ಬುಧವಾರ, ಜೂನ್ 18, 2025
HomeCinemaYash 100 crore offer : ಕೆಜಿಎಫ್‌ 2 ಸೂಪರ್‌ ಸಕ್ಸಸ್‌ : ಯಶ್ ಗೆ...

Yash 100 crore offer : ಕೆಜಿಎಫ್‌ 2 ಸೂಪರ್‌ ಸಕ್ಸಸ್‌ : ಯಶ್ ಗೆ 100 ಕೋಟಿ ರೂಪಾಯಿ ಸಂಭಾವನೆ ಆಫರ್‌ ಕೊಟ್ಟ ನಿರ್ಮಾಪಕ ದಿಲ್ ರಾಜು

- Advertisement -

ಕೆಜಿಎಫ್ ಯಶಸ್ಸು ಸ್ಯಾಂಡಲ್ ವುಡ್ ನ್ನು ಜಗತ್ತಿಗೆ ಪರಿಚಯಿಸಿದೆ.ಮಾತ್ರವಲ್ಲ ರಾಕಿಂಗ್ ಸ್ಟಾರ್ ಯಶ್ ತಾರಾಮೌಲ್ಯವನ್ನು ಹೆಚ್ಚಿಸಿದೆ. ಕೆಜಿಎಫ್ ಹಾಗೂ ಕೆಜಿಎಫ್-2 ಯಶಸ್ಸಿನಿಂದ ಯಶ್ ಗೆ ಬೇಡಿಕೆಯೂ ಹೆಚ್ಚಿದ್ದು ಭಾಷಾ ಗಡಿ ಇಲ್ಲದೇ ಎಲ್ಲ ಚಿತ್ರರಂಗದವರೂ ಯಶ್ ನ್ನು(Yash 100 crore offer) ಸಿನಿಮಾಗೆ ಆಹ್ವಾನಿಸುತ್ತಿದ್ದಾರೆ. ಈ‌ ಮಧ್ಯೆ ಸೌತ್ ನ ಹೆಸರಾಂತ ನಿರ್ಮಾಪಕ ದಿಲ್ ರಾಜು ಯಶ್ ಗಾಗಿ ಸಿನಿಮಾ ನಿರ್ಮಿಸಲು ಮುಂದಾಗಿದ್ದು ಅದಕ್ಕಾಗಿ ಯಶ್ ಗೆ 100 ಕೋಟಿ ರೂಪಾಯಿ ಆಫರ್ ನೀಡಿ ಸದ್ದು ಮಾಡಿದ್ದಾರೆ.

ಸದ್ಯ ಕೆಜಿಎಫ್-2 ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ ನಟ ಯಶ್. ಕೆಜಿಎಫ್ ಹಾಗೂ ಕೆಜಿಎಫ್-2 ಯಶಸ್ಸನ್ನು ನೋಡಿದ ಅಭಿಮಾನಿಗಳು ಚಿತ್ರರಂಗ ಎಲ್ಲವೂ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲದಲ್ಲಿದೆ. ಕೆಜಿಎಫ್-3 ಸಿನಿಮಾ ತೆರೆಗೆ ಬರೋದು ಖಚಿತವಾಗಿದ್ದರೂ ಯಶ್ ಮುಂದಿನ ಸಿನಿಮಾ ಕೆಜಿಎಫ್ 3 ಅಲ್ಲ ಎನ್ನಲಾಗ್ತಿದೆ. ಈ ಮಧ್ಯೆ ಯಶ್ ಮುಂದಿನ ಸಿನಿಮಾವನ್ನು ಕೆವಿಎನ್ ನಿರ್ಮಾಣ ಸಂಸ್ಥೆಯ ಜೊತೆ ನರ್ತನ್ ನಿರ್ದೇಶನದಲ್ಲಿ ಮಾಡೋದು ಖಚಿತವಾಗಿದೆ.

