Mandarthi Lover suicide : ಮಂದಾರ್ತಿ ಬಳಿ ಕಾರಿನಲ್ಲಿ ನವ ಜೋಡಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ : ಉಡುಪಿಯಲ್ಲೇ ಅಂತ್ಯ ಸಂಸ್ಕಾರ

ಉಡುಪಿ : ನವ ಜೋಡಿಯೊಂದು ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ (Mandarthi Lover suicide ) ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೃತ ದೇಹಗಳ ಅಂತ್ಯಕ್ರೀಯೆಯನ್ನು ಉಡುಪಿಯ ಚಿತಾಗಾರದಲ್ಲಿ ನಡೆಸಲಾಗಿದೆ. ಇನ್ನೊಂದೆಡೆಯಲ್ಲಿ ತಮ್ಮ ಮಕ್ಕಳು ಪ್ರೀತಿಸುತ್ತಿದ್ದ ವಿಚಾರ ನಮಗೆ ತಿಳಿದಿರಲಿಲ್ಲ. ಒಂದೊಮ್ಮೆ ತಿಳಿದಿದ್ದರೆ ಮದುವೆ ಮಾಡಿಸುತ್ತಿದ್ದೇವು ಎಂದು ಪೋಷಕರು ಹೇಳಿಕೆ ನೀಡಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಇದೀಗ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ.

ಬೆಂಗಳೂರಿನ ಯಶವಂತ್‌ ಯಾದವ್‌ ಹಾಗೂ ಜ್ಯೋತಿ ಉಡುಪಿ ಜಿಲ್ಲೆಯ ಮಂದಾರ್ತಿಯ ಬಳಿಯ ಹೆಗ್ಗಂಜೆಯ ಬಳಿಯಲ್ಲಿ ಸುಟ್ಟು ಕರಕಲಾಗಿರುವ ಕಾರಿನಲ್ಲಿ ನವ ಜೋಡಿಯ ಮೃತ ದೇಹ ಪತ್ತೆಯಾಗಿತ್ತು. ಬೆಂಕಿಯ ಕೆನ್ನಾಲಗೆಯಲ್ಲಿ ಬೆಂದು ಹೋಗಿರುವ ಮೃತ ದೇಹಗಳು ಗುರುತು ಸಿಗದಷ್ಟು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಬಂದ ಬ್ರಹ್ಮಾವರ ಠಾಣೆಯ ಪೊಲೀಸರು ಮೃತ ದೇಹಗಳ ಗುರುತು ಪತ್ತೆ ಹಚ್ಚಿದ್ದರು. ಮಂಗಳೂರಿನಿಂದ ಕಾರನ್ನು ಬಾಡಿಗೆಗೆ ಪಡೆದು ಬಂದು ಕಾರಿನಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗುತ್ತಿದೆ. ಅಲ್ಲದೇ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ.

ಉಡುಪಿಯಲ್ಲಿ ಅಂತ್ಯಕ್ರೀಯೆ

ಯಶವಂತ್‌ ಯಾದವ್‌ ಹಾಗೂ ಜ್ಯೋತಿ ಅವರ ಮೃತ ದೇಹಳ ಮರಣೋತ್ತರ ಕಾರ್ಯವನ್ನು ಖಾಸಗಿ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ಉಡುಪಿಯ ಇಂದ್ರಾಳಿಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರೀಯೆಯನ್ನು ನಡೆಸಲಾಗಿದೆ. ಇಬ್ಬರ ಕುಟುಂಬಸ್ಥರು ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ.

ಪ್ರೀತಿ ವಿಚಾರ ಗೊತ್ತೇ ಇರಲಿಲ್ಲ ಎಂದ ಪೋಷಕರು

ಬೆಂಗಳೂರಿನ ಯಶವಂತ್‌ ಯಾದವ್‌ ಹಾಗೂ ಜ್ಯೋತಿ ಸಾವಿನ ಬೆನ್ನಲ್ಲೇ ಹಲವು ಮೆಸೆಜ್‌ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಪ್ರಮುಖವಾಗಿ ಈ ಯುವ ಜೋಡಿಯ ಮದುವೆಗೆ ಮನೆಯವರ ವಿರೋಧವಿತ್ತು. ಇದೇ ಕಾರಣಕ್ಕೆ ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು. ಆದ್ರೀಗ ಪೋಷಕರು ಶಾಕಿಂಗ್‌ ಹೇಳಿಕೆಯನ್ನು ನೀಡಿದ್ದಾರೆ.

ಅಂತ್ಯಕ್ರೀಯೆ ನೆರವೇರಿಸಿದ ಬಳಿಕ ಮಾಧ್ಯಮಾದವರೊಂದಿಗೆ ಮಾತನಾಡಿದ ಯಶವಂತ್‌ ಹಾಗೂ ಜ್ಯೋತಿ ಪೋಷಕರು, ತಮಗೆ ಮಕ್ಕಳು ಪ್ರೀತಿಸುತ್ತಿದ್ದ ವಿಚಾರ ಗೊತ್ತೇ ಇರಲಿಲ್ಲ. ಒಂದೊಮ್ಮೆ ಗೊತ್ತಿದ್ದರೆ ಅವರಿಬ್ಬರಿಗೂ ಮದುವೆ ಮಾಡಿಸುತ್ತಿದ್ದೆವು ಎಂದಿದ್ದಾರೆ. ಮೇ 18 ರಂದು ಇಬ್ಬರೂ ಕೂಡ ಮನೆ ಬಿಟ್ಟು ಮಂಗಳೂರಿಗೆ ಬಂದಿದ್ದಾರೆ. ಮಂಗಳೂರಿನಲ್ಲಿ ಬಾಡಿಗೆ ಕಾರನ್ನು ಪಡೆದು ಉಡುಪಿ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಇಬ್ಬರೂ ಕೂಡ ಮನೆ ಬಿಟ್ಟು ಬರುವಾಗ ಹಣವನ್ನು ತಂದಿದ್ದರು. ಆದರೆ ಹಣವೆಲ್ಲಾ ಮುಗಿದ ಮೇಲೆ ಈ ಜೋಡಿ ಇಂತಹ ಕಾರ್ಯಕ್ಕೆ ಮುಂದಾಗಿದ್ದಾರೆ. ಯಶವಂತ್‌ ಪೋಷಕರು ತಮ್ಮ ಮಗನ ಪ್ರೀತಿಯ ವಿಚಾರ ಗೊತ್ತೇ ಇರಲಿಲ್ಲ. ಆತ ತುಂಬಾ ಮುಗ್ದನಾಗಿದ್ದ, ಒಂದೊಮ್ಮೆ ವಿಚಾರ ತಿಳಿಸಿದ್ದರೆ ಮದುವೆ ಮಾಡಿಸುತ್ತಿದ್ದೇವು. ಇನ್ನು ಆತ ಇಂತಹ ಕಾರ್ಯಕ್ಕೆ ಮುಂದಾಗುವ ಮುನ್ನ ಒಂದು ಕರೆಯಾದರೂ ಮಾಡಬೇಕಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ : Petrol and Diesel price down : ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಸಿಎಂ ಬಸವರಾಜ್‌ ಬೊಮ್ಮಾಯಿ ಸುಳಿವು

ಇದನ್ನೂ ಓದಿ : Deep sea boat Tragedy : ಬೈಂದೂರು ಶಿರೂರಿನಲ್ಲಿ ಆಳ ಸಮುದ್ರದ ದೋಣಿ ದುರಂತ : ಐವರು ಮೀನುಗಾರರ ರಕ್ಷಣೆ

Udupi Mandarthi Lover suicide in Car case big twist

Comments are closed.