Rashmika Mandanna Controversy : ನಾಯಿಗೂ ಫ್ಲೈಟ್ ಟಿಕೇಟ್ ಬುಕ್ ಮಾಡಿ : ರಶ್ಮಿಕಾ ಸುತ್ತ ಹೊಸತೊಂದು ವಿವಾದ

ಸದಾ ಸುದ್ದಿಯಲ್ಲಿರೋ ಹುಡುಗಿ ನ್ಯಾಶನಲ್ ಕ್ರಶ್ ರಶ್ಮಿಕಾ‌ ಮಂದಣ್ಣ. ಸಾಲು ಸಾಲು ಸಿನಿಮಾ , ಸಂಭಾವನೆ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗೋ ರಶ್ಮಿಕಾ ಈ ಭಾರಿ ನಾಯಿ ಕಾರಣಕ್ಕೆ ಸುದ್ದಿಯಾಗಿದ್ದಾರೆ. ರಶ್ಮಿಕಾ ತಮ್ಮ ಸಿನಿಮಾ ಶೂಟಿಂಗ್ ಗೆ ತೆರಳುವಾಗ ತಮ್ಮ ಪಪ್ಪಿಗೂ ಫ್ಲೈಟ್ ಟಿಕೇಟ್ ಬುಕ್ ಮಾಡುವಂತೆ ಡಿಮ್ಯಾಂಡ್ ಮಾಡ್ತಾರೆ ಎಂಬ ಆರೋಪ ರಶ್ಮಿಕಾ (Rashmika Mandanna Controversy) ಮೇಲೆ ಕೇಳಿಬಂದಿದೆ.

ಸದ್ಯ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಮುಂಬೈ, ಹೈದ್ರಾಬಾದ್ ಅಂತೆಲ್ಲ ಓಡಾಡುತ್ತಲೇ ಇರುತ್ತಾರೆ. ಹೀಗೆ ಓಡಾಡೋವಾಗ ಹಾಗೂ ಶೂಟಿಂಗ್ ಗೆ ಹೋಗುವಾಗ ನಟಿ ರಶ್ಮಿಕಾಗೆ ನಿರ್ಮಾಪಕರುಗಳೇ ದುಬಾರಿ ಕ್ಲಾಸ್ ಟಿಕೇಟ್ ಬುಕ್ ಮಾಡೋದು ಕಾಮನ್. ಆದರೆ ಈಗ ರಶ್ಮಿಕಾ ತಮಗೆ ಮಾತ್ರವಲ್ಲ ತಮ್ಮ ಟ್ರಾವೆಲ್ ವೇಳೆ ತಮ್ಮ ಪ್ರೀತಿಯ ನಾಯಿ ಔರಾ ಗೂ ಟಿಕೇಟ್ ಬುಕ್ ಮಾಡುವಂತೆ ಡಿಮ್ಯಾಂಡ್ ಮಾಡ್ತಾರೆ ಎಂದು ಎಲ್ಲ ಮಾಧ್ಯಮಗಳು ಸುದ್ದಿ ಮಾಡಿವೆ.

ತೆಲುಗು,ತಮಿಳು ಹಾಗೂ ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಮಂದಣ್ಣ ಶೂಟಿಂಗ್ ಗೆ ಸಹಾಯವಾಗಲಿ ಅಂತ ಹೈದ್ರಾಬಾದ್ ನಲ್ಲೊಂದು ಮನೆ ಖರೀದಿ ಮಾಡಿದ್ದಾರೆ‌. ಆ ಮನೆಯಲ್ಲಿ ತಮ್ಮ ಫೆವರಿಟ್ ಪ್ರಾಣಿ ನಾಯಿಯನ್ನು ಸಾಕಿದ್ದಾರೆ‌. ಅದಕ್ಕೆ ಔರಾ ಎಂದು ನಾಮಕರಣ ಮಾಡಿದ್ದಾರೆ. ಈ ನಾಯಿಯನ್ನು ತುಂಬಾ ಮಿಸ್ ಮಾಡಿಕೊಳ್ಳುವ ರಶ್ಮಿಕಾ ಅದಕ್ಕಾಗಿಯೇ ಶೂಟಿಂಗ್ ಗೆ ನಾಯಿ ಕರೆದೊಯ್ಯಲು ಟಿಕೇಟ್ ಬುಕ್ ಮಾಡಲು ದುಂಬಾಲು ಬೀಳ್ತಾರೆ ಎಂದು ಹೇಳಲಾಗ್ತಿದೆ. ಸದ್ಯ ರಶ್ಮಿಕಾ ಸೌತ್ ನ ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿಯರಲ್ಲಿ ಒಬ್ಬರಾಗಿರೋ ರಶ್ಮಿಕಾ ನಾಯಿ ಟಿಕೇಟ್ ಕಾರಣಕ್ಕೆ ನಿರ್ಮಾಪಕರಿಗೆ ದುಬಾರಿಯಾಗುತ್ತಿದ್ದಾರೆ ಎಂಬ ರೂಮರ್ ಕೇಳಿಬಂದಿದೆ.

