King Is Back : ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ


ಲೀಸೆಸ್ಟರ್ : ಆಧುನಿಕ ಕ್ರಿಕೆಟ್”ನ ಮಾಸ್ಟರ್ ಬ್ಲಾಸ್ಟರ್ ವಿರಾಟ್ ಕೊಹ್ಲಿ, ಲೀಸೆಸ್ಟರ್ ಶೈರ್ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ (India vs Leicestershire warm up match) ಅಮೋಘ ಅರ್ಧಶತಕ (Virat Kohli Half century
) ಬಾರಿಸಿದ್ದಾರೆ. ಪ್ರಥಮ ಇನ್ನಿಂಗ್ಸ್’ನಲ್ಲಿ ಲೀಸೆಸ್ಟರ್ ಶೈರ್ ತಂಡವನ್ನು 244 ರನ್’ಗಳಿಗೆ ಕಟ್ಟಿ ಹಾಕಿ 2 ರನ್”ಗಳ ಅಲ್ಪ ಮುನ್ನಡೆ ಪಡೆದ ಟೀಮ್ ಇಂಡಿಯಾ, 2ನೇ ಇನ್ನಿಂಗ್ಸ್’ನಲ್ಲಿ ಚೇತರಿಕೆಯ ಬ್ಯಾಟಿಂಗ್ ಪ್ರದರ್ಶನ ತೋರಿದೆ.

ಆರಂಭಿಕರಾದ ಶುಭಮನ್ ಗಿಲ್ ಮತ್ತು ಕೆ.ಎಸ್ ಭರತ್ ಮೊದಲ ವಿಕೆಟ್’ಗೆ 62 ರನ್ ಸೇರಿಸಿದ್ರು. ನಾಯಕ ರೋಹಿತ್ ಶರ್ಮಾ ಬದಲು ಇನ್ನಿಂಗ್ಸ್ ಆರಂಭಿಸಿದ ವಿಕೆಟ್ ಕೀಪರ್ ಭರತ್ 43 ರನ್ ಗಳಿಸಿದ್ರು. ಮೊದಲ ಇನ್ನಿಂಗ್ಸ್”ನಲ್ಲಿ ಭರತ್ ಅಜೇಯ 70 ರನ್ ಗಳಿಸಿದ್ದರು. 7ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಮಾಜಿ ನಾಯಕ ವಿರಾಟ್ ಕೊಹ್ಲಿ, ಬಿರುಸಿನ ಆಟವಾಡಿ 69 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ರು. ಪ್ರಥಮ ಇನ್ನಿಂಗ್ಸ್’ನಲ್ಲಿ ಕಿಂಗ್ ಕೊಹ್ಲಿ 33 ರನ್ ಗಳಿಸಿ ಔಟಾಗಿದ್ದರು.

ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಲೀಸೆಸ್ಟರ್ ಶೈರ್ ವಿರುದ್ಧ ಟೀಮ್ ಇಂಡಿಯಾ ಅಭ್ಯಾಸ ಪಂದ್ಯವಾಡುತ್ತಿದೆ. ಕಳೆದ ವರ್ಷ ಕೋವಿಡ್ ಕಾರಣದಿಂದ ಮೊಟಕು ಗೊಂಡಿದ್ದ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವನ್ನು ಭಾರತ ಜುಲೈ 1ರಿಂದ ಎಡ್ಜ್”ಬಾಸ್ಟನ್ ಮೈದಾನದಲ್ಲಿ ಆಡಲಿದೆ. ಸರಣಿಯಲ್ಲಿ ಭಾರತ 2-1ರಿಂದ ಮುನ್ನಡೆಯಲ್ಲಿದ್ದು, ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಅವಕಾಶ ಭಾರತದ ಮುಂದಿದೆ.

ಇದನ್ನೂ ಓದಿ : Murali Vijay : ಡಿಕೆ ಕಂಬ್ಯಾಕ್ ಮಾಡಿದ್ದನ್ನು ನೋಡಿ ರೊಚ್ಚಿಗೆದ್ದ ಮುರಳಿ ವಿಜಯ್ ಮಾಡಿದ್ದೇನು ಗೊತ್ತಾ?

ಇದನ್ನೂ ಓದಿ : 1983 World Cup victory : ಭಾರತ ಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದು ಇಂದಿಗೆ 39 ವರ್ಷ, ದಿಗ್ಗಜರು ಹೇಳಿದ್ದೇನು ?

ಇದನ್ನೂ ಓದಿ : Umpire Asad rauf : ಪಾಕಿಸ್ತಾನದಲ್ಲಿ ಚಪ್ಪಲಿ ಮಾರುತ್ತಿದ್ದಾರೆ ಮಾಜಿ ಐಸಿಸಿ ಅಂಪೈರ್

ಇದನ್ನೂ ಓದಿ : Rajat Patidar : ರಣಜಿ ಫೈನಲ್‌ನಲ್ಲಿ ಭರ್ಜರಿ ಶತಕ ಬಾರಿಸಿದ ಆರ್‌ಸಿಬಿ ಸ್ಟಾರ್

King Is Back India vs Leicestershire warm up match Virat Kohli Half century

Comments are closed.