ಆದರೆ ಸಿನಿಮಾ ಯಾವುದು ,ಯಾವಾಗ ತೆರೆಗೆ ಬರುತ್ತೆ ಅನ್ನೋದರ ಬಗ್ಗೆ ಮಾಹಿತಿ ಇಲ್ಲ. ಈ ಮಧ್ಯೆ ಯಶ್ ಗೆ ತೆಲುಗಿನಿಂದ ಭಾರಿ ಬೇಡಿಕೆ ಬರುತ್ತಿದ್ದು, ನರ್ತನ್ ಸಿನಿಮಾದ ಬಳಿಕ ಯಶ್ ಮುಂದಿನ ಸಿನಿಮಾವನ್ನು ತೆಲುಗಿನಲ್ಲಿ ದಿಲ್ ರಾಜು ಜೊತೆ ಮಾಡಲಿದ್ದಾರಂತೆ. ದಿಲ್ ರಾಜು ಜೊತೆಗಿನ ಮುಂದಿನ ಸಿನಿಮಾವೂ ಫ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಇದಕ್ಕಾಗಿ ದಿಲ್ ರಾಜು ಯಶ್ ಗೆ 100 ಕೋಟಿ ರೂಪಾಯಿ ಸಂಭಾವನೆ ನೀಡಲಿದ್ದಾರಂತೆ. ಯಶ್ ಗೆ ದಿಲ್ ರಾಜು 100 ಕೋಟಿ ಸಂಭಾವನೆ ನೀಡಿ ಕರೆಸ್ತಿರೋ ಸುದ್ದಿ ಟಾಲಿವುಡ್ ನಲ್ಲಿ ಸದ್ದು ಮಾಡ್ತಿದೆ.

ಸದ್ಯ ದಿಲ್‌ರಾಜು ದಳಪತಿ ವಿಜಯ್ ಸಿನಿಮಾ ಮಾಡುತ್ತಿದ್ದು ಆ ಸಿನಿಮಾ ಬಳಿಕ ಯಶ್ ಗಾಗಿ ಸಿನಿಮಾ ನಿರ್ಮಿಸಲಿದ್ದಾರಂತೆ. ಇನ್ನು ದಿಲ್ ರಾಜು ಯಶ್ ಗೆ ಹೊಸಬರಲ್ಲ. ಯಶ್ ಮತ್ತು ದಿಲ್ ರಾಜು ಸ್ನೇಹಿತರಾಗಿದ್ದು ತೆಲುಗಿನಲ್ಲಿ ಕೆಜಿಎಫ್-2 ವಿತರಣೆಯನ್ನು ದಿಲ್ ರಾಜು ಮಾಡಿದ್ದರು. ಈಗ ಯಶ್ ಗಾಗಿ ಸಿನಿಮಾ ನಿರ್ಮಾಣ ಮಾಡಲು ಸಿದ್ಧವಾಗಿದ್ದಾರೆ. ಯಶ್ ಮುಂದಿನ ಸಿನಿಮಾ ಯಶ್ 19 ಆಗಿದ್ದು ಇದರಲ್ಲಿ ಯಶ್ ಜೊತೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರಂತೆ. ಇದಾದ ಬಳಿಕ 100 ಕೋಟಿ ಸಂಭಾವನೆ ಪಡೆಯೋ ಸಿನಿಮಾಗೆ ಯಶ್ ನಾಯಕರಾಗಲಿದ್ದಾರೆ.

ಇದನ್ನೂ ಓದಿ : ರಾಕಿಂಗ್ ‌ಸ್ಟಾರ್ ಯಶ್ ಕೆಜಿಎಫ್-3 ಗೆ ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್ ನಾಯಕಿ ?

ಇದನ್ನೂ ಓದಿ : Vikrant Rona Trailer record : ಕಿಚ್ಚನ ಮೆಚ್ಚಿದ್ರು 72 ಲಕ್ಷ ಜನ : ದಾಖಲೆಯತ್ತ ಮುನ್ನುಗ್ಗಿದ ವಿಕ್ರಾಂತ್ ರೋಣ ಟ್ರೇಲರ್

KGF2 Super Success, Rocking Star Yash 100 crore offer producer Dil Raju

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular