ಕೆಜಿಎಫ್ -2 ಟೀಂ ಗೆಟ್ ಟೂ ಗೆದರ್….! ಈ‌  ಜರ್ನಿ ನೆವರ್ ಎಂಡಿಂಗ್ ಎಂದ್ರು ಪ್ರಶಾಂತ್ ನೀಲ್….!!

ಕೆಜಿಎಫ್-2 ಚಿತ್ರ ರಿಲೀಸ್ ಗೆ  ಡೇಟ್ ಫಿಕ್ಸ್  ಆಗಿದೆ. ಜೊತೆಗೆ ಚಿತ್ರದ ಪ್ರಮೋಶನ್ ಗೆ ಸಾಕಷ್ಟು  ಚಟುವಟಿಕೆಗಳು ನಡೆಯುತ್ತಿದೆ. ಇದರ ಮಧ್ಯೆ ಕೆಜಿಎಫ್-2 ಚಿತ್ರತಂಡದ ಎಲ್ಲರೂ ಒಂದೆಡೆ ಸೇರಿ ಕಾಲ ಕಳೆದಿದ್ದಾರೆ.

ಕೆಜಿಎಫ್-2 ಚಿತ್ರ ತಂಡದ ಎಲ್ಲರನ್ನು ಒಂದೆಡೆ ಸೇರಿಸಿರುವ ಪ್ರಶಾಂತ್ ನೀಲ್ ಜಾಲಿಟೈಂ ಕಳೆದಿದ್ದು ಪೋಟೋವನ್ನು ಪ್ರಶಾಂತ್ ನೀಲ್ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲ ಪೋಟೋದ ಜೊತೆಗೆ ಟ್ವೀಟ್ ಮಾಡಿರೋ ಪ್ರಶಾಂತ್ ನೀಲ್, ಈ ತಂಡದ ಜೊತೆ ಜರ್ನಿ ಶುರುವಾಗಿದೆ. ಕೊನೆಯಾಗೋದಿಲ್ಲ ಎಂದು ಬರೆದುಕೊಂಡಿದ್ದಾರೆ.

ಈ ಗೆಟ್ ಟೂ ಗೆದರ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್, ನಿರ್ದೇಶಕ ಪ್ರಶಾಂತ್ ನೀಲ್ ದಂಪತಿ,ನಿರ್ಮಾಪಕ ವಿಜಯ್ ಕಿರಂಗದೂರು ದಂಪತಿ ಸೇರಿದಂತೆ ಕೆಜಿಎಫ್-2 ಸಿನಿಮಾದ ಬಹುತೇಕ ರು ಪಾಲ್ಗೊಂಡಿದ್ದಾರೆ.

ಕೆಜಿಎಫ್-2 ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಇತ್ತೀಚಿಗಷ್ಟೇ ಚಿತ್ರದ‌ ನಾಯಕಿ ಶ್ರೀನಿಧಿ ಶೆಟ್ಟಿ ಡಬ್ಬಿಂಗ್ ಪೋಟೋ ಹಂಚಿಕೊಂಡಿದ್ದರು.

https://twitter.com/prashanth_neel/status/1370664678288805890?ref_src=twsrc%5Etfw%7Ctwcamp%5Etweetembed%7Ctwterm%5E1370664678288805890%7Ctwgr%5E%7Ctwcon%5Es1_c10&ref_url=https%3A%2F%2Fnewsfirstlive.com%2F2021%2F03%2F13%2Fentire-kgf-team-spends-some-good-time-as-shared-pictures-by-director-prashanth-neel%2F

ಪ್ರಶಾಂತ್ ನೀಲ್ ಕೂಡ ಕೆಜಿಎಫ್-2 ಬಳಿಕ ಸಲಾರ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು. ಫ್ರೀ ಟೈಂ ನಲ್ಲಿ ಕೆಜಿಎಫ್-2 ಟೀಂ ಜೊತೆ ಸಮಯ ಕಳೆದಿದ್ದಾರೆ.

Comments are closed.