ಇನ್ನು ಈ ರೂಮರ್ ಗಳಿಗೆ ಸ್ವತಃ ರಶ್ಮಿಕಾ ಮಂದಣ್ಣ ಕೂಡ ರಿಯಾಕ್ಟ್ ಮಾಡಿದ್ದು, ಈ ವಿಷಯ ನನಗೆ ಫನ್ನಿ ಎನ್ನಿಸಿದೆ.ಈ ದಿನವನ್ನು ಉಲ್ಲಾಸಿತಗೊಳಿಸಿದೆ.ಸುದ್ದಿ ಕೇಳಿ ನಾನಂತೂ ಮನಸ್ ಪೂರ್ತಿ ನಕ್ಕು ಬಿಟ್ಟೆ. ನನ್ನ ಔರಾ ಬಗ್ಗೆ ನೀವ್ಯಾರು ಕಾಳಜಿ ವಹಿಸಬೇಡಿ. ಅದೆಂದೂ ನನ್ನೊಂದಿಗೆ ಪ್ರಯಾಣಿಸಲು ಇಷ್ಟಪಡುವುದಿಲ್ಲ. ನಿಮ್ಮ ಕಾಳಜಿಗೆ ಧನ್ಯವಾದ ಎಂದು ಹೇಳಿದ್ದಾರೆ. ವಿವಾದಗಳಿಗೂ ರಶ್ಮಿಕಾ ಎಂದರೇ ತುಂಬ ಪ್ರೀತಿ ಹೀಗಾಗಿ ಸದಾ ಒಂದಿಲ್ಲೊಂದು ವಿವಾದ ಅವರ ಸುತ್ತ ಸುತ್ತುತ್ತಲೇ ಇರುತ್ತದೆ‌. ಮೊನ್ನೆ ಮೊನ್ನೆಯಷ್ಟೇ ರಶ್ಮಿಕಾ ಕದ್ದು ಮುಚ್ಚಿ ಚಾರ್ಲಿ ಸಿನಿಮಾ ನೋಡಿದ್ದಾರೆ ಎಂಬ ರೂಮರ್ ಹರಿದಾಡಿತ್ತು.

ಇದನ್ನೂ ಓದಿ : Vikrant Rona Trailer record : ಕಿಚ್ಚನ ಮೆಚ್ಚಿದ್ರು 72 ಲಕ್ಷ ಜನ : ದಾಖಲೆಯತ್ತ ಮುನ್ನುಗ್ಗಿದ ವಿಕ್ರಾಂತ್ ರೋಣ ಟ್ರೇಲರ್

ಇದನ್ನೂ ಓದಿ : Yash 100 crore offer : ಕೆಜಿಎಫ್‌ 2 ಸೂಪರ್‌ ಸಕ್ಸಸ್‌ : ಯಶ್ ಗೆ 100 ಕೋಟಿ ರೂಪಾಯಿ ಸಂಭಾವನೆ ಆಫರ್‌ ಕೊಟ್ಟ ನಿರ್ಮಾಪಕ ದಿಲ್ ರಾಜು

Book a flight ticket for the dog, Rashmika Mandanna Controversy

Comments are closed.