young woman raped : ತಲೆಗೆ ಗನ್​ಪಾಯಿಂಟ್​ ಇಟ್ಟು ಯುವತಿ ಮೇಲೆ ಮನೆ ಮಾಲೀಕನಿಂದ ಅತ್ಯಾಚಾರ

ಬೆಂಗಳೂರು : young woman raped : ಬಾಡಿಗೆಗೆ ವಾಸವಿದ್ದ ಯುವತಿಯ ಮನೆಗೆ ನುಗ್ಗಿದ ಮನೆಯ ಮಾಲೀಕ ಆಕೆಯ ತಲೆಗೆ ಗನ್​ಪಾಯಿಂಟ್​ ಇಟ್ಟು ಬೆದರಿಸಿ ಅತ್ಯಾಚಾರವೆಸಗಿದ ಘಟನೆಯು ಬೆಂಗಳೂರಿನ ಅಶೋಕ ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ಅತ್ಯಾಚಾರವೆಸಗಲಾಗಿದೆ. ಲೈಂಗಿಕ ದೌರ್ಜನ್ಯ ವೆಸಗಿದ ಮನೆ ಮಾಲೀಕ ಅನಿಲ್​ ರವಿಶಂಕರ್​ ಪ್ರಸಾದ್​ ಮೂಲತಃ ಬಿಹಾರದ ನಿವಾಸಿಯಾಗಿದ್ದು ಈತನನ್ನು ಬಂಧಿಸಿರುವ ಅಶೋಕ ನಗರ ಠಾಣಾ ಪೊಲೀಸರು ಮೂರು ದಿನಗಳ ಕಾಲ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.


ಬೆಂಗಳೂರಿನಲ್ಲಿ ಟೈಲ್ಸ್​ ಉದ್ಯಮ ಮಾಡುತ್ತಿದ್ದ ಆರೋಪಿ ಅನಿಲ್​ ರವಿಶಂಕರ್​ ಪ್ರಸಾದ್​ ಸಂತ್ರಸ್ತೆಗೆ ಮಾರ್ಚ್​ ತಿಂಗಳಿನಿಂದ ಮನೆ ಬಾಡಿಗೆಗೆ ನೀಡಿದ್ದ ಎನ್ನಲಾಗಿದೆ. ಬೆಂಗಳೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಯುವತಿಯ ಮನೆಗೆ ಆಗಾಗ ಸ್ನೇಹಿತರು ಭೇಟಿ ನೀಡುತ್ತಿದ್ದುದು ಅನಿಲ್​ ರವಿಶಂಕರ್​ ಪ್ರಸಾದ್​ಗೆ ಕೋಪ ತರಿಸುತ್ತಿತ್ತು. ಈ ವಿಚಾರವಾಗಿ ಅನೇಕ ಬಾರಿ ಯುವತಿ ಹಾಗೂ ಮನೆ ಮಾಲೀಕನ ನಡುವೆ ಜಗಳ ಕೂಡ ನಡೆದಿತ್ತು. ಒಮ್ಮೆ ಯುವತಿಯ ಮನೆಗೆ ಬಂದಿದ್ದ ಯುವಕ ಒಂದು ದಿನ ಅಲ್ಲಿಯೇ ವಾಸವಿದ್ದ. ಇದರಿಂದ ಕೋಪಗೊಂಡ ಅನಿಲ್​ ಬಾಡಿಗೆ ಮನೆಯಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತೀರಾ ಎಂದು ಆಕ್ರೋಶ ಹೊರ ಹಾಕಿದ್ದ. ಮಾತ್ರವಲ್ಲದೇ ಯುವಕನ ಬೈಕ್​ ಲಾಕ್​ ಮಾಡಿ ಪೊಲೀಸರಿಗೆ ಮಾಹಿತಿ ನೀಡುವುದಾಗಿ ಬೆದರಿಕೆಯನ್ನೂ ಒಡ್ಡಿದ್ದ ಎನ್ನಲಾಗಿದೆ.


ಏಪ್ರಿಲ್​ 11ನೇ ತಾರೀಖಿನಂದು ಯುವತಿಯ ಮನೆಗೆ ನುಗ್ಗಿದ ಮನೆ ಮಾಲೀಕ ಅನಿಲ್​ ನಿನ್ನ ಜೊತೆ ಮಾತನಾಡಬೇಕೆಂದು ಯುವತಿಗೆ ಹೇಳಿದ್ದಾನೆ. ಬಳಿಕ ಆಕೆಯ ತಲೆಗೆ ರಿವಾಲ್ವರ್​ ಇಟ್ಟು ನೀನು ನನ್ನೊಂದಿಗೆ ಸಂಭೋಗಕ್ಕೆ ಸಹಕರಿಸದೇ ಇದ್ದಲ್ಲಿ ಕೊಲೆ ಮಾಡುತ್ತೇನೆಂದು ಬೆದರಿಸಿ ಆಕೆಯ ಮೇಲೆ ಅತ್ಯಾಚಾರಗೈದು ತೆರಳಿದ್ದಾನೆ . ಈ ಘಟನೆ ನಡೆದು ಹಲವು ದಿನಗಳವರೆಗೂ ಸುಮ್ಮನೇ ಇದ್ದ ಯುವತಿಯು ಕೆಲ ದಿನಗಳ ಹಿಂದಷ್ಟೇ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಪೋಷಕರು ಆರೋಪಿ ವಿರುದ್ಧ ದೂರು ನೀಡಿದ್ದು ಅದರಂತೆ ಪೊಲೀಸರು ಭಾನುವಾರ ಮನೆ ಮಾಲೀಕ ಅನಿಲ್​ ರವಿಶಂಕರ್​ ಪ್ರಸಾದ್​ನನ್ನು ಬಂಧಿಸಿದ್ದಾರೆ.

ಇದನ್ನು ಓದಿ : Sunny Leone Autograph : ಅಭಿಮಾನಿ ಎದೆಮೇಲೆ ಸನ್ನಿ ಲಿಯೋನ್ ಆಟೋಗ್ರಾಫ್ : ಮಳೆ ಚಳಿಗೆ ಬಿಸಿ ಏರಿಸಿದ ಮಾದಕ ನಟಿ

ಇದನ್ನೂ ಓದಿ : Mandarthi Lover suicide : ಮಂದಾರ್ತಿ ಬಳಿ ಕಾರಿನಲ್ಲಿ ನವ ಜೋಡಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ : ಉಡುಪಿಯಲ್ಲೇ ಅಂತ್ಯ ಸಂಸ್ಕಾರ

young woman raped at gunpoint in bengaluru

Comments are closed.