ಸೋಮವಾರ, ಏಪ್ರಿಲ್ 28, 2025
HomeCinemaKiccha Sudeep : ಬಡ ಮಕ್ಕಳ ಕಷ್ಟಕ್ಕೆ ಮಿಡಿದ ಕಿಚ್ಚ ಸುದೀಪ್ : ಸ್ಕೂಲ್ ಫೀಸ್...

Kiccha Sudeep : ಬಡ ಮಕ್ಕಳ ಕಷ್ಟಕ್ಕೆ ಮಿಡಿದ ಕಿಚ್ಚ ಸುದೀಪ್ : ಸ್ಕೂಲ್ ಫೀಸ್ ಕಟ್ಟಿದ ಮಾಣಿಕ್ಯ

- Advertisement -

ಬಹುಭಾಷಾ ನಟರಾಗಿ, ವಾಯ್ಸ್ ಓವರ್, ಆಂಕ್ಯರಿಂಗ್, ಕ್ರಿಕೇಟ್ ಹೀಗೆ ನಾನಾ ಕ್ಷೇತ್ರಗಳಲ್ಲಿ ಹೆಸರು ಗಳಿಸಿದ ಸುದೀಪ್ ಮಾನವೀಯತೆಯ ಮೂರ್ತಿಯೂ ಹೌದು.‌ ಬಲಗೈಯಲ್ಲಿ ಕೊಟ್ಟಿದ್ದು ಎಡಗೈ ಗೊತ್ತಾಗಬಾರದು ಎಂಬಂತೆ ಬದುಕೋ ಸುದೀಪ್ (Kiccha Sudeep) ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಹಲವರಿಗೆ ನೆರವಿನ ಹಸ್ತ ಚಾಚಿದ್ದಾರೆ. ಈಗ ಪುಟ್ಟ ಕಲಾವಿದನ ಕುಟುಂಬದ ಕಷ್ಟಕ್ಕೆ ಸ್ಪಂದಿಸಿ ಅವರ ಕಣ್ಣೀರು ಒರೆಸಿದ್ದಾರೆ.

ಚಾಮರಾಜಪೇಟೆಯಲ್ಲಿರೋ ರಘು ಚಾರ್ಲಿ ಎಂಬುವವರು ಸಿನಿಮಾ ಕಲಾವಿದರು. ಆದರೆ ಕೊರೋನಾದಿಂದಾಗಿ ರಘುಗೆ ಸಿನಿಮಾ ಚಟುವಟಿಕೆಗಳಲ್ಲಿ ಅವಕಾಶವೇ ಸಿಕ್ಕಿರಲಿಲ್ಲ.‌ಇದರಿಂದ ಸಂಕಷ್ಟಕ್ಕೊಳಗಾದ ರಘು ಚಾರ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೂ ಹಣವಿಲ್ಲದೇ ಪರದಾಡುತ್ತಿದ್ದರು. ರಘು ಚಾರ್ಲಿಗೆ ಇಬ್ಬರೂ ಗಂಡು ಮಕ್ಕಳಿದ್ದು ಇಬ್ಬರೂ ಮಕ್ಕಳು ಚಾಮರಾಜಪೇಟೆಯ ರಾಮಮಂದಿರ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ಆರ್ಥಿಕ‌ ಸಮಸ್ಯೆಯಿಂದ ರಘು ಚಾರ್ಲಿ ಮಕ್ಕಳ ಸ್ಕೂಲ್ ಫೀಸ್ ಸಹ ಕಟ್ಟಲಾಗದೇ ಸಂಕಷ್ಟದಲ್ಲಿದ್ದರು.

