ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಮೇಲಿಂದ ಮೇಲೆ ಒಂದೊಂದು ಸಿಹಿ ಸುದ್ದಿ ಕೊಡ್ತಿದ್ದಾರೆ. ಇತ್ತೀಚಿಗಷ್ಟೆ ಬಹುನಿರೀಕ್ಷಿತ ಸಿನಿಮಾ ಕೋಟಿಗೊಬ್ಬ-3 ಚಿತ್ರದ ಹೊಸ ಪೋಸ್ಟರ್ ರಿಲೀಸ್ ಮಾಡಿದ್ದರು. ಇದೀಗ ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾದ ಮೊದಲ ಫಸ್ಟ್‌ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಅಭಿಮಾನಿಗಳು ಪುಲ್ ಫಿದಾ ಆಗಿದ್ದಾರೆ.

ಆರಂಭದಿಂದಲೂ ಅಭಿಮಾನಿಗಳಿಗೆ ಕೂತೂಹಲ ಹುಟ್ಟಿಸುತ್ತಲೇ ಬಂದಿರುವ ಫ್ಯಾಂಟಮ್ ಚಿತ್ರತಂಡ ಸಣ್ಣ ಸಣ್ಣ ವಿಡಿಯೋ ರಿಲೀಸ್ ಮಾಡುವ ಮೂಲಕ ಸದ್ದು ಮಾಡುತ್ತು. ಇದೀಗ ಚಿತ್ರದ ನಾಯಕನ ಫಸ್ಟ್‌ಲುಕ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ.
ನಾಯಕನ ಫಸ್ಟ್‌ಲುಕ್ ಸಿನಿಪ್ರಿಯರಲ್ಲಿರುವ ಕಾತರವನ್ನು ದುಪ್ಪಟ್ಟು ಮಾಡಿದೆ.

ನಿರ್ದೇಶಕ ಅನೂಪ್ ಭಂಡಾರಿ ಟ್ವಿಟ್ಟರ್ ಮೂಲಕ ವಿಕ್ರಾಂತ್ ರೋಣನ ದರ್ಶನ ಮಾಡಿಸಿದ್ದಾರೆ. ರಿಲೀಸ್ ಆಗಿರುವ ಪೋಸ್ಟರ್ ಅದ್ಭುತವಾಗಿ ಮೂಡಿ ಬಂದಿದ್ದು, ಸುದೀಪ್ ಖಡಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.
ಫ್ಯಾಂಟಮ್ ಕೋಟೆಯ ಬಾಗಿಲಲ್ಲಿ ಪಿಸ್ತೂಲ್ ಹಿಡಿದು ಕಿಚ್ಚ ಪೋಸ್ ಕೊಟ್ಟಿದ್ರೆ, ಮೊತ್ತೊಂದು ಕಡೆ ಚಾಟಿ ಇಡಲಾಗಿದೆ. ಫ್ಯಾಂಟಮ್ ಕೋಟೆಯ ಮೇಲೆ ದಿ ವರ್ಲ್ಡ್ ಆಫ್ ಫ್ಯಾಂಟಮ್‍ಗೆ ಸ್ವಾಗತ ಕೋರಲಾಗಿದ್ದು, ಕೆಳಗೆ ಬಾದ್‍ಷಾ ವಿಕ್ರಾಂತ್ ರೋಣ ಆಗಿ ಕಿಚ್ಚ ಸುದೀಪ್”ಎಂದು ಬರೆಯಲಾಗಿದೆ.
ವಿಕ್ರಾಂತ್ ರೋಣ ಹೆಸರಲ್ಲಿ ಎಷ್ಟು ಪವರ್ ಇದಿಯೋ ಆ ಪಾತ್ರ ಕೂಡ ಅಷ್ಟೇ ಪವರ್ ಫುಲ್ ಆಗಿದೆ. ಈತ ಯಾವಾಗ, ಏತಕ್ಕಾಗಿ, ಏನೆಲ್ಲ ಮಾಡ್ತಾನೆ ಅಂತ ಯಾರಿಗೂ ಅರ್ಥವಾಗುವುದಿಲ್ಲ. ಆದರೆ ಅವರನು ಏನೇ ಮಾಡಿದರೂ, ಅದಕ್ಕೊಂದು ಕಾರಣವಿರುತ್ತದೆಯಂತೆ. ಹೀಗೆಂದು ನಿರ್ದೇಶಕ ಅನೂಪ್ ಭಂಡಾರಿ ನಾಯಕನ ಪಾತ್ರದ ಪರಿಚಯ ಮಾಡಿ ಕೊಡುವ ಒಂದು ವಿಡಿಯೋ ಹಂಚಿಕೊಂಡಿದ್ದು, ನಂತರ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ಈ ಹಿಂದೆ ಕಿಚ್ಚ ಸುದೀಪ್, ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಹೈದರಾಬಾದಿನ ಅನ್ನಪೂರ್ಣ ಸ್ಟುಡಿಯೋದಲ್ಲಿ ಆರಂಭವಾದಾಗ, ಅದರ ವಿಡಿಯೋವನ್ನು ಹಂಚಿಕೊಂಡಿದ್ದರು. ಜೊತೆಗೆ ಸಿನಿಮಾದ ಕೆಲವು ವಿಡಿಯೋ ತುಣುಕುಗಳನ್ನೂ ಪೋಸ್ಟ್ ಮಾಡಿದ್ದರು. ಇನ್ನು ಮುಂದೆ ಈ ಚಿತ್ರದಲ್ಲಿನ ಪಾತ್ರಗಳನ್ನು ಹೀಗೆ ಇಂಟ್ರೋ ಪೋಸ್ಟರ್ಗಳ ಮೂಲಕ ಪರಿಚಯಿಸಲಾಗುವುದು ಎಂದಿದ್ದಾರೆ ನಿರ್ದೇಶ ಅನೂಪ್ ಭಂಡಾರಿ.