Kiara Advani : ಬಾಲಿವುಡ್ನಲ್ಲಿ ಕಬೀರ್ ಸಿಂಗ್, ಶೇರ್ ಷಾಗಳಂತಹ ಹಿಟ್ ಸಿನಿಮಾಗಳನ್ನು ನೀಡಿರುವ ನಟಿ ಕಿಯಾರಾ ಅಡ್ವಾಣಿ ಸದ್ಯ ತಮ್ಮ ಮುಂಬರುವ ಸಿನಿಮಾ ಜುಗ್ಜುಗ್ ಜಿಯೋದ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಟ್ರೇಲರ್ ಲಾಂಚ್ ಸಮಾರಂಭದಲ್ಲಿ ನಟಿ ಕಿಯಾರಾ ಕಾಣಿಸಿಕೊಂಡರು. ಮದುವೆ ಹಾಗೂ ವಿಚ್ಛೇದನಕ್ಕೆ ಸಂಬಂಧಿಸಿದ ಸಿನಿಮಾ ಇದಾಗಿದ್ದು ಈ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಧ್ಯಮದವರು ಕಿಯಾರಾ ಎದುರು ಮದುವೆ ಸುದ್ದಿಯನ್ನು ಎತ್ತಿದ್ದಾರೆ.
ಅಂದಹಾಗೆ ಕಳೆದ ಕೆಲವು ವರ್ಷಗಳಿಂದ ನಟಿ ಕಿಯಾರಾ ಅಡ್ವಾಣಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಯಲ್ಲಿ ಡೇಟಿಂಗ್ನಲ್ಲಿದ್ದಾರೆ ಎಂಬ ಸುದ್ದಿ ಬಿ ಟೌನ್ನಲ್ಲಿ ಹರಿದಾಡುತ್ತಿದೆ.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪತ್ರಕರ್ತರೊಬ್ಬರು ನಟಿ ಕಿಯಾರಾ ಬಳಿಯಲ್ಲಿ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಕಿಯಾರಾ ಅಡ್ವಾಣಿ, ಮದುವೆಯಾಗಿದೆಯೂ ನಾನು ಸೆಟಲ್ ಆಗಬಹುದು ಅಲ್ವಾ? ನಾನು ಈಗಲೇ ಸೆಟಲ್ ಆಗಿದ್ದೇನೆ. ನಾನು ಕೆಲಸ ಮಾಡುತ್ತೇನೆ, ಸಂಪಾದನೆ ಮಾಡುತ್ತಿದ್ದೇನೆ ಜೊತೆಯಲ್ಲಿ ಖುಷಿಯಾಗಿಯೂ ಇದ್ದೇನೆ ಎಂದು ಹೇಳಿದರು.
ಕೆಲವು ವಾರಗಳ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ದೂರಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡದ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರರ ಫೋಟೋಗಳಿಗೆ ಲೈಕ್ಸ್ ನೀಡುತ್ತಾ ಸಾರ್ವಜನಿಕವಾಗಿಯೂ ಕಾಣಿಸಿಕೊಂಡ ಬಳಿಕ ಅಭಿಮಾನಿಗಳಿಗೆ ಇವರಿಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಎಂಬ ಭಾವನೆ ಮೂಡುವಂತೆ ಮಾಡಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಈ ಜೋಡಿ ತಮ್ಮ ಸಂಬಂಧದದ ಬಗ್ಗೆ ಸಾರ್ವಜನಿಕವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಇಬ್ಬರು ಆಗಾಗ ಜೋಡಿಯಾಗಿ ಕಾಣಿಸಿಕೊಳ್ತಿರ್ತಾರೆ.
ಅಂದಹಾಗೆ ಕಿಯಾರಾ ಅಡ್ವಾಣಿಯವರ ಮುಂದಿನ ಸಿನಿಮಾ ಜುಗ್ ಜುಗ್ ಜಿಯೋದ ಟ್ರೇಲರ್ ಲಾಂಚ್ ಆಗಿದೆ. ಈ ಸಿನಿಮಾದಲ್ಲಿ ನೀತು ಕಪೂರ್, ಅನಿಲ್ ಕಪೂರ್ , ವರುಣ್ ಧವನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನು ಓದಿ : IPL Star ಅಪ್ಪಾ ಕ್ಷೌರಿಕ ಮಗ ಐಪಿಎಲ್ ಸ್ಟಾರ್!
ಇದನ್ನೂ ಓದಿ : Sunny Leone Autograph : ಅಭಿಮಾನಿ ಎದೆಮೇಲೆ ಸನ್ನಿ ಲಿಯೋನ್ ಆಟೋಗ್ರಾಫ್ : ಮಳೆ ಚಳಿಗೆ ಬಿಸಿ ಏರಿಸಿದ ಮಾದಕ ನಟಿ
Kiara Advani REACTS to question on marriage plans: ‘I am well-settled’