ಮಕ್ಕಳು ಸ್ಕೂಲ್ ಫೀಸ್ ಕಟ್ಟದೇ ಇರೋದರಿಂದ ಶಾಲಾ ಆಡಳಿತ ಮಂಡಳಿ ಮಕ್ಕಳನ್ನು ಶಾಲೆಗೆ ಸೇರಿಸಿರಲಿಲ್ಲ. ಹೀಗಾಗಿ ಶಾಲೆ ಆರಂಭವಾಗಿ ತಿಂಗಳು ಕಳೆದರೂ ರಘು ಚಾರ್ಲಿ ಮಕ್ಕಳಾದ ತರುಣ್ ಮತ್ತು ಸುದೀಪ್ ಮನೆಯಲ್ಲೇ ಇದ್ದರು. ಈ ವಿಚಾರ ಸುದೀಪ್ ಗಮನಕ್ಕೆ ಬರುತ್ತಿದ್ದಂತೆ ನಟ ಸುದೀಪ್ ಆ ಪುಟ್ಟ ಮಕ್ಕಳ ಸಹಾಯಕ್ಕೆ ಧಾವಿಸಿದ್ದಾರೆ. ತಮ್ಮ ಕಿಚ್ಚ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಮಕ್ಕಳ ಫೀಸ್ ಕಟ್ಟಲು ಆರ್ಥಿಕ ಸಹಾಯ ನೀಡಿದ್ದಾರೆ. ಕಿಚ್ಚ ಸುದೀಪ್ ಪರವಾಗಿ ಅವರ ಟ್ರಸ್ಟ್ ವ್ಯವಸ್ಥಾಪಕರು ಶಾಲೆಗೆ ತೆರಳಿದ್ದು, ಅಲ್ಲಿನ ಆಡಳಿತ ಮಂಡಳಿ ಭೇಟಿ ಮಾಡಿ ಸುಮಾರು 50 ಸಾವಿರ ರೂಪಾಯಿಗಳಷ್ಟು ಸ್ಕೂಲ್ ಫೀಸ್ ಭರಿಸಿ ಮಕ್ಕಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಸುದೀಪ್ ಈ ಸಹಾಯಕ್ಕೆ ಕಲಾವಿದ ರಘು ಚಾರ್ಲಿ ಧನ್ಯವಾದ ಹೇಳಿದ್ದಾರೆ. ‌ಮಾತ್ರವಲ್ಲ ಪುಟ್ಟ ಪುಟ್ಟ ಮಕ್ಕಳು ಸಹ ಸುದೀಪ್ ಸರ್ ಥ್ಯಾಂಕ್ಸ್ ಎಂದು ಧನ್ಯವಾದ ಸಮರ್ಪಿಸಿದ್ದಾರೆ. ರಘು ಚಾರ್ಲಿ ಸುದೀಪ್ ಅಭಿಮಾನಿಯಾಗಿದ್ದು, ಇದೇ ಕಾರಣಕ್ಕೆ ತಮ್ಮ ಪುತ್ರನಿಗೆ ಸುದೀಪ್ ಎಂದು ಹೆಸರಿಟ್ಟಿದ್ದರಂತೆ. ಈಗ ಸುದೀಪ್ ಈ ಮಕ್ಕಳ ಶಿಕ್ಷಣದ ಕನಸು ನನಸು ಮಾಡಿದ್ದಾರೆ. ಇದೇ ಮೊದಲಲ್ಲ, ಇದಕ್ಕೂ ಮುನ್ನವೂ ಸಾಕಷ್ಟು ವಿದ್ಯಾರ್ಥಿಗಳಿಗೆ ಸುದೀಪ್ ಸಹಾಯ ನೀಡಿದ್ದಾರೆ. ಹಲವೆಡೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಸುದೀಪ್ ಮಕ್ಕಳಿಗಾಗಿ ಸದಾ ಸಹಾಯ ಹಸ್ತ ಚಾಚುತ್ತಲೇ ಇರುತ್ತಾರೆ.

ಇದನ್ನೂ ಓದಿ : Actor Sudeep ವಿರುದ್ಧ ಅವಹೇಳನಕಾರಿ ಮಾತು : ಸೈಬರ್ ಕ್ರೈಂ ಮತ್ತು ಆಯುಕ್ತರಿಗೆ ಭಾಮಾ ಹರೀಶ್ ದೂರು

ಇದನ್ನೂ ಓದಿ : John Abraham Mike : ಚೊಚ್ಚಲ ಮಲಯಾಳಂ “ಮೈಕ್” ಸಿನಿಮಾದಲ್ಲಿ ಜಾನ್ಅಬ್ರಹಾಂ

Kiccha Sudeep Supporting Poor Students Problems, Paying Two Students School fees

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular