ಲುಕ್ ಪೋಸ್ಟರ್ ಮೂಡಿಬಂದಿದ್ದು, ಇದೇ ನಿಧಿ ಹುಟ್ಟುಹಬ್ಬದ ಸ್ಪೆಶಲ್ ಗಿಫ್ಟ್ ಎಂದು ಚಿತ್ರತಂಡ ಹೇಳಿದೆ.

ಅಚ್ಚಕಪ್ಪು ಬಣ್ಣದ ಮೇಲೆ ಜರಿ ವರ್ಕ್ ಇರುವ ಸೀರೆಯಲ್ಲಿ ಬಿಚ್ಚುಕೂದಲಿನ ಸುಂದರಿಯಂತೆ ಶ್ರೀನಿಧಿ ಶೆಟ್ಟಿ ಪೋಸ್ ನೀಡಿದ್ದು, ಕೆಜಿಎಫ್-೨ ನಲ್ಲಿ ಶ್ರೀನಿಧಿ ಲುಕ್ ರಿವೀಲ್ ಆದಂತಾಗಿದೆ.

ಇನ್ನು ಈ ಪೋಟೋವನ್ನು ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಇನ್ ಸ್ಟಾ ಗ್ರಾಂ ನಲ್ಲಿ ಈ ಪೋಟೋ ಹಂಚಿಕೊಂಡಿದ್ದು ಇದಕ್ಕೆ ಕ್ರೂರತೆ ಹಾಗೂ ಪ್ರೀತಿ ಜೊತೆಯಾಗಿ ಹೋಗೋಕಾಗುತ್ತಾ ಅನ್ನೋ ತಲೆಬರಹ ನೀಡೋ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಶ್ರೀನಿಧಿ ಹಬ್ಬಕ್ಕೆ ಚಿತ್ರತಂಡ ನೀಡಿರೋ ಸ್ಪೆಶಲ್ ಗಿಫ್ಟ್ ನೋಡಿ ಫುಲ್ ಖುಷಿಯಾಗಿದ್ದಾರೆ.

ಸಧ್ಯ ಕೆಜಿಎಫ್-2 ಚಿತ್ರೀಕರಣ ಮುಕ್ತಾಯದ ಹಂತದಲ್ಲಿದ್ದು, ಯಶ್ ಕೂಡ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ ತೆರೆಗೆ ಬರಬೇಕಿದ್ದ ಈ ಸಿನಿಮಾ ಮುಂದಿನ ವರ್ಷ ತೆರೆಕಾಣುವ ಸಾಧ್ಯತೆ ಇದ್ದು, ಕೊರೋನಾ ಸಂಕಷ್ಟ ಕೊಂಚ ತಗ್ಗಿದ ಮೇಲೆ ಚಿತ್ರ ತೆರೆಗೆ ಬರೋ ಸಾಧ್ಯತೆ ಇದೆ.

Comments are closed.